Advertisement

ಬಾಲಿವುಡ್‌ ನಟಿ ಐಶ್ವರ್ಯಾ ರೈ ಮತ್ತೆ ಗರ್ಭಿಣಿ?

07:10 PM Sep 24, 2022 | Team Udayavani |

ಬಾಲಿವುಡ್‌ ನಟಿ ಐಶ್ವರ್ಯಾ ರೈ ಅವರು ಮಣಿರತ್ನಂ ಅವರ ಪೊನ್ನಿಯನ್‌ ಸೆಲ್ವನ್‌ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದು, ಸದ್ಯ ಅದರ ಪ್ರಚಾರದಲ್ಲಿ ಬ್ಯುಸಿ ಇದ್ದಾರೆ.

Advertisement

ಇದರ ಮಧ್ಯವೇ ನಟಿ ಎರಡನೇ ಮಗುವಿಗೆ ತಾಯಾಗಲಿದ್ದಾರೆಯೇ ಎನ್ನುವ ಚರ್ಚೆಗಳು ಹುಟ್ಟಿಕೊಂಡಿವೆ. ಅದಕ್ಕೆ ಕಾರಣ ಇತ್ತೀಚೆಗೆ ಅವರು ತೊಟ್ಟಿದ್ದ ಉಡುಗೆ. ನಟಿ ಕಪ್ಪು ಟಿ-ಶರ್ಟ್‌ ಜತೆ ದೊಡ್ಡದೊಂದು ಓವರ್‌ಕೋಟ್‌ ಹಾಕಿಕೊಂಡು ಮುಂಬೈನಲ್ಲಿ ಏರ್‌ಪೋರ್ಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ಐಶ್ವರ್ಯಾ ಮತ್ತೆ ಗರ್ಭಿಣಿಯಾಗಿದ್ದು, ಅದೇ ಕಾರಣಕ್ಕೆ ಇಷ್ಟು ಸಡಿಲವಾದ ಬಟ್ಟೆ ಧರಿಸಿದ್ದಾರೆ ಎಂದು ನೆಟ್ಟಿಗರು ಅಂದಾಜಿಸಲಾರಂಭಿಸಿದ್ದಾರೆ. ಐಶ್ವರ್ಯಾಗೆ 10 ವರ್ಷದ ಮಗಳಿದ್ದಾಳೆ.

 

Advertisement

Udayavani is now on Telegram. Click here to join our channel and stay updated with the latest news.

Next