Advertisement
ಜಾರ್ಖಂಡ್‌ನ ಬಾಘಮಾರಾದಲ್ಲಿ ಚುನಾವಣಾ ರ‍್ಯಾಲಿ ಉದ್ದೇಶಿಸಿ ಮಾತನಾಡಿ, “ಭೂಮಿಯನ್ನು ಕಬಳಿಸುವುದು ವಕ್ಫ್ ಮಂಡಳಿಗೆ ಅಭ್ಯಾಸವಾಗಿದೆ. ಕರ್ನಾಟಕದಲ್ಲಿ ದೇವಾಲಯದ ಭೂಮಿ, ರೈತರ ಕೃಷಿ ಭೂಮಿ, ಗ್ರಾಮಸ್ಥರ ಭೂಮಿಯ ವಕ್ಫ್ ಮಂಡಳಿ ವಶಪಡಿಸಿಕೊಂಡಿದೆ. ಹೀಗಿದ್ದಾಗ ವಕ್ಫ್ ಮಂಡಳಿಯಲ್ಲಿ ಬದಲಾವಣೆ ಆಗಬೇಕೇ? ಬೇಡವೇ ನೀವೇ ಹೇಳಿ ಎಂದು ನೆರೆದಿದ್ದ ಜನರ ಪ್ರಶ್ನಿಸಿದರು.
ಜಾರ್ಖಂಡ್‌ನಲ್ಲಿ ಜೆಎಂಎಂ ನೇತೃತ್ವದ ಮೈತ್ರಿ ಪಕ್ಷಗಳು ಅಕ್ರಮ ವಲಸಿಗರ ವೋಟ್ ಬ್ಯಾಂಕ್ ಆಗಿಸಿದೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಅಕ್ರಮ ವಲಸಿಗರ ಮತ್ತೆ ಬಾಂಗ್ಲಾದೇಶಕ್ಕೆ ಕಳಿಸುವ ವ್ಯವಸ್ಥೆ ಮಾಡುತ್ತೇವೆ. ಯಾರು ಕೂಡ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿ ತಡೆಯಲು ಸಾಧ್ಯವಿಲ್ಲ. ಜಾರ್ಖಂಡ್‌ಗೆ ಬರುವ ವಲಸಿಗರನ್ನೂ ತಡೆಯಲಾಗುವುದು. ಜೆಎಂಎಂ ಹಾಗೂ ಕಾಂಗ್ರೆಸ್‌ನ ರಾಹುಲ್ ಗಾಂಧಿ ಜಾತಿ ಆಧಾರದಲ್ಲಿ ದೇಶವನ್ನು ವಿಭಜಿಸುತ್ತಿದೆ. ಆದರೆ ನರೇಂದ್ರ ಮೋದಿಯವರು ಬಡವರು, ರೈತರು, ಯುವಕರು ಹಾಗೂ ಮಹಿಳೆಯರ, ಜನರ ಕಲ್ಯಾಣಕ್ಕಾಗಿ ಶ್ರಮಿಸುತ್ತಿದೆ ಎಂದರು.