Advertisement

ಸರಕಾರಿ ಭೂಮಿ ಮಂಜೂರು: ಕಾನೂನು ಇಲಾಖೆಗೆ ನಿರ್ದೇಶನ: ಸಚಿವ ಅಶೋಕ್‌

11:17 PM Oct 11, 2022 | Team Udayavani |

ಬೆಂಗಳೂರು: ಕುಮ್ಕಿ, ಕಾನೆ, ಬಾಣೆ, ಸೊಪ್ಪಿನ ಬೆಟ್ಟದಲ್ಲಿ ದಶಕಗಳಿಂದ ಸಾಗುವಳಿ ಮಾಡುತ್ತಿರುವ ಅರ್ಹರಿಗೆ ಭೂಮಿ ಮಂಜೂರು ಮಾಡುವ ಸಂಬಂಧ ಕಾನೂನು ತಿದ್ದುಪಡಿಗೆ ಅಭಿಪ್ರಾಯ ಸಲ್ಲಿಸುವಂತೆ ಸಂಪುಟ ಉಪಸಮಿತಿ ಕಾನೂನು ಇಲಾಖೆಗೆ ನಿರ್ದೇಶನ ನೀಡಿದೆ.

Advertisement

ಮಂಗಳವಾರ ವಿಧಾನಸೌಧದಲ್ಲಿ ನಡೆದ ಸಭೆಯ ಅನಂತರ ಮಾತನಾಡಿದ ಕಂದಾಯ ಸಚಿವ ಆರ್‌.ಅಶೋಕ್‌, ಮಲೆನಾಡು ಸೇರಿ ರಾಜ್ಯಾದ್ಯಂತ 60ರಿಂದ 70 ವರ್ಷ ಬಡ ರೈತರು ಸರಕಾರಿ ಭೂಮಿ, ಅರಣ್ಯ ಪ್ರದೇಶದಲ್ಲಿ ಸಾಗುವಳಿ ಮಾಡಿಕೊಂಡು ಬಂದಿದ್ದಾರೆ.

ನ್ಯಾಯಾಲಯಗಳು ಅರಣ್ಯ ಪ್ರದೇಶವೆಂದು ಘೋಷಿಸಿದ್ದರೂ ಅಲ್ಲಿ ಅಡಿಕೆ, ತೆಂಗಿನ ಮರ ಬೆಳೆದಿವೆ. ದಶಕಗಳಿಂದ ಸಾಗುವಳಿ ಮಾಡಿಕೊಂಡು ಬಂದಿರುವವರಿಗೆ ಭೂಮಿ ಮಂಜೂರು ಮಾಡುವ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ತೀರ್ಮಾನಿಸಲಾಗಿದೆ. ಇದಕ್ಕಾಗಿ ಕಾನೂನು ತಿದ್ದುಪಡಿ ಆಗಬೇಕಿದ್ದು ಪರಾಮರ್ಶೆ ನಡೆಸಿ ಅಭಿಪ್ರಾಯ ನೀಡಲು ಸೂಚಿಸಲಾಗಿದೆ ಎಂದು ಹೇಳಿದರು.

ಸಾಗುವಳಿದಾರರು ಹೊಸದಾಗಿ ಅರ್ಜಿ ಸಲ್ಲಿಸಲು ಅವಕಾಶ ನೀಡುವುದಿಲ್ಲ. ಈಗಾಗಲೇ ಅರ್ಜಿ ಸಲ್ಲಿಸಿದವರು ಹಾಗೂ ತಿರಸ್ಕೃತ ಅರ್ಜಿಗಳನ್ನು ಪರಿಗಣಿಸಿ ಅರ್ಹರಿಗೆ ಮಂಜೂರು ಮಾಡಲಾಗುವುದು. ರಾಜ್ಯಾದ್ಯಂತ ಲಕ್ಷಾಂತರ ಎಕರೆ ಭೂಮಿಯಲ್ಲಿ ಈ ರೀತಿ ಸಾಗುವಳಿಯಾಗಿದ್ದು, ಬಡ ರೈತರಿಗೆ ನೆರವಾಗಲು ತೀರ್ಮಾನಿಸಲಾಗಿದೆ ಎಂದರು. ಗೋಮಾಳ, ಗಾಯರಾಣ, ಹುಲ್ಲುಬನ್ನಿ, ಸೊಪ್ಪಿನಬೆಟ್ಟ ಇತರ ಗ್ರಾಮೀಣ ಪ್ರದೇಶದ ಸರಕಾರಿ ಭೂಮಿ ಮಂಜೂರು ಮಾಡುವ ಸಂಬಂಧ ನೀತಿ ರೂಪಿಸಲು ಸಂಪುಟ ಉಪ ಸಮಿತಿ ರಚನೆಯಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next