Advertisement

Bengaluru; ಜನನಿಬಿಡ ರಸ್ತೆಯಲ್ಲಿ ಡಚ್ ವ್ಲಾಗರ್ ಮೇಲೆ ಹಲ್ಲೆ: ವ್ಯಾಪಕ ಆಕ್ರೋಶ

03:04 PM Jun 12, 2023 | Team Udayavani |

ಬೆಂಗಳೂರು: ನಗರದ ಚಿಕ್ಕಪೇಟೆ ಪ್ರದೇಶದ ಜನನಿಬಿಡ ರಸ್ತೆಯಲ್ಲಿ ವಿಡಿಯೋ ರೆಕಾರ್ಡ್ ಮಾಡುತ್ತಿದ್ದಾಗ ಡಚ್ ವ್ಲಾಗರ್ ಪೆಡ್ರೊ ಮೋಟಾ ಎಂಬವರ ಮೇಲೆ ಹಲ್ಲೆ ನಡೆಸಲಾಗಿದೆ.

Advertisement

ನೆದರ್ ಲ್ಯಾಂಡ್ ಮೂಲದ ಪೆಡ್ರೊ ಮೋಟಾ ಅವರೊಂದಿಗೆ ಅನುಚಿತವಾಗಿ ವರ್ತಿಸಿ, ಹಲ್ಲೆ ನಡೆಸಿದ ದೂರಿನ ಬಗ್ಗೆ ಆರೋಪಿ ಬೀದಿ ವ್ಯಾಪಾರಿ ನವಾಬ್ ಹಯಾತ್ ಷರೀಫ್ ವಿರುದ್ಧ ಕರ್ನಾಟಕ ಪೊಲೀಸ್ ಕಾಯ್ದೆ ಸೆಕ್ಷನ್ 92 ರ ಅಡಿಯಲ್ಲಿ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ  ಎಂದು ಬೆಂಗಳೂರು ಪಶ್ಚಿಮ ವಿಭಾಗ ಡಿಸಿಪಿ ಲಕ್ಷ್ಮಣ್ ಬಿ.ನಿಂಬರಗಿ ಹೇಳಿದ್ದಾರೆ.


ಘಟನೆಯ ವಿಡಿಯೋ ವೈರಲ್ ಆಗಿದ್ದು ವಿದೇಶಿ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ್ದಕ್ಕಾಗಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಘಟನೆಯ ವಿಡಿಯೋ ವೈರಲ್ ಆಗಿದೆ.

Advertisement

Udayavani is now on Telegram. Click here to join our channel and stay updated with the latest news.

Next