Advertisement
ಈಗಾಗಲೇ ರಾಜ್ಯದ 14 ಜಿಲ್ಲೆಗಳ 114 ತಾಲೂಕುಗಳ 2,816 ಗ್ರಾ.ಪಂ.ಗಳಲ್ಲಿ ಪಂಚಾ ಯತ್ ಆರೋಗ್ಯ ಅಮೃತ ಅಭಿಯಾನ ಜಾರಿಯಲ್ಲಿದ್ದು, ಈಗ 2022-23ನೇ ಸಾಲಿನ ಬಜೆಟ್ ಘೋಷಣೆಯನ್ನು ಜಾರಿಗೆ ತರಲು ಮುಂದಾಗಿರುವ ಸರಕಾರ ಉಳಿದ 3,146 ಗ್ರಾ.ಪಂ.ಗಳಿಗೂ ಅಮೃತ ಆರೋಗ್ಯ ಯೋಜನೆ ವಿಸ್ತರಿಸಲು ನಿರ್ಣಯಿಸಿದೆ.
ಹೊರಡಿಸಿದೆ. ಸದ್ಯ ಕೆಲವು ಗ್ರಾ.ಪಂ.ಗಳಲ್ಲಿ ಅಮೃತ ಆರೋಗ್ಯ ಅಭಿಯಾನ ಅನುಷ್ಠಾನಕ್ಕೆ ತರಲಾಗಿದ್ದು, ಮುಂದಿನ ದಿನಗಳಲ್ಲಿ ಎಲ್ಲ ಗ್ರಾ.ಪಂ.ಗಳಿಗೆ ವಿಸ್ತರಿಸಲಾಗುವುದು. ಈ ಬಗ್ಗೆ ಶೀಘ್ರ ಮಾರ್ಗಸೂಚಿ ಹೊರಡಿಸಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 25 ಸಾವಿರ ರೂ.ಗಳ ಕಿಟ್
ಪಂ. ಅಮೃತ ಆರೋಗ್ಯ ಯೋಜನೆ ಯಡಿ ಪ್ರತೀ ಗ್ರಾ.ಪಂ.ಗೆ ತಲಾ 25 ಸಾವಿರ ರೂ. ಮೊತ್ತದ ಆರೋಗ್ಯ ಕಿಟ್ ವಿತರಿಸ ಲಾಗುವುದು. ಅದರಲ್ಲಿ ಮಧುಮೇಹ, ಅಧಿಕ ರಕ್ತದೊತ್ತಡ ಪರೀಕ್ಷೆ ಉಪಕರಣ ಗಳು, ಜ್ವರ, ರಕ್ತ ಪರೀಕ್ಷೆ ಉಪಕರಣಗಳು ಇರುತ್ತವೆ. ಆಶಾ ಕಾರ್ಯಕರ್ತೆಯರ ಮೂಲಕ ಹೆಚ್ಚು ಜನ ಸೇರುವ ಸ್ಥಳಗಳಲ್ಲಿ ತಪಾಸಣೆ ಮತ್ತು ಪರೀಕ್ಷೆ ನಡೆಸಿ, ಜನರಿಗೆ ವೈದ್ಯಕೀಯ ಸಲಹೆ ನೀಡಲಾಗುತ್ತದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.