Advertisement

ಅಲೆನ್‌ ವಿದ್ಯಾರ್ಥಿಗಳ ಸಾಧನೆ

11:26 AM Jun 17, 2018 | Team Udayavani |

ಬೆಂಗಳೂರು: ಇರಾನಿನ ಶಿಕ್ಷಣ ಸಚಿವಾಲಯವು ಟರ್ಬಿಯೆಟ್‌ ಮಾಡೆರಸ್‌ ಹಾಗೂ ಟೆಹ್ರಾನ್‌ ವಿಶ್ವವಿದ್ಯಾಲಯಗಳ ಸಹಯೋಗದಲ್ಲಿ ಇಂಟರ್‌ನ್ಯಾಷನಲ್‌ ಬಯಾಲಜಿ ಒಲಂಪಿಯಾಡ್‌ನ‌ಲ್ಲಿ (ಐಬಿಒ) ಅಲೆನ್‌ ಶಿಕ್ಷಣ ಸಂಸ್ಥೆಯ ಬೆಂಗಳೂರು ಶಾಖೆಯ ಕುಂಜಲ್‌ ಪರ್ನಮಿ ತೇರ್ಗಡೆ ಹೊಂದಿದ್ದಾರೆ.

Advertisement

29ನೇ ಐಬಿಒನಲ್ಲಿ 67 ದೇಶಗಳು ಪಾಲ್ಗೊಂಡಿದ್ದು, ಈ ಪೈಕಿ 237 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಇದರಲ್ಲಿ ಭಾರತದ ನಾಲ್ಕು ವಿದ್ಯಾರ್ಥಿಗಳಿದ್ದು, ಅಲೆನ್‌ ಸಂಸ್ಥೆಯ ವಿದ್ಯಾರ್ಥಿಗಳಾಗಿದ್ದಾರೆ. ಕುಂಜಲ್‌ ಪರ್ನಮಿ ಅವರು 12ನೇ ತರಗತಿ ವಿಭಾಗದಲ್ಲಿ ಶೇ.95.4ರಷ್ಟು ಅಂಕ ಗಳಿಸಿದ್ದಾರೆ.

ಜುಲೈ 22ರಂದು ಟೆಹ್ರಾನ್‌ನಲ್ಲಿ ನಡೆಯಲಿರುವ ಅಂತಿಮ ಸುತ್ತಿಗೆ ಕುಂಜಲ್‌ ಪರ್ನಮಿ ಆಯ್ಕೆಯಾಗಿದ್ದು, ಈ ಸುತ್ತಿಗೆ ಪ್ರವೇಶಿಸಿದ ಬೆಂಗಳೂರಿನ ಮೊದಲ ವಿದ್ಯಾರ್ಥಿನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಐಐಟಿ ಕಾನ್ಪುರ್‌ ರಾಷ್ಟ್ರ ಮಟ್ಟದ ಎಂಜಿನಿಯರಿಂಗ್‌ ಪ್ರೀಮಿಯರ್‌ ಜೆಇಇ ಅಡ್ವಾನ್‌ಸ್ಡ್ ಫ‌ಲಿತಾಂಶ ಪ್ರಕಟಿಸಿದ್ದು, ಅಲೆನ್‌ ಬೆಂಗಳೂರಿನ ಮೂವರು ವಿದ್ಯಾರ್ಥಿಗಳು 1000 ರ್‍ಯಾಂಕ್‌ನೊಳಗೆ ಸ್ಥಾನ ಪಡೆದಿದ್ದಾರೆ. 16 ವಿದ್ಯಾರ್ಥಿಗಳು 2500 ರ್‍ಯಾಂಕ್‌ನೊಳಗೆ ಸ್ಥಾನ ಗಳಿಸಿದ್ದಾರೆ. ಅಲೆನ್‌ ಕೆರಿಯರ್‌ ಇನ್‌ಸ್ಟಿಟ್ಯೂಟ್‌ ಬೆಂಗಳೂರಿನ ಅಕಾಡೆಮಿಕ್‌ ಮುಖ್ಯಸ್ಥ ಮಹೇಶ್‌ ಯಾದವ್‌ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಶುಭ ಹಾರೈಸಿದರು.

Advertisement

Udayavani is now on Telegram. Click here to join our channel and stay updated with the latest news.

Next