Advertisement

ನಗರದ ಓಟಕ್ಕೆ ವಾರಾಂತ್ಯದ ವಿರಾಮ

06:11 AM May 25, 2020 | Lakshmi GovindaRaj |

ಬೆಂಗಳೂರು: ವಾರದಿಂದ ನಿಧಾನವಾಗಿ ಸಹಜ ಸ್ಥಿತಿಗೆ ಮರಳುತ್ತಿದ್ದನಗರದ ಓಟಕ್ಕೆ ವಾರಾಂತ್ಯದ ವಿರಾಮವಾರದಿಂದ ನಿಧಾನವಾಗಿ ಸಹಜ ಸ್ಥಿತಿಗೆ ಮರಳುತ್ತಿದ್ದ ನಗರದ ಓಟಕ್ಕೆ ಭಾನುವಾರದ ಲಾಕ್‌ಡೌನ್‌ ತಾತ್ಕಾಲಿಕ ವಿರಾಮ ನೀಡಿತು.  ವ್ಯಾಪಾರ-ವಾಣಿಜ್ಯ ಚಟುವಟಿಕೆಗಳು, ಸಮೂಹ ಸಾರಿಗೆ, ಖಾಸಗಿ  ವಾಹನಗಳ ಸಂಚಾರ ಬಹುತೇಕ ಸ್ತಬಟಛಿಗೊಂಡಿತ್ತು. ಲಾಕ್‌ಡೌನ್‌ ಬಗ್ಗೆ ಮೊದಲೇ ಅರಿವಿದ್ದರಿಂದ ಗೊಂದಲಕ್ಕೆ ಅವಕಾಶ ಇರಲಿಲ್ಲ. ಪೊಲೀಸರ ಬಿಗಿ ಕ್ರಮ, ಮಳೆ ಅಬ್ಬರ ಅನಗತ್ಯ ಓಡಾಟಕ್ಕೂ ಬ್ರೇಕ್‌ ಹಾಕಿತು.

Advertisement

ಅಗತ್ಯ ವಸ್ತು  ಪೂರೈಕೆ, ಸೇವೆ ಸಿಬ್ಬಂದಿ ಮಾತ್ರ ಕಂಡುಬಂದರು. ಇದರಿಂದ ಪ್ರಮುಖ ರಸ್ತೆಗಳು ಬಿಕೋ ಎನ್ನುತ್ತಿದ್ದವು.  ಮಾಂಸ, ದಿನಸಿ ಅಂಗಡಿ, ಮೆಡಿಕಲ್‌ ಶಾಪ್‌ ಹೊರತುಪಡಿಸಿ ಎಲ್ಲಾ ವಹಿವಾಟು ಸ್ಥಗಿತಗೊಂಡಿತ್ತು. ಬಹುತೇಕ ಕಡೆ ಸಾಮಾಜಿಕ  ಅಂತರ ಕಾಯ್ದುಕೊಂಡು ವ್ಯಾಪಾರ ವಹಿವಾಟು ನಡೆಯಿತು. ಕೆಲವೆಡೆ ಅಂತರ ಕಾಯ್ದುಕೊಳ್ಳದಿರುವುದನ್ನು ಗಮನಿಸಿದ ಪೊಲೀಸರು ಸೂಚನೆ ಕೊಟ್ಟರು. ಇನ್ನು ನಗರಾದ್ಯಂತ ಪೊಲೀಸರು ಚೆಕ್‌ ಪಾಯಿಂಟ್‌ಗಳಲ್ಲಿ  ಕಾರ್ಯನಿರ್ವಹಣೆ ಈ ಹಿಂದಿನಂತೆ ಮುಂದುವರಿದಿತ್ತು. ಮತ್ತೂಂದೆಡೆ ತುಮಕೂರು ರಸ್ತೆಯಲ್ಲಿ ನಗರಕ್ಕೆ ಕಾರು, ಬೈಕ್‌ಗಳಲ್ಲಿ ಆಗಮಿಸುತ್ತಿದ್ದವರನ್ನು ತಡೆದು ಪೊಲೀಸರು ವಾಪಸ್‌ ಕಳುಹಿಸಿದರು.

