Advertisement
ವಯೋ ಸಹಜ ಖಾಯಿಲೆಯಿಂದ ಬಳಲುತ್ತಿದ್ದ ಮನಮೋಹನ್ ಸಿಂಗ್ ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು ಆದರೆ ಗುರುವಾರ ರಾತ್ರಿ ಕೊನೆಯುಸಿರೆಳೆದಿದ್ದಾರೆ.
Related Articles
Advertisement
ಅದೇ ರೀತಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೂಡ ಟ್ವೀಟ್ ಮಾಡಿದ್ದು ‘ ಮಾಜಿ ಪ್ರಧಾನಿ ನಿಧನದಿಂದ ದೃಷ್ಠಿಯುಳ್ಳ ರಾಜನೀತಿ ತಜ್ಞನನ್ನು ಕಳೆದುಕೊಂಡಿದ್ದೇವೆ ಅವರ ದೇಶದ ಆರ್ಥಿಕತೆಗೆ ಅವರು ನೀಡಿದ ಕೊಡುಗೆ ಎಂದಿಗೂ ಮರೆಯಲಾಗದು, ಅವರ ಆರ್ಥಿಕ ಉದಾರೀಕರಣ ನೀತಿಗಳು ಮತ್ತು ಹಕ್ಕುಗಳ ಆಧಾರಿತ ಕಲ್ಯಾಣ ಮಾದರಿಯು ಕೋಟ್ಯಂತರ ಭಾರತೀಯರ ಜೀವನವನ್ನು ಗಾಢವಾಗಿ ಪರಿವರ್ತಿಸಿದೆ. ರಾಷ್ಟ್ರ ನಿರ್ಮಾಣಕ್ಕೆ ಅವರು ನೀಡಿರುವ ಕೊಡುಗೆ ಭಾರತೀಯ ಇತಿಹಾಸದಲ್ಲಿ ಅಚ್ಚಳಿಯದೆ ಉಳಿಯುವಂತೆ ಮಾಡಿದೆ.
ಇಂದು ಪ್ರಧಾನಿ ಮೋದಿ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ:ದಿವಂಗತ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಗೌರವ ಸಲ್ಲಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರ ಇಂದು ಸಚಿವ ಸಂಪುಟ ಸಭೆ ಕರೆದಿದ್ದಾರೆ, 7 ದಿನಗಳ ರಾಷ್ಟ್ರೀಯ ಶೋಕಾಚರಣೆ ಘೋಷಿಸಲು ಸಜ್ಜಾಗಿದೆ. ಇದಲ್ಲದೆ, ದಿನದ ಎಲ್ಲಾ ಸರ್ಕಾರಿ ಕಾರ್ಯಕ್ರಮಗಳನ್ನು ರದ್ದುಗೊಳಿಸಲು ನಿರ್ಧರಿಸಿದೆ.