Advertisement

Afghan ವ್ಯಭಿಚಾರಿ ಸ್ತ್ರೀಯರಿಗೆ ರಸ್ತೆ ಮಧ್ಯೆಯೇ ಕಲ್ಲೇಟು: ತಾಲಿಬಾನ್‌ ಘೋಷಣೆ!

12:41 AM Mar 30, 2024 | Team Udayavani |

ಕಾಬೂಲ್‌: ಅಫ್ಘಾನಿಸ್ಥಾನದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಮತ್ತೆ ಶುರುವಾಗಲಿದೆ. ಸಾರ್ವಜನಿಕವಾಗಿಯೇ ಮಹಿಳೆಯರನ್ನು ಥಳಿಸಿ, ಕಲ್ಲಿನಿಂದ ಹೊಡೆದು ಸಾಯಿಸುವ ಕ್ರಮವನ್ನು ಮತ್ತೆ ಜಾರಿಗೊಳಿಸುವ ಬಗ್ಗೆ ತಾಲಿಬಾನ್‌ ಆಡಳಿತ ಸುಳಿವು ನೀಡಿದೆ ಎಂದು ದಿ ಡೈಲಿ ಟೆಲಿಗ್ರಾಫ್ ವರದಿ ಮಾಡಿದೆ. ಈ ಸಂಬಂಧ ತಾಲಿಬಾನ್‌ನ ಪ್ರಮುಖ ನಾಯಕ ಮುಲ್ಲಾ ಹಿಬಾತುಲ್ಲಾ ಅಖುಂದ್ಜಾದ ಆಡಿಯೋ ಬಿಡುಗಡೆಗೊಳಿಸಿದ್ದಾನೆ. ಅದರಲ್ಲಿ “ವ್ಯಭಿ ಚಾರ ಎಸಗಿದ ಮಹಿಳೆಗೆ ನೀಡುವ ಶಿಕ್ಷೆಯನ್ನು ನೀವು ಮಹಿಳೆಯರ ಹಕ್ಕುಗಳ ಉಲ್ಲಂಘನೆ ಎಂದು ಹೇಳುತ್ತೀರಿ. ನಾವು ದೇವರ ಪ್ರತಿನಿಧಿಗಳಾಗಿ ಇಂಥ ಕೃತ್ಯ ಎಸಗಿದ ಮಹಿಳೆ ಯರನ್ನು ಸಾರ್ವಜನಿಕವಾಗಿ ಥಳಿಸಿ, ಕಲ್ಲಿನಿಂದ ಹೊಡೆದು ಸಾಯಿಸುವ ಕ್ರಮವನ್ನು ಮತ್ತೆ ಜಾರಿಗೊಳಿಸುತ್ತೇವೆ’ ಎಂದು ಹೇಳಿದ್ದಾನೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next