Advertisement

Pharma Company ಮೂಲಕ 4500 ಕೋಟಿ ಅಕ್ರಮ: ಇ.ಡಿ.

10:06 AM Dec 20, 2024 | Team Udayavani |

ಹೊಸದಿಲ್ಲಿ: ವಿದೇಶದ ಬೆಟ್ಟಿಂಗ್‌ ವೇದಿಕೆ “ಫೇರ್‌ಪ್ಲೇ’ (Fairplay) ಭಾರತದಲ್ಲಿನ 100ಕ್ಕೂ ನಕಲಿ  ಫಾರ್ಮಾ ಕಂಪೆನಿ (Pharma Company)  ಗಳನ್ನು ಬಳಕೆ ಮಾಡಿ 4500 ಕೋಟಿ ರೂ. ಅಕ್ರಮ ಎಸಗಿದೆ ಎಂದು ಇ.ಡಿ. ಹೇಳಿದೆ. 100 ಕ್ಕೂ ಹೆಚ್ಚು ನಕಲಿ ಫಾರ್ಮಾ ಕಂಪೆನಿ (Pharma Company) ಗಳನ್ನು ಬಳಕೆ ಮಾಡಿಕೊಳ್ಳಲಾಗಿದೆ. ಹಲವು ಹಂತಗಳಲ್ಲಿ ಹಣ ವರ್ಗಾವಣೆ ಬಳಿಕ, ಅದನ್ನು ವಿದೇಶದಲ್ಲಿರುವ ಕಂಪೆನಿ­ಗಳಲ್ಲಿ ಹೂಡಿಕೆ ಮಾಡಲಾಗಿರುವುದು ತನಿಖೆ­ಯಿಂದ ಬಹಿರಂಗ ಗೊಂಡಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Advertisement

ಕೆರೆಬಿಯನ್‌ ದ್ವೀಪ ಕ್ಯೂರೋಕಾವೋ ಮತ್ತು ದುಬಾೖಯಲ್ಲಿ ನೋಂದಣಿಯಾಗಿರುವ ಫೇರ್‌ಪ್ಲೇ ಕಂಪೆನಿ (Fairplay Company) ಆನ್‌ಲೈನ್‌ ಬೆಟ್ಟಿಂಗ್‌ (Online betting) ಮೂಲಕ ಗಳಿಸಿದ ಹಣವನ್ನು ಶೆಲ್‌ ಕಂಪೆನಿಗಳ ಮೂಲಕ ಅಕ್ರಮವಾಗಿ ವರ್ಗಾವಣೆ ಮಾಡಿದೆ. ಇದನ್ನು ಫಾರ್ಮಾ ಕಂಪೆನಿಗಳಿಗೆ ಒದಗಿಸುವುದಕ್ಕೂ ಮುನ್ನ 5 ಹಂತಗಳಲ್ಲಿ ಬೇರೆ  ಕಡೆ ವರ್ಗಾವಣೆ ಮಾಡಲಾಗಿದೆ. ಒಂದು ಹಂತದಲ್ಲಿ ಬಿಎಸ್‌ಇನಲ್ಲಿ ಲಿಸ್ಟ್‌ ಆಗಿರುವ ಕಂಪೆನಿ ಮೂಲಕ ವಹಿವಾಟು ನಡೆಸಲಾ ಗಿದೆ. ಆ ಕಂಪೆನಿ ಮೂಲಕ 90  ನಕಲಿ ಕಂಪೆನಿ ಸೃಷ್ಟಿಸಲಾಗಿದೆ. ಈ ಕಂಪೆನಿಗಳನ್ನು ಕೇವಲ ಅಕ್ರಮ ಹಣ ವರ್ಗಾ­ವಣೆಗೆ ಮಾತ್ರ ಬಳಕೆ ಮಾಡಿಕೊಳ್ಳಲಾ­ಗುತ್ತಿತ್ತು ಎಂದು ಇ.ಡಿ. ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next