Advertisement
ಶಂಭೂರಿನ ಮುಂದೆಜೋರ ಪ್ರದೇಶ ದಲ್ಲಿ ಸ.ನಂ. 24/1ಜಿರಲ್ಲಿ ಘಟಕಕ್ಕೆ 1 ಎಕ್ರೆ ನಿವೇಶನವಿದ್ದು, ಸುಮಾರು 7 ಸಾವಿರ ಚದರ ಅಡಿ ವಿಸ್ತೀರ್ಣದಲ್ಲಿ ಘಟಕ ಅನು ಷ್ಠಾನಗೊಂಡಿದೆ. ಘಟಕವು ದಿನನಿತ್ಯ 7 ಟನ್ ಒಣ ತ್ಯಾಜ್ಯವನ್ನು ವಿಂಗಡಿಸಿ ನಿರ್ವಹಣೆಗೊಳಿಸುವ ಸಾಮರ್ಥ್ಯವನ್ನು ಹೊಂದಿದ್ದು, ಬಂಟ್ವಾಳ ತಾಲೂಕಿನ 40 ಹಾಗೂ ಉಳ್ಳಾಲ ತಾಲೂಕಿನ 17 ಗ್ರಾಪಂಗಳು ಈ ಘಟಕದ ವ್ಯಾಪ್ತಿಗೆ ಬರಲಿದ್ದು, ಒಟ್ಟು 57 ಗ್ರಾಪಂಗಳ 99,520 ಮನೆಗಳು ಹಾಗೂ ವಾಣಿಜ್ಯ ಮಳಿಗೆಗಳ ಒಣ ತ್ಯಾಜ್ಯವನ್ನು ನಿರ್ವಹಣೆ ಮಾಡಲಾಗುತ್ತದೆ.
ಈಗಾಗಲೇ ಪ್ರತೀ ಗ್ರಾಪಂಗಳಲ್ಲಿ ಸ್ವತ್ಛವಾಹಿನಿ ವಾಹನಗಳು ತ್ಯಾಜ್ಯವನ್ನು ಸಂಗ್ರಹಿಸುವ ಕಾರ್ಯಾ ಮಾಡುತ್ತಿದ್ದು, ಅವುಗಳನ್ನು ಪಂಚಾಯತ್‌ನ ಸ್ವತ್ಛ ಸಂಕೀರ್ಣ ತ್ಯಾಜ್ಯ ಘಟಕದಲ್ಲಿ ವಿಂಗಡನೆ ಮಾಡಿ ಚೀಲದಲ್ಲಿ ಶೇಖರಿಸಿಡಲಾಗುತ್ತಿದೆ. ಮುಂದೆ ಅವುಗಳೆಲ್ಲವನ್ನೂ ಎರಡೂ ತಾಲೂಕುಗಳಿಗೆ ಹೊಂದಾಣಿಕೆ ಮಾಡಿ ರೂಟ್ ಮ್ಯಾಪ್ ಸಿದ್ಧಪಡಿಸಿ ಎಂಆರ್‌ಎಫ್ ಘಟಕಕ್ಕೆ ಸಾಗಿಸುವ ಕಾರ್ಯ ನಡೆಯಲಿದೆ. ಬಳಿಕ ಎಂಆರ್‌ಎಫ್ ಘಟಕದಲ್ಲಿ ಯಂತ್ರಗಳ ಮೂಲಕ ಕಣವಾಗಿ ಪರಿವರ್ತಿಸಿ ಅದನ್ನು ವಿವಿಧ ವಿಭಾಗಗಳಲ್ಲಿ ಪ್ರತ್ಯೇಕಿಸಿ ಮರು ಉತ್ಪಾದನೆ, ಸಿಮೆಂಟ್ ಉತ್ಪಾದನ ಘಟಕಗಳಿಗೆ ಇಂಧನವಾಗಿ ಮಾರಾಟ ಮಾಡಲಾಗುತ್ತದೆ. ಘಟಕದ ನಿರ್ವಹಣೆಗಾಗಿ ತಾಂತ್ರಿಕ ಮತ್ತು ಆಡಳಿತ ಸಮಿತಿ ರಚನೆಗೊಂಡಿರುತ್ತದೆ.
Related Articles
Advertisement
ಯಂತ್ರೋಪಕರಣ ವ್ಯವಸ್ಥೆಎಂಆರ್ಎಫ್ ಘಟಕದ ಬಹುತೇಕ ಕಾಮಗಾರಿ ಪೂರ್ಣಗೊಂಡಿದ್ದು, ಯಂತ್ರೋಪಕರಣಗಳ ಅನುಷ್ಠಾನ ಕಾರ್ಯ ನಡೆಯುತ್ತಿದೆ. ನಿರೀಕ್ಷಿತವಾಗಿ ಕೆಲಸ ಪೂರ್ಣಗೊಂಡರೆ ಮುಂದಿನ ಒಂದು ತಿಂಗಳೊಳಗೆ ಘಟಕ ಕಾರ್ಯಾರಂಭಗೊಳ್ಳಲಿದೆ.
– ಸಚಿನ್ ಕುಮಾರ್, ಕಾರ್ಯನಿರ್ವಹಣಾಧಿಕಾರಿಗಳು, ತಾ.ಪಂ. ಬಂಟ್ವಾಳ ಅನುದಾನ ವಿಂಗಡಣೆ ಹೀಗೆ
ದ.ಕ.ಜಿ.ಪಂ.ನ ಸ್ವತ್ಛ ಭಾರತ್ ಮಿಷನ್(ಗ್ರಾಮೀಣ) ವತಿಯಿಂದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯು ಈ ಎಂಆರ್‌ಎಫ್ ಘಟಕವನ್ನು ಅನುಷ್ಠಾನಗೊಳಿಸಿದ್ದು, ಇದರ ಒಟ್ಟು ಅನುಷ್ಠಾನ ವೆಚ್ಚ 1.95 ಕೋ.ರೂ. ಅದರಲ್ಲಿ 1.46 ಕೋ.ರೂ.ಸಿವಿಲ್ ಹಾಗೂ 48.50 ಲಕ್ಷ ರೂ. ಯಂತ್ರೋಪಕರಣಗಳಿಗೆ ಬಳಕೆಯಾಗಲಿದೆ. 98 ಲಕ್ಷ ರೂ.ಗಳನ್ನು ಗ್ರಾ.ಪಂ.ಗಳಿಂದ, 32 ಲಕ್ಷ ರೂ. ಸ್ವತ್ಛ ಭಾರತ್ ಮಿಷನ್(ಗ್ರಾಮೀಣ), 35 ಲಕ್ಷ ರೂ. ತಾ.ಪಂ.ಅನುದಾನ ಹಾಗೂ 30 ಲಕ್ಷ ರೂ.ಜಿ.ಪಂ. ಅನುದಾನವನ್ನು ಬಳಸಿಕೊಳ್ಳಲಾಗಿದೆ. ಪ್ರತೀ ಗ್ರಾ.ಪಂ.ಗಳಿಂದ ತ್ಯಾಜ್ಯ ಸಂಗ್ರಹಕ್ಕಾಗಿ ವಾಹನದ ಆವಶ್ಯಕತೆ ಇದ್ದು, ಅದಕ್ಕಾಗಿ ಎಂಸಿಎಫ್‌ನಿಂದ 24 ಲಕ್ಷ ರೂ.ಗಳ ಸಿಎಸ್‌ಆರ್ ಅನುದಾನ ಬಳಸಿಕೊಳ್ಳಲಾಗುತ್ತಿದೆ. -ಕಿರಣ್ ಸರಪಾಡಿ