Advertisement

Bengaluru: ಬ್ಯಾಗ್‌ ಪರಿಶೀಲನೆ ವೇಳೆ ವಿಮಾನ ನಿಲ್ದಾಣ ಸಿಬ್ಬಂದಿಗೆ ಬೆದರಿಕೆ: ಕೇಸ್‌

12:34 PM Nov 02, 2024 | Team Udayavani |

ಬೆಂಗಳೂರು: ವಿಮಾನ ನಿಲ್ದಾಣದಲ್ಲಿ ಬ್ಯಾಗ್‌ ಪರಿಶೀಲನೆ ವೇಳೆ ಅನುಮಾ ನಾಸ್ಪದ ವಸ್ತು ಕಂಡು ಬಂದ ಹಿನ್ನೆಲೆಯಲ್ಲಿ ಬ್ಯಾಗ್‌ ಅನ್ನು ಪರಿಶೀಲಿಸಲು ಮುಂದಾದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಿಬ್ಬಂದಿಗೆ ನಿಂದಿಸಿ ಬೆದರಿಕೆ ಹಾಕಿದ ಇಬ್ಬರ ವಿರುದ್ಧ ಬಿಐಎಎಲ್‌ ಪೊಲೀಸ್‌ ಠಾಣೆಯಲ್ಲಿ ಎಫ್ಐಆರ್‌ ದಾಖಲಾಗಿದೆ.

Advertisement

ಕೆಐಎಎಲ್‌ನ ಸಿಐಎಸ್‌ ಎಫ್ ವಿಭಾಗದ ಎಎಸ್‌ಜಿ ಪ್ರದ್ಯುಮ್ನ ಕುಮಾರ್‌ ನೀಡಿರುವ ದೂರು ಆಧರಿಸಿ ಬಿಹಾರ ಮೂಲದ ಅಮನ್‌ರಾಜ್‌ (32), ಜಾರ್ಖಂಡ್‌ ಮೂಲದ ಅದಿಥಿ ಕುಮಾರಿ (28) ವಿರುದ್ಧ ಕೇಸು ದಾಖಲಾಗಿದೆ. ಅ.29ರಂದು ಇಂಡಿಗೋ ವಿಮಾನದಲ್ಲಿ ಭುವನೇಶ್ವರಗೆ ಪ್ರಯಾಣಿಸ ಲೆಂದು ಆರೋಪಿಗಳು ಕೆಐಎಎಲ್‌ಗೆ ಬಂದಿದ್ದರು. ಬ್ಯಾಗ್‌ನಲ್ಲಿ ಅನುಮಾ ನಾಸ್ಪದ ವಸ್ತು ಕಂಡು ಬಂದಿತ್ತು. ಬ್ಯಾಗ್‌ ಅನ್ನು ಕೆಐಎಎಲ್‌ ಸಿಬ್ಬಂದಿ ತಪಾಸಣೆ ಮಾಡಲು ಮುಂದಾದಾಗ ಅವಾಚ್ಯ ಶಬ್ದಗಳಿಂದ ನಿಂದಿಸಿ, ಬೆದರಿಕೆ ವೊಡ್ಡಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದರು. ಈ ವಿಚಾರ ವಿಮಾನ ನಿಲ್ದಾಣದ ಸಿಬ್ಬಂದಿ ಮೇಲಧಿ ಕಾರಿಗಳ ಗಮನಕ್ಕೆ ತಂದು ಇವರ ಬ್ಯಾಗನ್ನು ಪರಿಶೀಲಿಸಿದಾಗ ಅದರಲ್ಲಿ ಲೈಟರ್‌ ಕಂಡು ಬಂದಿತ್ತು ಎಂದು ಎಫ್ ಐಆರ್‌ನಲ್ಲಿ ಉಲ್ಲೇಖೀಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next