Advertisement

ಜ್ಞಾನದ ಮೂಲಕವೇ ವಿಶ್ವ ಮಾನ್ಯರಾದ ಅಂಬೇಡ್ಕರ್‌

01:03 PM May 22, 2017 | |

ಹುಣಸೂರು: ತಾಲೂಕಿನ ಹರಿಜನ ಕಾಲೋನಿಯಲ್ಲಿ ಶಾಸಕ ಎಚ್‌.ಪಿ.ಮಂಜುನಾಥ್‌ ಅಂಬೇಡ್ಕರ್‌ ಪುತ್ಥಳಿಯ ಅನಾವರಣಗೊಳಿಸಿದರು. ನಂತರ ದೇವಸ್ಥಾನದ ಆವರಣದಲ್ಲಿ ಯುವಕ ಸಂಘದವರು ಆಯೋಜಿಸಿದ್ದ ಅಂಬೇಡ್ಕರ್‌ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಅಂಬೇಡ್ಕರ್‌ ಅಸಮಾನ್ಯವ್ಯಕ್ತಿಯಾಗಿದ್ದು, ತಮ್ಮ ಜ್ಞಾನದ ಮೂಲಕವೇ ವಿಶ್ವ ಮಾನ್ಯರಾದರು.

Advertisement

ಇಂತಹ ಮಹನೀಯನ ಪುತ್ಥಳಿ ಸ್ಥಾಪಿಸಿದರೆ ಸಾಲದು ಇದರೊಟ್ಟಿಗೆ ಅವರ ಹೋರಾಟದ ಬದುಕು, ಸಿದ್ಧಾಂತ, ಶಿಕ್ಷಣ ಪ್ರೀತಿ ಬಗ್ಗೆ ತಿಳಿಯಬೇಕು ಎಂದರು. ಅಂಬೇಡ್ಕರರನ್ನು ಒಂದು ಜಾತಿಗೆ ಸೀಮಿತಗೊಳಿಸದೆ ಅವರ ಜ್ಞಾನದ ಸಂಪತ್ತನ್ನು ಹಾಗೂ ಅವರ ಹೋರಾಟ ಹಾಗೂ ಸಂವಿಧಾನ ರಚನೆಯಿಂದ ದೊರಕಿರುವ ಮೀಸಲಾತಿ ಸೌಲಭ್ಯವನ್ನು ಪಡೆದಿರುವ ಎಲ್ಲರೂ ಇವರ ಜಯಂತಿ ಆಚರಿಸುವ ಮೂಲಕ ಗೌರವ ಸೂಚಿಸಬೇಕೆಂದು ಆಶಿಸಿದರು.

ದೇವಸ್ಥಾನಕ್ಕೆ ನೆರವು: ಗ್ರಾಮದ ಹರಿಜನ ಬಡಾವಣೆಯ ಮಾರಮ್ಮ ದೇವಸ್ಥಾನ ಜೀರ್ಣೋದ್ಧಾರಕ್ಕೆ ಅನೇಕ ವರ್ಷಗಳಿಂದ ಕೇಳಿದ್ದಿರಿ, ಆದರೆ ಇಲ್ಲಿಯವರೆವಿಗೂ ದೇವಾಲಯದ ಕಟ್ಟಡದ ನಕ್ಷೆ ನೀಡಿಲ್ಲ, ಇದನ್ನು ತಕ್ಷಣ ನೀಡಿದಲ್ಲಿ ದೇವಾಲಯ ನಿರ್ಮಾಣಕ್ಕೆ ನೆರವು ನೀಡುತ್ತೇನೆ. ಗ್ರಾಮಸ್ಥರು ಒಟ್ಟಾಗಿ ಕುಳಿತು ಚರ್ಚಿಸಿ ಎಂದರು.

