Advertisement
ಘಟ್ಲೋಡಿಯಾ ಮತ್ತು ಚೊರ್ಯಾಸಿ ಕ್ಷೇತ್ರಗಳಲ್ಲಿ ಸುಮಾರು 2 ಲಕ್ಷ ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿಗಳು ಜಯ ಸಾಧಿಸಿದ್ದಾರೆ. ಸತತ 2ನೇ ಬಾರಿಗೆ ಘಟೊÉàಡಿಯಾದಲ್ಲಿ ಜಯಭೇರಿ ಬಾರಿಸಿರುವ ಸಿಎಂ ಭೂಪೇಂದ್ರ ಪ ಟೇಲ್ ತಮ್ಮ ಸಮೀಪದ ಪ್ರತಿಸ್ಪರ್ಧಿಯನ್ನು 1.92 ಲಕ್ಷ ಮತಗಳ ಅಂತರದಿಂದ ಪರಾಭವಗೊಳಿಸಿದ್ದಾರೆ.ಸೂರತ್ ವೆಸ್ಟ್, ಎಲ್ಲಿಸ್‌ಬ್ರಿಡ್ಜ್, ರಾಜ್‌ಕೋಟ್ ವೆಸ್ಟ್ ಸೇರಿದಂತೆ 8 ಸೀಟುಗಳಲ್ಲಿ ಬಿಜೆಪಿಯ ಗೆಲುವಿನ ಅಂತರ 1 ಲಕ್ಷದಿಂದ 1.5 ಲಕ್ಷ ಮತಗಳಾಗಿದ್ದರೆ, ಕನಿಷ್ಠ 15 ಕ್ಷೇತ್ರಗಳಲ್ಲಿ ಇದು 70 ಸಾವಿರದಿಂದ 1 ಲಕ್ಷದೊಳಗೆ ಇದೆ.
Related Articles
Advertisement
ಇದೇ ವೇಳೆ, ಕಾಂಗ್ರೆಸ್‌ನ ಸಾಂಪ್ರದಾಯಿಕ ಅಲ್ಪಸಂಖ್ಯಾಕ ಮತಗಳನ್ನು ವಿಭಜಸಿದ್ದೇ ಆಪ್ ಮತ್ತು ಅಸಾದುದ್ದೀನ್ ಒವೈಸಿ ಅವರ ಎಐಎಂಐಎಂ ಎಂದು ವಿಶ್ಲೇಷಿಸಲಾಗಿದೆ. ಇದರಿಂದಾಗಿಯೇ ಪ್ರಮುಖ ವಿಪಕ್ಷ ಕಾಂಗ್ರೆಸ್‌ನ ಮತಹಂಚಿಕೆಯು ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ.
15 ಪಟ್ಟು ಅಧಿಕ: ಮೊರ್ಬಿ ತೂಗುಸೇತುವೆ ದುರಂತವು ಬಿಜೆಪಿಯ ಗೆಲುವಿನ ನಾಗಾ ಲೋಟಕ್ಕೆ ಯಾವುದೇ ಅಡ್ಡಿ ಉಂಟುಮಾಡಿಲ್ಲ ಎನ್ನುವುದಕ್ಕೆ ಸಾಕ್ಷಿ ಎಂಬಂತೆ, ಇಲ್ಲಿ ಕಣಕ್ಕಿಳಿದಿದ್ದ ಬಿಜೆಪಿ ಅಭ್ಯರ್ಥಿ ಬರೋಬ್ಬರಿ 62 ಸಾವಿರ ಮತಗಳ ಅಂತರದಿಂದ ಗೆದ್ದಿದ್ದಾರೆ. ಈ ಬಾರಿ ಬಿಜೆಪಿ ಟಿಕೆಟ್‌ನಿಂದ ಕಣಕ್ಕಿಳಿದಿದ್ದ ಕಾಂತಿಲಾಲ್ ಅಮೃತೀಯ ಅವರ ಗೆಲುವಿನ ಅಂತರವು ಕಳೆದ ಬಾರಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಅಭ್ಯರ್ಥಿ ಪಡೆದಿದ್ದ ಮತಕ್ಕಿಂತ 15 ಪಟ್ಟು ಅಧಿಕ.
