Advertisement
ಹೀಗಾಗಿ, ಜಮ್ಮು ಮತ್ತು ಕಾಶ್ಮೀರದ ಭಗವತಿ ನಗರದಲ್ಲಿ ಎಲ್ಲೆಲ್ಲೋ “ಭಂ ಭಂ ಭೋಲೆ’ ಮತ್ತು “ಜೈ ಬರ್ಫಾನಿ ಬಾಬಾ ಕಿ ಜೈ’ ಎಂಬ ಘೋಷಣೆಗಳು ಮೊಳಗಲಾರಂಭಿಸಿವೆ.
Related Articles
Advertisement
ಹೆದರಿಕೆಯೇ ಇಲ್ಲ:ದೇಶದ ವಿವಿಧ ಭಾಗಗಳಿಂದ ಈಗಾಗಲೇ ಭಕ್ತಾದಿಗಳು ಆಗಮಿಸುತ್ತಿದ್ದಾರೆ. “ನಮಗೆ ಯಾವ ಹೆದರಿಕೆಯೂ ಇಲ್ಲ. ಬಾಬಾ ಅಮರನಾಥ್ ಜಿ ನಮ್ಮ ರಕ್ಷಣೆಗೆ ಇದ್ದಾರೆ’ ಎಂದು ಲಕ್ನೋದ ವಿಜಯ ಕುಮಾರ್ ಹೇಳಿದ್ದಾರೆ. ಅವರು 12 ಮಂದಿ ಸದಸ್ಯರ ತಂಡದ ಜತೆಗೆ ಆಗಮಿಸಿದ್ದು, ಮೊದಲ ತಂಡದಲ್ಲಿಯೇ ದೇಗುಲದತ್ತ ಪ್ರಯಾಣ ಶುರು ಮಾಡಲಿದ್ದಾರೆ. ಬೆಂಗಳೂರಿನ ಉಪ್ಮಿತಾ ಎಂಬುವರು ಮಾತನಾಡಿ “ಬೇಸ್ ಕ್ಯಾಂಪ್‌ಗೆ ಬರುತ್ತಲೇ ಹೆದರಿಕೆ ಮಾಯವಾಯಿತು. ಎಲ್ಲ ವ್ಯವಸ್ಥೆಯೂ ಚೆನ್ನಾಗಿಯೇ ಇದೆ’ ಎಂದು ಹೇಳಿದ್ದಾರೆ. 400 ಮಂದಿ ಸಾಧುಗಳು:
ದೇಶದ ವಿವಿಧ ಭಾಗಗಳಿಂದ 400 ಮಂದಿ ಸಾಧುಗಳೂ ಕೂಡ ಮೊದಲ ತಂಡದಲ್ಲಿದ್ದಾರೆ. ಸದ್ಯ ಒಟ್ಟು 3 ಸಾವಿರ ಮಂದಿ ಆಗಮಿಸಿದ್ದು, ನೋಂದಣಿ ಪ್ರಕ್ರಿಯೆ ಪೂರೈಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇಬ್ಬರು ಸಾವು:
ಇನ್ನೊಂದೆಡೆ, ಕುಪ್ವಾರ ಜಿಲ್ಲೆಯಲ್ಲಿ ಇಬ್ಬರು ಉಗ್ರರನ್ನು ಗುಂಡು ಹಾರಿಸಿ ಕೊಲ್ಲಲಾಗಿದೆ. ಎಲ್‌ಒಸಿಯ ಬಳಿ ನಡೆದ ಗುಂಡಿನ ಚಕಮಕಿಯಲ್ಲಿ ಅವರು ಅಸುನೀಗಿದ್ದಾರೆ. 400 ಸಾಧುಗಳು
3 ಸಾವಿರ ಮಂದಿ- ಇದುವರೆಗೆ ಬಂದವರು
ಎರಡು ದಾರಿಗಳು
ಪೆಹಲ್‌ಗಾಂವ್‌ನ ನುನ್‌ವಾನ್ ಮೂಲಕ 48 ಕಿಮೀ
ಗಂಡೆರ್‌ಬಾಲ್ ಮೂಲಕ 14 ಕಿಮೀ (ಹತ್ತಿರದ ದಾರಿ)