Advertisement

Chikkamagaluru: ದತ್ತಜಯಂತಿ ಪ್ರಯುಕ್ತ ಅನುಸೂಯ ಜಯಂತಿ ಸಂಕೀರ್ತಾನ ಯಾತ್ರೆ

01:28 PM Dec 12, 2024 | Team Udayavani |

ಚಿಕ್ಕಮಗಳೂರು: ವಿಶ್ವಹಿಂದೂ ಪರಿಷತ್, ಭಜರಂಗದಳ ವತಿಯಿಂದ ಹಮ್ಮಿಕೊಂಡಿರುವ ದತ್ತಜಯಂತಿ ಅಂಗವಾಗಿ ಮಹಿಳೆಯರಿಂದ ಆಯೋಜಿಸಿದ್ದ ಅನುಸೂಯ ಜಯಂತಿ ಸಂಕೀರ್ತಾನ ಯಾತ್ರೆ ಚಿಕ್ಕಮಗಳೂರು ನಗರದಲ್ಲಿ ನಡೆಯಿತು.

Advertisement

ಗುರುವಾರ (ಡಿ.12) ನಗರದ ಬೋಳ ರಾಮೇಶ್ವರ ದೇವಸ್ಥಾನ ಆವರಣದಲ್ಲಿ ಸಂಕೀರ್ತಾನ ಯಾತ್ರೆ ಧಾರ್ಮಿಕ ಸಭೆಯ ಬಳಿಕ ಸಾವಿರಾರು ಮಹಿಳೆಯರು ಕೆ.ಎಂ. ರಸ್ತೆ ಮೂಲಕ ತೊಗರಿ ಹಂಕಲ್ ಸರ್ಕಲ್, ಮಲ್ಲಂದೂರು ವೃತ್ತ, ವಿಜಯಪುರ ಮುಖ್ಯರಸ್ತೆ ಮೂಲಕ ಹಾದು ಹೋದ ಮೆರವಣಿಗೆ ಪಾಲಿಟೆಕ್ನಿಕ್ ಕಾಲೇಜ್ ಆವರಣದವರೆಗೂ ಸಾಗಿತು.

ಪಾಲಿಟೆಕ್ನಿಕ್ ಕಾಲೇಜು ಆವರಣದಿಂದ ಸಾವಿರಾರು ಮಹಿಳೆಯರು ಬಸ್ ಹಾಗೂ ಕಾರುಗಳ ಮೂಲಕ ದತ್ತಪೀಠಕ್ಕೆ ತೆರಳಿದರು.

ಸಂಕೀರ್ತಾನ ಯಾತ್ರೆ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ನಗರ ಸೇರಿದಂತೆ ದತ್ತಪೀಠದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು. ಸಂಕೀರ್ತಾನ ಯಾತ್ರೆಯಲ್ಲಿ ರಾಜ್ಯದ ವಿವಿಧ ಮೂಲೆಗಳಿಂದ ಆಗಮಿಸಿದ ಮಹಿಳೆಯರು ಸರಥಿ ಸಾಲಿನಲ್ಲಿ ಸಾಗುತ್ತಿದ್ದರೆ ಎರಡು ಬದಿಗಳಲ್ಲಿ ಹೆಜ್ಜೆಗೊಬ್ಬರಂತೆ ಪೊಲೀಸರನ್ನು ನಿಯೋಜಿಸಲಾಗಿತ್ತು.

Advertisement

ಇದೇ ವೇಳೆ ಸಂಕೀರ್ತಾನ ಯಾತ್ರೆ ಧಾರ್ಮಿಕ ಸಭೆಯಲ್ಲಿ ಹುಬ್ಬಳ್ಳಿ ರಾಮಕೃಷ್ಣ ಮಠದ ಸಾದ್ವಿ ತೇಜೋಮಯಿ ಮಾತಾಜೀ, ಚಿಕ್ಕಮಗಳೂರು ಶಾರದಾ ಪೀಠದ ಶುಭಾವೃತ ಪ್ರಾಣಾ ಮಾತಾಜೀ ಆಶೀರ್ವಚನ ನೀಡಿದರು. ವಿಶ್ವ ಹಿಂದೂ ಪರಿಷತ್ ಮುಖಂಡ ಶ್ರೀಕಾಂತ್ ಪೈ, ವಿಶ್ವ ಹಿಂದೂ ಪರಿಷತ್ ನ ಆರ್. ಡಿ. ಮಹೇಂದ್ರ, ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ, ತನ್ಮಯಿ ಪ್ರೇಮ್ ಕುಮಾರ್, ನಗರಸಭೆ ಅಧ್ಯಕ್ಷೆ ಸುಜಾತ ಶಿವಕುಮಾರ್,  ಜಸಿಂತಾ ಅನಿಲ್ ಕುಮಾರ್ ಸೇರಿದಂತೆ ಅನೇಕರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next