Advertisement
ಶನಿವಾರದ ಸಭೆಯಲ್ಲಿ ಮುಂದಿನ ವರ್ಷಾರಂಭದಲ್ಲಿ ನಡೆಸಲು ಉದ್ದೇಶಿಸಿದ್ದ ಆಂತರಿಕ ಚುನಾವಣೆಯನ್ನು ಮುಂದೂಡುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಮೂಲಕ 2019ರ ಲೋಕಸಭೆ ಚುನಾ ವಣೆಯನ್ನೂ ಶಾ ನೇತೃತ್ವದಲ್ಲೇ ಎದುರಿಸಲು ತೀರ್ಮಾನ ತೆಗೆದುಕೊಳ್ಳಲಾಗಿದೆ. ಜತೆಗೆ ಈ ವರ್ಷಾಂತ್ಯದಲ್ಲಿ ನಡೆಯುವ ನಾಲ್ಕು ರಾಜ್ಯಗಳ ಚುನಾವಣೆಗೆ ತಂತ್ರಗಾರಿಕೆ ಮತ್ತು ತೆಲಂಗಾಣ ಚುನಾವಣೆ ಮೇಲೂ ಹೆಚ್ಚಿನ ಗಮನಹರಿಸಲು ನಿರ್ಧರಿಸಲಾಗಿದೆ.
ಕಾರ್ಯಕಾರಿಣಿಯನ್ನು ಉದ್ದೇಶಿಸಿ ಮಾತನಾಡಿದ ಅಮಿತ್ ಶಾ, ವಿಪಕ್ಷಗಳ ಮಹಾ ಘಟಬಂಧನ್ ಕೇವಲ ಕಣ್ಣೊರೆಸುವ ತಂತ್ರ ಮತ್ತು ಭ್ರಮಾಕೂಟ. ನಾವು 2014ರಲ್ಲಿ ಗೆದ್ದಿದ್ದ ಸ್ಥಾನಗಳಿಗಿಂತಲೂ ಈ ಬಾರಿ ಹೆಚ್ಚು ಗೆಲ್ಲುತ್ತೇವೆ ಎಂದಿದ್ದಾರೆ. ಈ ಮಧ್ಯೆ ಬಿಜೆಪಿ ಮೇಕ್ ಇನ್ ಇಂಡಿಯಾ ಬಗ್ಗೆ ಯೋಚನೆ ಮಾಡುತ್ತಿದ್ದರೆ, ಕಾಂಗ್ರೆಸ್ ಬ್ರೇಕಿಂಗ್ ಇಂಡಿಯಾಗೆ ಪ್ರಯತ್ನಿಸು ತ್ತಿದೆ ಎಂದೂ ಪ್ರಮುಖ ವಿಪಕ್ಷದ ವಿರುದ್ಧ ಕಿಡಿಕಾರಿದ್ದಾರೆ. ಅಮಿತ್ ಶಾ ನೇತೃತ್ವದಲ್ಲಿ 2019ರ ಚುನಾವಣೆ ಎದುರಿಸಲು ನಿರ್ಧಾರ
ರವಿವಾರ ಪ್ರಧಾನಿ ನರೇಂದ್ರ ಮೋದಿ ಅವರಿಂದ ಭಾಷಣ