Advertisement

ಏರ್‌ಇಂಡಿಯಾದಲ್ಲಿ ಇನ್ನು ಸಸ್ಯಾಹಾರ ಮಾತ್ರ

10:36 AM Jul 11, 2017 | Team Udayavani |

ಹೊಸದಿಲ್ಲಿ: ಕೇಂದ್ರ ಸರಕಾರದ ತೆಕ್ಕೆಯಿಂದ ಖಾಸಗಿಯವರ ಪಾಲಾಗುವ ಅಂಚಿನಲ್ಲಿರುವ ಏರ್‌ ಇಂಡಿಯಾದಲ್ಲಿ ಇನ್ನು ಪ್ರಯಾಣಿಕರಿಗೆ ಸಸ್ಯಾಹಾರ ಮಾತ್ರ ನೀಡಲಾಗುತ್ತದೆ. 52 ಸಾವಿರ ಕೋಟಿ ರೂ. ಸಾಲದ ಹೊರೆ ಹೊತ್ತಿರುವ ಸಂಸ್ಥೆಯಲ್ಲಿ ಖರ್ಚು-ವೆಚ್ಚಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

Advertisement

ದೇಶದ ಒಳಗಿನ ವಿಮಾನಯಾನಕ್ಕೆ ಅದರಲ್ಲೂ ಎಕಾನಮಿ ಕ್ಲಾಸ್‌ನಲ್ಲಿ ಪ್ರಯಾಣಿಸುವವರಿಗೆ ಇದು ಅನ್ವಯ. ಬಿಸಿನೆಸ್‌ ಕ್ಲಾಸ್‌ನಲ್ಲಿ ಪ್ರಯಾಣಿಸುವವರಿಗೆ ಸಸ್ಯಾಹಾರ ಮತ್ತು ಮಾಂಸಾಹಾರದ ಆಯ್ಕೆ ಮುಂದುವರಿಯಲಿದೆ. ಸಿಬಂದಿ ಮೇಲಿನ ಹೊರೆ ತಗ್ಗಿಸುವುದಕ್ಕಾಗಿ 2015ರ ಡಿಸೆಂಬರ್‌ನಲ್ಲಿ ಸರಕಾರಿ ಸ್ವಾಮ್ಯದ ಸಂಸ್ಥೆ ದೇಶದ ಒಳಗೆ 90 ನಿಮಿಷದ ಒಳ ಗಿನ ವಿಮಾನಯಾನಕ್ಕೆ ಸಸ್ಯಾಹಾರದ ಅಡುಗೆ ನೀಡುವುದಾಗಿ ಘೋಷಿಸಿತ್ತು. ನಿರ್ಧಾರ ಸಮರ್ಥಿಸಿಕೊಂಡ ಹಿರಿಯ ಅಧಿ ಕಾರಿ, ಟೇಕಾಫ್, ಲ್ಯಾಂಡಿಂಗ್‌ ಹೊರತುಪಡಿಸಿ ಪ್ರಯಾಣದ ಅವಧಿ ಇರುವುದು ಕೇವಲ 30 ನಿಮಿಷ. ಈ ಅವಧಿಯಲ್ಲಿ ಪ್ರಯಾಣಿಕರಿಗೆ ಬೇಕಾದ್ದನ್ನು ಕೊಡುವುದು ಅಸಾಧ್ಯ. ಹೀಗಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next