Advertisement

ಆಲ್‌ ಇಂಡಿಯಾ ರೇಡಿಯೊ ಇನ್ನು ಮುಂದೆ ಆಕಾಶವಾಣಿ

01:02 AM May 05, 2023 | Team Udayavani |

ಹೊಸದಿಲ್ಲಿ: ಇನ್ನು ಮುಂದೆ “ಆಲ್‌ ಇಂಡಿಯಾ ರೇಡಿಯೊ’ವನ್ನು “ಆಕಾಶವಾಣಿ’ ಎಂದೇ ಕರೆಯಬೇಕು. ಇದು ಸರಕಾರಿ ಸ್ವಾಮ್ಯದ ಪ್ರಸಾರ ಸಂಸ್ಥೆ ಪ್ರಸಾರ ಭಾರತಿಯ ನಿರ್ಧಾರ. ತನ್ನ ರೇಡಿಯೊ ಸೇವೆಯನ್ನು “ಆಲ್‌ ಇಂಡಿಯಾ ರೇಡಿಯೊ’ ಎಂದು ಕರೆಯುವ ಬದಲು, “ಆಕಾಶವಾಣಿ’ ಎಂದೇ ಕರೆಯಲು ಪ್ರಸಾರ ಭಾರತಿ ನಿರ್ಧರಿಸಿದೆ. ಈ ಕುರಿತು ಬುಧವಾರ ಆಕಾಶವಾಣಿ ಪ್ರಧಾನ ನಿರ್ದೇಶಕರಾದ ವಸುಧಾ ಗುಪ್ತಾ ಆಂತರಿಕ ಆದೇಶವನ್ನೂ ಹೊರಡಿಸಿದ್ದಾರೆ. ಈ ನಿಯಮವು ತತ್‌ಕ್ಷಣದಿಂದಲೇ ಜಾರಿಯಾಗುತ್ತಿದೆ ಎಂದೂ ಅದರಲ್ಲಿ ನಮೂದಿಸಲಾಗಿದೆ.

Advertisement

ಇದು ಕೇಂದ್ರ ಸರಕಾರದ ಬಹಳ ಹಳೆಯ ನಿರ್ಧಾರವಾಗಿದ್ದು, ಈಗ ನಾವು ಅದನ್ನು ಅನುಷ್ಠಾನ ಮಾಡುತ್ತಿದ್ದೇವೆ ಎಂದು ಪ್ರಸಾರ ಭಾರತಿಯ ಸಿಇಒ ಗೌರವ್‌ ದ್ವಿವೇದಿ ತಿಳಿಸಿದ್ದಾರೆ. ಜತೆಗೆ 1990ರ ಪ್ರಸಾರ ಭಾರತಿ(ಬ್ರಾಡ್‌ಕಾಸ್ಟಿಂಗ್‌ ಕಾರ್ಪೊರೇಷನ್‌ ಆಫ್ ಇಂಡಿಯಾ) ಕಾಯ್ದೆಯ ಅನ್ವಯವೇ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದಿದ್ದಾರೆ. 1939ರಲ್ಲಿ ಕಲ್ಕತ್ತ ಶಾರ್ಟ್‌ವೇವ್‌ ಸರ್ವಿಸ್‌ ಉದ್ಘಾಟನೆಯ ವೇಳೆ ಕವಿ ರವೀಂದ್ರನಾಥ್‌ ಠಾಕೂರ್‌ ಅವರು ಬರೆದಿದ್ದ ಒಂದು ಕವಿತೆಯಲ್ಲಿ ಆಲ್‌ ಇಂಡಿಯಾ ರೇಡಿಯೊವನ್ನು “ಆಕಾಶವಾಣಿ’ ಎಂದು ಬಣ್ಣಿಸಿದ್ದರು. ಅದಕ್ಕೂ ಮೊದಲು ಅಂದರೆ 1935ರ ಸೆ.10ರಂದು ಮೈಸೂರಿನಲ್ಲಿ ಆರಂಭವಾದ ಖಾಸಗಿ ರೇಡಿಯೊ ಸ್ಟೇಶನ್‌ವೊಂದಕ್ಕೆ “ಆಕಾಶವಾಣಿ ಮೈಸೂರು’ ಎಂದು ಹೆಸರಿಡಲಾಗಿತ್ತು ಎಂದು ಪ್ರಸಾರ ಭಾರತಿ ವೆಬ್‌ಸೈಟ್‌ನಲ್ಲಿ ಉಲ್ಲೇಖೀಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next