Advertisement

PM ಮೋದಿ ಉದ್ಘಾಟಿಸಿದ್ದೆಲ್ಲ ಆಪ್‌ನ ಜಂಟಿ ಯೋಜನೆಗಳು: ಕೇಜ್ರಿವಾಲ್‌

12:58 AM Jan 06, 2025 | Team Udayavani |

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ದಿಲ್ಲಿಯಲ್ಲಿ ಉದ್ಘಾಟಿಸಿದ ಎಲ್ಲ ಯೋಜನೆಗಳು ಕೇಂದ್ರ ಹಾಗೂ ದಿಲ್ಲಿ ಸರಕಾರ‌ದ ಜಂಟಿ ಯೋಜನೆಗಳು ಎಂದು ಆಪ್‌ ಸಂಚಾಲಕ ಅರವಿಂದ ಕೇಜ್ರಿವಾಲ್‌ ಹೇಳಿದ್ದಾರೆ.

Advertisement

ದಿಲ್ಲಿಯಲ್ಲಿರುವ ಆಪ್‌ ಸರಕಾರ‌ ಏನೂ ಮಾಡಿಲ್ಲ ಎಂದು ಹೇಳುತ್ತಿರುವ ಜನರಿಗೆ ರವಿವಾರ ಉದ್ಘಾಟನೆಯಾದ ಯೋಜನೆಗಳೇ ಉತ್ತರ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ. “ಎಲ್ಲರಿಗಿಂತ ಹೆಚ್ಚು ಅಭಿವೃದ್ಧಿಯನ್ನು ಹೇಗೆ ಮಾಡಬಹುದು ಎಂಬುದಕ್ಕೆ 10 ವರ್ಷಗಳಲ್ಲಿ ನಮ್ಮ ಸರಕಾರ‌ ಕೈಗೊಂಡ ಕಾರ್ಯಕ್ರಮಗಳೇ ಸಾಕ್ಷಿ’ ಎಂದರು.

ಮೋದಿ ವಿರುದ್ಧ ವಾಗ್ಧಾಳಿ: ಪ್ರಧಾನಿ ಮೋದಿ ಅವರು ದಿಲ್ಲಿಯಲ್ಲಿ ಯಾವುದೇ ಕಾರ್ಯಕ್ರಮಗಳಲ್ಲಿ ಭಾಗಿ ಯಾದ ಸಮಯದಲ್ಲಿ ಆಪ್‌ ಸರಕಾರ‌ವನ್ನು ಬೈಯು ವುದು ಬಿಟ್ಟು ಬೇರೇನೂ ಮಾಡುವುದಿಲ್ಲ. ಜನರಿಂದ ಆಯ್ಕೆ ಯಾಗಿರುವ ಸರಕಾರ‌ವನ್ನು ತೆಗಳುವುದು ಅವ ರಿಗೆ ಶೋಭೆ ತರುವುದಿಲ್ಲ. 2020ರಲ್ಲಿ ಕೇಂದ್ರ ಸರಕಾರ‌ ನೀಡಿದ್ದ ಭರವಸೆಗಳೇ ಇನ್ನೂ ಪೂರ್ಣವಾ ಗಿಲ್ಲ. ಜನ ಇದಕ್ಕಾಗಿ ಕಾಯುತ್ತಿದ್ದಾರೆ ಎಂದು ಹೇಳಿದರು.

ಭಾಷಣದಲ್ಲಿ 30 ನಿಮಿಷ ತೆಗಳುವುದರಲ್ಲೇ ಮೋದಿ ಕಳೆದರು: ಕೇಜ್ರಿವಾಲ್‌
ಪ್ರಧಾನಿ ಮೋದಿ ಅವರು ರವಿವಾರ ಮಾಡಿದ ಭಾಷಣದಲ್ಲಿ ಆಪ್‌ ಸರಕಾರ‌ವನ್ನು ತೆಗಳುವುದಕ್ಕೋಸ್ಕರವೇ 30 ನಿಮಿಷಗಳನ್ನು ಬಳಕೆ ಮಾಡಿಕೊಂಡರು. ನನ್ನನ್ನು ಬೈಯುವ ಮೂಲಕ ಮೋದಿ ಅವರು ಬಿಜೆಪಿಗೆ ದಿಲ್ಲಿಯಲ್ಲಿ ಮತ ಕೇಳುತ್ತಿದ್ದಾರೆ ಎಂದು ಕೇಜ್ರಿವಾಲ್‌ ಟೀಕಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next