Advertisement

Air India ಅವ್ಯವಸ್ಥೆ: ಬೆಂಗಳೂರಿನ ಸಂಗೀತಗಾರ ರಿಕಿ ಕೇಜ್‌ ಆಕ್ರೋಶ

12:05 AM Aug 04, 2024 | Team Udayavani |

ಹೊಸದಿಲ್ಲಿ:  ಟಾಟಾ ಮಾಲಕತ್ವದ ಏರ್‌ ಇಂಡಿಯಾ ವಿರುದ್ಧ ಬೆಂಗಳೂರು ಮೂಲದ ಸಂಗೀತ ನಿರ್ದೇಶಕ, ಗ್ರ್ಯಾಮಿ ಅವಾರ್ಡ್‌ ಪುರಸ್ಕೃತ ರಿಕಿ ಕೇಜ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನನಗೆ ಮಾಹಿತಿ ನೀಡದೇ ಏರಿಂಡಿ ಯಾ ನನ್ನ ಸೀಟನ್ನು ಬಿಸೆನೆಸ್‌ ಕ್ಲಾಸ್‌ನಿಂದ ಎಕಾನಮಿ ಕ್ಲಾಸ್‌ಗೆ ಬದಲಾಯಿಸಿದೆ. ಈ ಬಗ್ಗೆ ಪ್ರಶ್ನಿಸಿದಾಗ ಟಿಕೆಟ್‌ ಮೊತ್ತವನ್ನು ಮರುಪಾವತಿ ಮಾಡಲೂ ಸಂಸ್ಥೆಯು ನಿರಾಕರಿಸಿದೆ ಎಂದು ಆರೋಪಿಸಿದ್ದಾರೆ. ಒಂದು ವರ್ಷದ ಅವಧಿಯಲ್ಲಿ 3ನೇ ಬಾರಿಗೆ ಇಂಥ ಕಹಿ ಅನುಭವವಾಗಿದೆ. ಈ ಬಗ್ಗೆ ವಿಚಾರಿಸಲು ತೆರಳಿದ್ದಾಗ ಕೌಂಟರ್‌ನಲ್ಲಿದ್ದ ಗ್ರಾಹಕ ಸೇವಾ ಸಿಬಂದಿ ಸಹ ಏನೂ ಸಹಾಯ ಮಾಡಲಿಲ್ಲ ಎಂದು ರಿಕಿ ಆರೋಪಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next