ಜಗತ್ತಿನ ಪತ್ರಿಕೆಗಳಲ್ಲೂ ಸುದ್ದಿ… ಗುಜರಾತ್‌ನಲ್ಲಿ ಬಿಜೆಪಿ ಅಭೂತಪೂರ್ವ ಸಾಧನೆ ಮಾಡಿದ್ದು ಜಗತ್ತಿನ ಪ್ರಮುಖ ಪತ್ರಿಕೆಗಳಲ್ಲಿಯೂ ವರದಿಯಾಗಿದೆ. “ದ ಸ್ಟ್ರಾಟಿಸ್ ಟೈಮ್ಸ್ ಆಫ್ ಸಿಂಗಾಪುರ್’, “ಅಲ್ ಜಜೀರಾ’, “ಇಂಡಿಪೆಂಡೆಂಟ್’, “ಎಬಿಸಿ ನ್ಯೂಸ್’ ಸೇರಿದಂತೆ ಪ್ರಮುಖ ಪತ್ರಿಕೆಗಳಲ್ಲಿ ಗುಜರಾತ್ ಚುನಾವಣೆ ಬಗ್ಗೆ ಸಚಿತ್ರ ವರದಿಗಳು ಪ್ರಕಟವಾಗಿವೆ. “ದ ಗಾರ್ಡಿಯನ್’ ಪತ್ರಿಕೆಯು “2024ರಲ್ಲಿ ಲೋಕಸಭೆ ಚುನಾವಣೆ ನಡೆಯಲಿರುವಂತೆಯೇ ಪ್ರಧಾನಿ ಮೋದಿಯವರು ಬಿಜೆಪಿಗೆ ಹೆಚ್ಚಿನ ಸ್ಥಾನ ಗೆದ್ದುಕೊಡುವುದರ ಮೂಲಕ ಹೊಸ ಹುರುಪು ತಂದುಕೊಟ್ಟಿದ್ದಾರೆ’ ಜಪಾನ್‌ನ ನಿಕ್ಕಿ ಏಷ್ಯಾ ಪತ್ರಿಕೆ”ಗುಜರಾತ್‌ನಲ್ಲಿ ಪ್ರಧಾನಿ ಮೋದಿ ಜನಪ್ರಿಯ ನಾಯಕರಾಗಿದ್ದಾರೆ. 13 ವರ್ಷಗಳ ಕಾಲ ಅವರು ಅಲ್ಲಿ ಮುಖ್ಯಮಂತ್ರಿಯಾಗಿದ್ದರು. ಜತೆಗೆ 1995ರಲ್ಲಿ ಅವರು ರಾಜ್ಯದಲ್ಲಿ ನಾಯಕತ್ವ ವಹಿಸಿದ ಬಳಿಕ ಬಿಜೆಪಿ ಸೋತಿಲ್ಲ’ ಎಂದು ಹೇಳಿದೆ. “ಗುಜರಾತ್‌ನಲ್ಲಿ ಬಿಜೆಪಿಗೆ ಸಿಕ್ಕಿದ ಜಯ 2024ರ ಚುನಾವಣೆಯಲ್ಲಿ ಅನುಕೂಲವಾಗಲಿದೆ’
ಎಂದು “ದ ಗಾರ್ಡಿಯನ್’ ವರದಿ ಮಾಡಿದೆ. 45 ಹೊಸಬರಲ್ಲಿ 43 ಮಂದಿಗೆ ಜಯ
ಗುಜರಾತ್ ಚುನಾವಣೆಯಲ್ಲಿ ಬಿಜೆಪಿ ಹಲವು ಹಾಲಿ ಶಾಸಕರನ್ನು ಕೈಬಿಟ್ಟು, 45 ಹೊಸ ಮುಖಗಳಿಗೆ ಟಿಕೆಟ್ ನೀಡಿತ್ತು. ಇವರಲ್ಲಿ ಇಬ್ಬರು ಮಾತ್ರ ಸೋಲುಂಡಿದ್ದು, ಉಳಿದ 43 ಮಂದಿಯೂ ಗೆಲುವಿನ ನಗೆ ಬೀರಿದ್ದಾರೆ. ಆಡಳಿತ ವಿರೋಧಿ ಅಲೆಯನ್ನು ಹತ್ತಿಕ್ಕಲೆಂದೇ ಬಿಜೆಪಿ, ಮಾಜಿ ಸಿಎಂ ರೂಪಾಣಿ ಸೇರಿದಂತೆ 45 ಶಾಸಕರಿಗೆ ಟಿಕೆಟ್ ನಿರಾಕರಿಸಿತ್ತು. ಈ ಕಾರ್ಯತಂತ್ರವು ಫಲಿಸಿದೆ. ಬೋಟಾಡ್ ಕ್ಷೇತ್ರದಲ್ಲಿ ಆಪ್ ಮತ್ತು ವಘೋಡಿಯಾದಲ್ಲಿ ಪಕ್ಷೇತರ ಅಭ್ಯರ್ಥಿಯು ಬಿಜೆಪಿ ಅಭ್ಯರ್ಥಿಯನ್ನು ಸೋಲಿಸಿದ್ದಾರೆ. ಇದೇ ವೇಳೆ ಆಡಳಿತಾರೂಢ ಬಿಜೆಪಿ ಪ್ರಚಂಡ ಜಯ ಗಳಿಸಿದ್ದರೂ ಒಬ್ಬರು ಸಚಿವರು ಸೇರಿದಂತೆ ಬಿಜೆಪಿಯ 7 ಮಂದಿ ಹಾಲಿ ಶಾಸಕರು ಸೋಲಿನ ರುಚಿ ಕಂಡಿದ್ದಾರೆ. 15 ಮಹಿಳೆಯರಿಗೆ ಜಯ
ಗುಜರಾತ್ ಅಸೆಂಬ್ಲಿ ಚುನಾವಣೆಯಲ್ಲಿ ಗೆದ್ದ ಮಹಿಳಾ ಅಭ್ಯರ್ಥಿಗಳ ಸಂಖ್ಯೆ ಸ್ವಲ್ಪಮಟ್ಟಿಗೆ ಹೆಚ್ಚಳವಾಗಿದೆ. ಕಳೆದ ಚುನಾವಣೆಯಲ್ಲಿ 13 ಮಹಿಳೆಯರು ಗೆಲುವು ಸಾಧಿಸಿದ್ದರೆ ಈ ಬಾರಿ 15 ಮಂದಿ ಜಯಮಾಲೆ ಧರಿಸಿದ್ದಾರೆ. ಈ ಪೈಕಿ 14 ಮಂದಿ ಬಿಜೆಪಿ ಅಭ್ಯರ್ಥಿಗಳಾದರೆ ಒಬ್ಬರು ಕಾಂಗ್ರೆಸ್‌ನವರು. ವಿವಿಧ ರಾಜಕೀಯ ಪಕ್ಷಗಳಿಂದ ಮತ್ತು ಸ್ವತಂತ್ರರಾಗಿ ಒಟ್ಟು 139 ಮಹಿಳೆಯರು ಕಣಕ್ಕಿಳಿದಿದ್ದರು. ದಿಲ್ಲಿ ಎಂಸಿಡಿ: ಕಾಂಗ್ರೆಸ್‌ಗೆ ಮತ್ತೆ ನಷ್ಟ
ದಿಲ್ಲಿ ಮಹಾನಗರ ಪಾಲಿಕೆ ಚುನಾವಣೆ ಮುಗಿದ ಬೆನ್ನಲ್ಲೇ ಕಾಂಗ್ರೆಸ್‌ನ ಇಬ್ಬರು ಕೌನ್ಸಿಲರ್‌ಗಳು ಶುಕ್ರವಾರ ಆಪ್‌ಗೆ ಸೇರ್ಪಡೆಯಾಗಿದ್ದಾರೆ. ಈ ಮೂಲಕ ಕಾಂಗ್ರೆಸ್‌ನ ಸದಸ್ಯ ಬಲ 7ಕ್ಕೆ ಕುಸಿದಿದೆ. ವಿಶೇಷವೆಂದರೆ ಪಕ್ಷಾಂತರ ನಿಗ್ರಹ ಕಾನೂನು ಎಂಸಿಡಿ ಚುನಾವಣೆಗೆ ಅನ್ವಯವಾಗುವುದಿಲ್ಲ. ಗುಜರಾತ್ ಫಲಿತಾಂಶವು ನಮಗೆ ಆತ್ಮವಿಮರ್ಶೆ ಮಾಡಿಕೊಳ್ಳುವ ಮತ್ತು ಕೆಲವು ಕಠಿಣ ನಿರ್ಧಾರ ಕೈಗೊಳ್ಳುವ ಅಗತ್ಯತೆಯನ್ನು ತೋರಿಸಿದೆ. ಆಮ್ ಆದ್ಮಿ ಪಕ್ಷ ಮತ್ತು ಎಐಎಂಐಎಂ ಆಡಳಿತಾರೂಢ ಬಿಜೆಪಿಯ “ಅನೌಪಚಾರಿಕ ಪಾಲುದಾರ’ ಪಕ್ಷಗಳು ಎಂಬುದು ಸಾಬೀತಾಗಿದೆ.
-ಜೈರಾಂ ರಮೇಶ್, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