Advertisement
ಬಲ್ಗೇರಿಯಾದ ಸೋಫಿಯಾದಲ್ಲಿ ನಡೆಯುತ್ತಿರುವ ಈ ಕೂಟದಲ್ಲಿ ಸತತ ಎರಡನೇ ಚಿನ್ನದ ಕಣ್ಣೀಟ್ಟಿರುವ ಅಮಿತ್ (49 ಕೆಜಿ) ರವಿವಾರ ನಡೆಯಲಿರುವ ಪಂದ್ಯದಲ್ಲಿ ಉಕ್ರೇನಿನ ನಜಾರ್ ಕುರೊಟಿಯನ್ ಅವರನ್ನು ಎದುರಿಸಲಿದ್ದಾರೆ. ಈ ಪಂದ್ಯದಲ್ಲಿ ಜಯಿಸಿದರೆ ಯೂರೋಪಿಯನ್ ಕೂಟದಲ್ಲಿ ಸತತ 2ನೇ ಪದಕ ಅಮಿತ್ ಪಾಲಾಗುವುದು ಖಚಿತ.
ಶುಕ್ರವಾರದ ಪಂದ್ಯದಲ್ಲಿ ವಿಜೇತ ಗೌರವ್ ಬಿಧುರಿ (56 ಕೆಜಿ), ಬಲ್ಗೇರಿಯಾದ ಆಟಗಾರ ಇಮಾನ್ಯುಯೆಲ್ ಬೊಗೇವ್ ಅವರನ್ನು ಎದುರಿಸಲಿದ್ದಾರೆ. 52 ಕೆಜಿ ವಿಭಾಗದ ಆರಂಭಿಕ ಬೌಟ್‌ನಲ್ಲಿ ಗೌರವ್ ಸೋಲಂಕಿ ಅಮೆರಿಕದ ಅಬ್ರಹಾಂ ಪೆರೆಝ್ ವಿರುದ್ಧ ಸೆಣೆಸಲಿದ್ದಾರೆ. 60 ಕೆಜಿ ವಿಭಾಗದ ಆರಂಭಿಕ ಸುತ್ತಿನಲ್ಲಿ ಅಂಕುಶ್ ದಹಿಯಾ ಅಜರ್‌ಬೈಜಾನ್‌ನ ಸರ್ಖನ್ ಅಲೀವ್ ಹಾಗೂ ಮನ್‌ದೀಪ್ ಜಂಗ್ರಾ ಉಕ್ರೇನಿನ ವಿಕ್ಟರ್ ಪೆಟ್ರೋವ್ ವಿರುದ್ಧ ಆಡಲಿದ್ದಾರೆ.
Related Articles
ವನಿತಾ ವಿಭಾಗದಲ್ಲಿ ಕಳೆದ ಆವೃತ್ತಿಯ ಬೆಳ್ಳಿ ಪದಕ ವಿಜೇತೆ ಮೀನಾ ಕುಮಾರಿ ದೇವಿ (54 ಕೆಜಿ) ಅವರಿಗೆ ಕ್ವಾರ್ಟರ್ ಫೈನಲ್‌ಗೆ ನೇರಪ್ರವೇಶ ದೊರಕಿದೆ. ಸೋನಿಯಾ ಲಾಥರ್ (57 ಕೆಜಿ) ಮೊದಲ ಸುತ್ತಿನಲ್ಲಿ ಸರ್ಬಿಯಾದ ಜೆಲೆನಾ ಝೆಕಿಕ್ ಅವರ ವಿರುದ್ಧ ಆಡಿದರೆ, 51 ಕೆಜಿ ವಿಭಾಗದಲ್ಲಿ ಸ್ಪರ್ಧಿಸುತ್ತಿರುವ ಪಿಂಕಿ ರಾಣಿ ಫಿನಿಪಿನೊ ಐರಿಶ್ ಮ್ಯಾಗ್ನೊ ಅವರನ್ನು ಎದುರಿಸಲಿದ್ದಾರೆ.
Advertisement