ಯಲಹಂಕ ಸಮೀಪದ  ಚೆಕ್‌ಪೋಸ್ಟ್ ಗಳಲ್ಲಿಯೂ ಇದೇ ದೃಶ್ಯ ಕಂಡುಬಂದವು. ಇನ್ನು ಅಗತ್ಯ ಹಾಗೂ ತುರ್ತು ಸೇವೆಗೆ ನಿಯೋಜನೆಗೊಂಡಿದ್ದ ಬಿಎಂಟಿಸಿ ಬಸ್‌ ಮಾತ್ರ ನಿಗದಿತ ಮಾರ್ಗಗಳಲ್ಲಿ ಸಂಚರಿಸಿದವು. ಇನ್ನು ಶನಿವಾರ ರಾತ್ರಿ ರಾಜ್ಯದ  ವಿವಿಧೆಡೆಯಿಂದ ಬಂದಿದ್ದ ಕೆಎಸ್‌ಆರ್‌ಟಿಸಿ ಬಸ್‌ ಮಾತ್ರ ನಗರಕ್ಕೆ ಬಂದಿದ್ದವು. ಹೊರರಾಜ್ಯದ ಕಾರ್ಮಿಕರ ಪ್ರಯಾಣಕ್ಕಾಗಿ ಕಾರ್ಯಾಚರಣೆ ಮಾಡುತ್ತಿರುವ ಶ್ರಮಿಕ ವಿಶೇಷ ರೈಲುಗಳ ಸಂಚಾರ ಎಂದಿನಂತೆ ಮುಂದುವರಿದಿತ್ತು.

ಫ್ಲೈ ಓವರ್‌ ಬಂದ್‌: ಕರ್ಫ್ಯೂ ಹಿನ್ನೆಲೆಯಲ್ಲಿ ಶನಿವಾರ ರಾತ್ರಿಯಿಂದಲೇ ನಗರದ ಮೇಲ್ಸೇತುವೆಗಳ ನ್ನು ಮುಚ್ಚಲಾಗಿತ್ತು. ಬ್ಯಾರಿಕೇಡ್‌, ಹಗ್ಗ, ಮರದ ಕಂಬಗಳನ್ನು ಅಡ್ಡಲಾಗಿ ಕಟ್ಟಿ ಮೇಲ್ಸೇತುವೆ ಪ್ರವೇಶ, ನಿರ್ಗಮನದ ದ್ವಾರ ಬಂದ್‌  ಮಾಡಲಾಗಿತ್ತು. ಪ್ರಮುಖ ರಸ್ತೆ, ವೃತ್ತಗಳನ್ನು ಬ್ಯಾರಿಕೇಡ್‌ ಇಟ್ಟು, ಸಂಚಾರ ನಿರ್ಬಂಧಿಸಲಾಗಿತ್ತು.

