Advertisement

EVM ರದ್ದು ಆಗ್ರಹಿಸಿ ಜೋಡೋ ಮಾದರಿ ಯಾತ್ರೆ: ಎಐಸಿಸಿ ಅಧ್ಯಕ್ಷ ಖರ್ಗೆ

10:27 PM Nov 26, 2024 | Team Udayavani |

ನವದೆಹಲಿ: ಇವಿಎಂ (ವಿದ್ಯುನ್ಮಾನ ಮತಯಂತ್ರ) ರದ್ದುಗೊಳಿಸಿ ಮತ ಪತ್ರ ವ್ಯವಸ್ಥೆ ಜಾರಿಗೊಳಿಸುವ ನಿಟ್ಟಿನಲ್ಲಿ ರಾಹುಲ್‌ ಗಾಂಧಿ ಕೈಗೊಂಡಿದ್ದ ಭಾರತ್‌ ಜೋಡೋ ಮಾದರಿ ಯಾತ್ರೆ ಕೈಗೊಳ್ಳಲಾಗುತ್ತದೆ. ಹೀಗೆಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

Advertisement

ನವದೆಹಲಿಯಲ್ಲಿ ಮಂಗಳವಾರ ತಾಲ್ಕಟೋರ ಸ್ಟೇಡಿಯಂನಲ್ಲಿ ಸಂವಿಧಾನ ರಕ್ಷಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇವಿಎಂಗಳನ್ನು ತಿರುಚಲಾಗುತ್ತಿದೆ. ಎಸ್ಟಿ, ಎಸ್ಟಿ, ಒಬಿಸಿ ಹಾಗೂ ಬಡ ಸಮುದಾಯಗಳ ಮತಗಳು ನೀರಿನಲ್ಲಿ ಹೋಮವಾಗುತ್ತಿದೆ. ಹೀಗಾಗಿ, ಹಿಂದಿನಂತೆಯೇ ಮತ ಪತ್ರ ವ್ಯವಸ್ಥೆ ಜಾರಿ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

“ನಮಗೆ ಇವಿಎಂ ಬೇಡ, ಮತ ಪತ್ರ ಬೇಕು. ಇವಿಎಂ ಗಳನ್ನು ಬೇಕಾ ದರೆ ಮೋದಿ ಹಾಗೂ ಅಮಿತ್‌ ಶಾ ಮನೆಯಲ್ಲಿ ಇಟ್ಟುಕೊಳ್ಳಲಿ ಆಗ ಅವರ ಬಂಡವಾಳ ಬಯಲಾಗುತ್ತದೆ ಎಂದಿದ್ದಾರೆ.

ಬಿಜೆಪಿ ಕಿಡಿ: ಖರ್ಗೆ ಹೇಳಿಕೆಗೆ ಬಿಜೆಪಿ ಕಿಡಿ ಕಾರಿದ್ದು, ಕಾಂಗ್ರೆಸ್‌ ಗೆದ್ದರೆ ಮಾತ್ರ ಇವಿಎಂ ಸರಿ, ಇಲ್ಲದಿದ್ದರೆ ಇವಿಎಂ ಸರಿ ಇಲ್ಲ ಎಂಬುದು ಕಾಂಗ್ರೆಸ್‌ನ ಧೋರಣೆ. ಇವಿಎಂ ಅಂದರೆ ಅವರ ಪಾಲಿಗೆ ಎಕ್ಸ್‌ಕ್ಯೂಸ್‌ ಫಾರ್‌ ವೋಟಿಂಗ್‌ ಮಾರ್ಜಿನ್‌ ಎಂಬಂತಾಗಿದೆ ಎಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next