ಹನಗೋಡು ಆಸ್ಪತ್ರೆ ವೈದ್ಯ ಡಾ.ಜೋಗೇಂದ್ರನಾಥ್‌ ಮಾತನಾಡಿ, ಡಾ.ಅಂಬೇಡ್ಕರ್‌ ಅವರ ಜಯಂತಿಯನ್ನು ವಿಶ್ವ ಸಂಸ್ಥೆಯೇ ಆಚರಿಸುತ್ತಿದೆ. ಇಂಥ ಮಹಾನ್‌ ವ್ಯಕ್ತಿಯ ಜಯಂತಿಯನ್ನು ದಲಿತರಲ್ಲಿ ಕೇವಲ ಹರಿಜನರು ಆಚರಿಸುತ್ತಿರುವುದು ನೋವಿನ ಸಂಗತಿ, ಇವರು ದೊರಕಿಸಿಕೊಟ್ಟ ಮೀಸಲಾತಿಯಿಂದ ಅಧಿಕಾರ ಅನುಭವಿಸುತ್ತಿರುವ ಹಿಂದುಳಿದವರ್ಗ, ಅಲ್ಪ ಸಂಖ್ಯಾತರೂ ಸೇರಿದಂತೆ ಎಲ್ಲರೂ ಸೇರಿ ಆಚರಿಸುವುದು ಅವರಿಗೆ ನೀಡುವ ದೊಡ್ಡ ಗೌರವ ಎಂದು ತಿಳಿಸಿದರು.

ಕಾಂಗ್ರೆಸ್‌ ಮುಖಂಡ ಹರಿಹರ ಆನಂದಸ್ವಾಮಿ ಮಾತನಾಡಿ, ಬುದ್ಧ, ಬಸವ, ಅಂಬೇಡ್ಕರ್‌ ರಂತಹ ಕ್ರಾಂತಿಕಾರಿ ಜ್ಞಾನಿಗಳನ್ನು ಜಾತಿ ಹೆಸರಿಲ್ಲಿ ಗುರುತಿಸುವುದು ಅಪಾಯಕಾರಿ, ಶೋಷಿತರಿಗೆ ಸ್ವಾಭಿಮಾನದ ಬದುಕನ್ನು ಕಟ್ಟಿಕೊಟ್ಟ ಅಂಬೇಡ್ಕರರು ದೇಶದ ಸ್ವತ್ತು, ಇಂತಹ ಸಾಧಕ ವ್ಯಕ್ತಿಯ ಜೀವನ ಚರಿತ್ರೆಯನ್ನು ಎಲ್ಲರೂ ಓದಿ ಅರಿಯಬೇಕು, ಶಿಕ್ಷಣಕ್ಕೆ ಹೆಚ್ಚು ಮಹತ್ವ ನೀಡಬೇಕು ಎಂದು ಹೇಳಿದರು.

Advertisement

ಗ್ರಾಪಂ ಅಧ್ಯಕ್ಷ ಮಧು ಕಾಲೋನಿಯ ದೇವಾಲಯ ಅಭಿವೃದ್ಧಿಗೆ ಗ್ರಾಪಂ ಸದಸ್ಯರುಗಳು ವೈಯಕ್ತಿಕವಾಗಿ 2 ಲಕ್ಷರೂ ನೆರವು ನೀಡುವುದಾಗಿ ಘೋಷಿಸಿದರು. ಗ್ರಾಪಂ ಸದಸ್ಯ ಚನ್ನಯ್ಯ, ಗ್ರಾಮದಲ್ಲಿ ಅನೇಕರಿಗೆ ಸಾಗುವಳಿ ಸಿಕ್ಕಿಲ್ಲ, ಸಿಕ್ಕಿದವರ ಭೂಮಿ ದುರಸ್ತಾಗಿಲ್ಲ, ಇನ್ನು ವಿವಿಧ ಯೋಜನೆಯಡಿ ಮನೆ ಮಂಜೂರಾಗಿದ್ದು, ಮರಳು ಸಮಸ್ಯೆ ಇದ್ದು ನದಿಯಿಂದ ಗಾಡಿಯಲ್ಲಿ ಮರಳು ಸಾಗಿಸಲು ಅವಕಾಶ ಕಲ್ಪಿಸಬೇಕೆಂದು ಕೋರಿದರು.

ಗ್ರಾಪಂ ಸದಸ್ಯ ಇಮಿ¤ಯಾಜ್‌ ಪಾಷಾ, ಸದಸ್ಯೆ ಮಂಗಳ, ತಾಲೂಕು ಕಾಂಗ್ರೆಸ್‌ ಅಧ್ಯಕ್ಷ ನಾರಾಯಣ್‌, ಮಾಜಿ ಅಧ್ಯಕ್ಷ ಬಸವರಾಜು, ಅಂಬೇಡ್ಕರ್‌ ಸಂಘದ ಅಧ್ಯಕ್ಷ ಕಿಟ್ಟಿ, ಸ್ವಾಮಿ, ಸುರೇಶ ಸೇರಿದಂತೆ ಕಾಲೋನಿಯ ಯಜಮಾನರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next