Advertisement
ಕುಕ್ಕೆಗೆ ಬಂದ ಭಕ್ತರು ಕುಮಾರಧಾರ ನದಿಯಲ್ಲಿ ಸ್ನಾನ ಮಾಡಿ ಶ್ರೀ ದೇವರ ದರ್ಶನ ಪಡೆಯುವುದು ರೂಢಿ. ಕುಮಾರಧಾರ ಸ್ನಾನ ಘಟ್ಟದ ಬಳಿ ವರ್ಷ ಪೂರ್ತಿಯಾಗಿ ಇಲ್ಲಿ ಬೇರೆ ಬೇರೆ ಮೀನುಗಳಿದ್ದರೂ, ಜಾತ್ರೆಯ ಸಂದರ್ಭದಲ್ಲಿ ವಿಶೇಷವಾಗಿ ದೇವರ ಮೀನುಗಳ ಹೆಚ್ಚಾಗಿ ಕಾಣಿಸಿಕೊಂಡು ಅಚ್ಚರಿ ಮೂಡಿಸುತ್ತವೆ.
Related Articles
ಜಾತ್ರೆ ಸಂದರ್ಭದಲ್ಲಿ ಕುಮಾರಧಾರ ನದಿಯಲ್ಲಿ ಸ್ನಾನ ಮಾಡುವವರಿಗೆ ದೇವರ ಮೀನುಗಳು ಕಚಗುಳಿ ಇಡುತ್ತವೆ. ದೇವರ ಮೀನುಗಳೆಂದು ಕರೆಯಲ್ಪಡುವ ಇವುಗಳನ್ನು ಯಾರೂ ಹಿಡಿಯುವಂತಿಲ್ಲ. ಭಕ್ತರು ಅವುಗಳಿಗೆ ಆಹಾರ ಸಮರ್ಪಿಸಿ ಸಂತಸ ಪಡುತ್ತಾರೆ. ಅಲ್ಲದೆ ಜಾತ್ರೆಯ ಬ್ರಹ್ಮರಥೋತ್ಸವ ಮರುದಿನ ಶ್ರೀ ದೇವರ ಅವಭೃತೋತ್ಸವ ಕೂಡ ಕುಮಾರಧಾರ ನದಿಯಲ್ಲಿ ನಡೆಯುತ್ತದೆ. ಮೀನುಗಳ ಈ ನಡವಳಿಕೆಗೆ ನೈಸರ್ಗಿಕ ಕಾರಣಗಳಿದ್ದರೂ ಇರಬಹುದು. ಆದರೆ ಜಾತ್ರೆ ವೇಳೆ ಬರುವುದಂತೂ ಸತ್ಯ.
Advertisement
ಚಂಪಾ ಷಷ್ಠಿ ವೇಳೆ ಕುಮಾರಧಾರ ಸ್ನಾನ ಘಟ್ಟಕ್ಕೆ ಹೆಚ್ಚಿನ ದೇವರ ಮೀನುಗಳು ಆಗಮಿಸುತ್ತವೆ. ಇದಕ್ಕೆ ಜಾತ್ರೆಗೆ ಬರುವ ವಿಶೇಷ ಅತಿಥಿಗಳು ಎಂಬ ಮಾತು ಹಿಂದಿನಿಂದ ಚಾಲ್ತಿಯಲ್ಲಿದೆ. ಜಾತ್ರೆಯ ಕೊನೆಯ ದಿನ ದೈವ ಇಲ್ಲಿಗೆ ಬಂದು ಮೀನುಗಳಿಗೆ ನೈವೇದ್ಯ ಸಮರ್ಪಿಸಿದ ಬಳಿಕ ಅವು ತೆರಳುತ್ತವೆ ಎನ್ನುವ ನಂಬಿಕೆ ಇದೆ.-ವಿಶ್ವನಾಥ ನಡುತೋಟ, ನಿವೃತ್ತ ಉಪನ್ಯಾಸಕರು ಸುಬ್ರಹ್ಮಣ್ಯ