ಬೈಕ್‌ ಸವಾರರಿಗೆ ಲಾಠಿ ರುಚಿ: ಕರ್ಫ್ಯೂ ನಡುವೆಯೂ ಮೆಜೆಸ್ಟಿಕ್‌, ಜೆ.ಸಿ.ರಸ್ತೆ, ಕೆ.ಜಿ.ರಸ್ತೆ ಸೇರಿ ಕೆಲ ಪ್ರದೇಶಗಳಲ್ಲಿ ಯುವಕರು ಬೈಕ್‌ ಗಳಲ್ಲಿ ಜಾಲಿ ರೈಡ್‌ಗೆ ಮುಂದಾಗಿದ್ದರು. ಪೊಲೀಸರು ಲಾಠಿ ರುಚಿ ಅಲ್ಲಲ್ಲಿ ಬೆರಳೆಣಿಕೆ ಸಂಚರಿಸಿದವು. ಪೊಲೀಸರು ತಡೆದು ವಿಚಾರಿಸಿದಾಗ ಆಸ್ಪತ್ರೆ, ಅಂಗಡಿಗೆ ತೆರಳುತ್ತಿರುವುದಾಗಿ ಕಾರಣ ನೀಡುತ್ತಿದ್ದರು. ಮಧ್ಯೆ ಮೆಜೆಸ್ಟಿಕ್‌ನ  ಕೆಎಸ್‌ಆರ್‌ಟಿಸಿ ಕೆಂಪೇ ಬಸ್‌ ನಿಲ್ದಾಣದಲ್ಲಿ ಸಿಬ್ಬಂದಿ, ಕರಿಗೆ ಊಟದ ಮಾಡಲಾಗಿತ್ತು. ಶನಿವಾರ ಎಲ್ಲೆಡೆಯಿಂದ ಬಸ್‌ ಗಳಲ್ಲಿ ನಗರಕ್ಕೆ ಬಂದಿದ್ದ ಪ್ರಯಾಣಿಕರು, ಮನೆಗಳಿಗೆ ತೆರಳಲು ವಾಹನಗಳಿಲ್ಲದೆ ಪರ ದಾಡಿದರು. ನಗರದ  20ಕ್ಕೂ ಹೆಚ್ಚು ವಾರ್ಡ್‌ ಗಳನ್ನು ಕಂಟೈನ್ಮೆಂಟ್‌ ಪ್ರದೇಶಗಳಾಗಿ ಗುರುತಿ ಸಿದ್ದು, ಪೊಲೀಸರು ಕಟ್ಟೆಚ್ಚರ ವಹಿಸಿದ್ದರು. ಕೊರೊನಾ ಸೋಂಕು ಹಿನ್ನೆಲೆಯಲ್ಲಿ ಭಾನುವಾರ ಕರ್ಫ್ಯೂ ವಿಧಿಸಿದ್ದು ಸೋಮವಾರ ಎಂದಿನಂತೆ ಜನಜೀವನ ಸಹಜ ಸ್ಥಿತಿಗೆ ಮರಳಲಿದೆ.

Advertisement

ಬಸ್‌ ನಿಲ್ದಾಣಗಳು ಭಣಭಣ: ಮೆಜೆಸ್ಟಿಕ್‌, ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ ಭಣಗುಡುತ್ತಿದ್ದವು. ಸಾರಿಗೆ ವ್ಯವಸ್ಥೆ ಸಂಪೂರ್ಣ ಸ್ಥಗಿತಗೊಂಡಿತ್ತು. ನಗರದಲ್ಲಿ ಕರ್ಫ್ಯೂ ಮಾಹಿತಿ ಕೊರತೆಯಿಂದ ಮೆಜೆಸ್ಟಿಕ್‌ಗೆ ಆಗಮಿಸಿದ್ದ ಆಂಧ್ರಪ್ರದೇಶ ಮೂಲದ ಕುಟುಂಬವೊಂದು ಪರದಾಡಿತು. ಕಡೆಗೆ ಬಸ್‌ ನಿಲ್ದಾಣದಲ್ಲಿಯೇ ಆ ಕುಟುಂಬಕ್ಕೆ ಆಶ್ರಯ ನೀಡಲಾಯಿತು. ಆಟೋ, ಟ್ಯಾಕ್ಸಿ, ಪ್ರವಾಸಿ ವಾಹನ, ಖಾಸಗಿ ಬಸ್‌, ಆ್ಯಪ್‌ ಆಧಾರಿತ ಟ್ಯಾಕ್ಸಿ ಸೇರಿ ಮಾದರಿ ವಾಹನಗಳು ರಸ್ತೆಗೆ  ಇಳಿಯಲಿಲ್ಲ. ಸರಕು ಸಾಗಣೆ ವಾಹನಗಳ ಸಂಚಾರವೂ ಕಡಿಮೆ ಇತ್ತು. ಅಗತ್ಯ ವಸ್ತುಗಳ ಸಾಗಣೆ ವಾಹನ ಎಂದಿನಂತೆ ಸಂಚರಿಸಿದವು.

Advertisement

Udayavani is now on Telegram. Click here to join our channel and stay updated with the latest news.

Next