Advertisement

AI super computer: ನಿರ್ವಹಣೆ ಗಾಗಿ 8.33 ಲಕ್ಷ ಕೋಟಿ ವೆಚ್ಚ!

12:23 AM Apr 01, 2024 | |

ವಾಷಿಂಗ್ಟನ್‌: ಸುಧಾರಿತ ಕೃತಕ ಬುದ್ಧಿ ಮತ್ತೆ(ಎಐ) ಅಫ್ಲಿಕೇಶನ್‌ಗಳ ನಿರ್ವಹಣೆ ಗಾಗಿ 8.33 ಲಕ್ಷ ಕೋಟಿ ರೂ. ವೆಚ್ಚದಲ್ಲಿ ಸೂಪರ್‌ ಕಂಪ್ಯೂಟರ್‌ ಅಭಿವೃದ್ಧಿಪಡಿ ಸಲು ಟೆಕ್‌ ದೈತ್ಯ ಮೈಕ್ರೋಸಾಫ್ಟ್ ಮತ್ತು ಓಪನ್‌ ಎಐ ಮುಂದಾಗಿವೆ.

Advertisement

ಇದು ಎಐ ಕ್ಷೇತ್ರದಲ್ಲಿ ಮಹತ್ವದ ಮೈಲುಗಲ್ಲಾಗಿದ್ದು, ಮೈಕ್ರೋಸಾಫ್ಟ್ ಮತ್ತು ಓಪನ್‌ ಎಐ ಜಂಟಿಯಾಗಿ ಈ ಯೋಜನೆಯನ್ನು ಕೈಗೆತ್ತಿಗೊಂಡಿವೆ. ಈ ಸೂಪರ್‌ ಕಂಪ್ಯೂಟರ್‌ಗೆ “ಸ್ಟಾರ್‌ಗೇಟ್‌’ ಎಂದು ನಾಮಕರಣ ಮಾಡಲಾಗಿದೆ. ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಡೇಟಾ ಸೆಂಟರ್‌ಗಳ 100 ಪಟ್ಟು ಅಧಿಕ ವೆಚ್ಚದಲ್ಲಿ ಈ ಸೂಪರ್‌ ಕಂಪ್ಯೂಟರ್‌ ಅಭಿವೃದ್ಧಿಪಡಿಸಲಾಗುತ್ತಿದೆ. 2028ರ ವೇಳೆಗೆ “ಸ್ಟಾರ್‌ಗೇಟ್‌’ ಕಾರ್ಯಾರಂಭ ಮಾಡುವ ನಿರೀಕ್ಷೆಯಿದೆ.

ಕೃತಕ ಬುದ್ಧಿಮತೆಯ ನಿಜವಾದ ಕಾರ್ಯಕ್ಷಮತೆಯನ್ನು ಜಗಜ್ಜಾಹೀರು ಪಡಿಸಲು ಈ ಸೂಪರ್‌ ಕಂಪ್ಯೂಟರ್‌ನಿಂದ ಸಾಧ್ಯವಾಗಲಿದೆ. ಅಲ್ಲದೇ ಸುಧಾ ರಿತ ಎಐ ಅಫ್ಲಿಕೇಶನ್‌ಗಳ ಬೇಡಿಕೆಗಳನ್ನು ಪೂರೈಸಲು ಸಮರ್ಥ ವಾಗಿರುವ ಡೇಟಾ ಕೇಂದ್ರಗಳಿಗೆ ಪ್ರಾಮು ಖ್ಯತೆ ಹೆಚ್ಚಿದೆ. ಈ ಬೇಡಿಕೆಗಳನ್ನು ಪೂರೈ ಸಲು “ಸ್ಟಾರ್‌ಗೇಟ್‌’ ಸೂಪರ್‌ ಕಂಪ್ಯೂಟರ್‌ನಿಂದ ಸಾಧ್ಯ ವಾಗಲಿದೆ ಎಂದು ಮೈಕ್ರೋಸಾಫ್ಟ್ ಮತ್ತು ಓಪನ್‌ಎಐ ಹೇಳಿವೆ.

Advertisement

Udayavani is now on Telegram. Click here to join our channel and stay updated with the latest news.

Next