Advertisement

ವಿಗ್‌ ಮತ್ತು ಒಳ ಉಡುಪಿನಲ್ಲಿ 9 ಕೋಟಿ ರೂ. ಮೌಲ್ಯದ ಡ್ರಗ್ಸ್‌: ಮಹಿಳೆ ಬಂಧನ

12:30 AM Dec 21, 2023 | Team Udayavani |

ಮುಂಬಯಿ: ವಿಗ್‌ ಮತ್ತು ಒಳ ಉಡುಪಿನಲ್ಲಿ 9 ಕೋಟಿ ರೂ. ಮೌಲ್ಯದ ಮಾದಕ ವಸ್ತುವನ್ನು ಕಳ್ಳಸಾಗಣೆ ಮಾಡುತ್ತಿದ್ದ ಉಗಾಂಡ ಮೂಲದ ಮಹಿಳೆಯೊಬ್ಬಳು ಮುಂಬಯಿ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದಿರುವ ಘಟನೆ ವರದಿಯಾಗಿದೆ. ಇಥಿಯೋಪಿಯಾದ ಅದ್ದೀಸ್‌ ಅಬಾಬಾ ವಿಮಾನ ನಿಲ್ದಾಣದಿಂದ ಆಗಮಿಸಿದ್ದ ಮಹಿಳೆಯನ್ನು ಮುಂಬಯಿ ವಿಮಾನ ನಿಲ್ದಾಣದಲ್ಲಿ ಕಂದಾಯ ಗುಪ್ತಚರ ಇಲಾಖೆ (ಡಿಆರ್‌ಐ) ಅಧಿಕಾರಿಗಳು ತಡೆಹಿಡಿದು ಪರೀಕ್ಷಿಸಿದ್ದಾರೆ.

Advertisement

ಈ ವೇಳೆ ಆಕೆಯ ವಿಗ್‌ ಮತ್ತು ಒಳ ಉಡುಪಿನಲ್ಲಿ 8.9 ಕೋಟಿ ರೂ. ಮೌಲ್ಯದ 890 ಗ್ರಾಂ ಕೊಕೈನ್‌ ಪತ್ತೆಯಾಗಿದೆ. ಬಳಿಕ ಆಕೆಯನ್ನು ಬಂಧಿಸಿ, ನ್ಯಾಯಾಂಗ ತನಿಖೆಗೆ ಒಳಪಡಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಡಿಆರ್‌ಐ ಇಂಥ ವಿಶಿಷ್ಟ ಪತ್ತೆ ಕಾರ್ಯಾಚರಣೆಯಲ್ಲಿ ಪರಿಣತವಾಗಿದ್ದು, ಈ ಹಿಂದೆಯೂ ಸ್ಯಾನಿಟರಿ ಪ್ಯಾಡ್‌, ವಿಸ್ಕಿ ಬಾಟಲ್‌ ಸೇರಿದಂತೆ ವಿವಿಧ ರೀತಿಯಲ್ಲಿ ಅಡಗಿಸಿ ಸಾಗಿಸಲು ಯತ್ನಿಸಿದ್ದ ಮಾದಕವಸ್ತುಗಳನ್ನು ಪತ್ತೆಹಚ್ಚಿತ್ತು.

Advertisement

Udayavani is now on Telegram. Click here to join our channel and stay updated with the latest news.

Next