ರಾಯ್ಪುರ: ಮುಂದಿನ ತಿಂಗಳು ನಡೆಯಲಿರುವ ಛತ್ತೀಸ್‌ಗಢ ವಿಧಾನಸಭಾ ಚುನಾವಣೆಗೆ ಆಮ್ ಆದ್ಮಿ ಪಕ್ಷ (ಎಎಪಿ) ತನ್ನ 12 ಅಭ್ಯರ್ಥಿಗಳ ನಾಲ್ಕನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಸಮ್ರಿ ಕ್ಷೇತ್ರದಿಂದ ದೇವ ಗಣೇಶ್ ಟೇಕಮ್, ಲುಂಡ್ರಾ ಕ್ಷೇತ್ರದಿಂದ ಅಲೆಕ್ಸಾಂಡರ್, ಸೀತಾಪುರ ಕ್ಷೇತ್ರದಿಂದ ಮುನ್ನಾ ಟೊಪ್ಪೊ, ಜಶ್‌ಪುರದಿಂದ ಪ್ರಕಾಶ್ ಟೊಪ್ಪೊ, ರಾಯ್‌ಗಢದಿಂದ ಗೋಪಾಲ್ ಬಾಪುಡಿಯಾ, ಪಾಲಿ-ತನಖರ್, ಪರಮೇಶ್ವರ್‌ನಿಂದ ಸೊಬ್ರಂ ಸಿಂಗ್ ಸೈಮಾ, ಜಾಂಜ್ಗೀರ್ ಚಂಪಾದಿಂದ ಪ್ರಶಾದ್ ಪಾಂಡೆ, ಖಲ್ಲಾರಿಯಿಂದ ನೀಲಂ ಧ್ರುವ, ಬಲೋಡಾ ಬಜಾರ್‌ನಿಂದ ಸಂತೋಷ್, ರಾಯಪುರ ಉತ್ತರದಿಂದ ವಿಜಯ್ ಗುರುಬಕ್ಸಾನಿ, ಅರಂಗ್‌ನಿಂದ ಪರ್ಮಾನಂದ ಜಂಗ್ಡೆ ಮತ್ತು ಬಿಂದ್ರವಾಗರ್‌ನಿಂದ ಭಗೀರಥ ಮಾಂಝಿ ಅವರು ಸ್ಪರ್ಧಿಸಲಿದ್ದಾರೆ.
ಇದರೊಂದಿಗೆ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷವು ಕಾಂಗ್ರೆಸ್ ಆಡಳಿತವಿರುವ ರಾಜ್ಯದಲ್ಲಿ ಚುನಾವಣೆಗೆ ಇದುವರೆಗೆ 45 ಅಭ್ಯರ್ಥಿಗಳ ಹೆಸರನ್ನು ಬಿಡುಗಡೆ ಮಾಡಿದೆ.
90 ಸದಸ್ಯ ಬಲದ ಛತ್ತೀಸ್‌ಗಢ ವಿಧಾನಸಭೆಗೆ ನವೆಂಬರ್ 7 ಮತ್ತು 17 ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಡಿ. 3ರಂದು ಮತ ಎಣಿಕೆ ನಡೆಯಲಿದೆ.
ಛತ್ತೀಸ್‌ಗಢದಲ್ಲಿ 2018 ರ ವಿಧಾನಸಭಾ ಚುನಾವಣೆಯಲ್ಲಿ ಮೊದಲ ಬಾರಿಗೆ ಎಎಪಿ ತನ್ನ ಅದೃಷ್ಟವನ್ನು ಪರೀಕ್ಷಿಸಿತು ಮತ್ತು ಒಟ್ಟು 90 ಸ್ಥಾನಗಳಲ್ಲಿ 85 ರಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತು, ಆದರೆ ರಾಜ್ಯದಲ್ಲಿ ತನ್ನ ಖಾತೆಯನ್ನು ತೆರೆಯಲು ವಿಫಲವಾಯಿತು.