ದೇವನಹಳ್ಳಿ: ತಾಲೂಕಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನದಲ್ಲಿ ಬೀದಿ ನಾಯಿಗಳ ಕಾಟ ಹೆಚ್ಚಿದ್ದು ಪ್ರಯಾಣಿಕರು ಹೈರಾಣಾಗಿದ್ದಾರೆ. ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಬೀದಿನಾಯಿಗಳ ಹಾವಳಿ, ಹಿಂಡನ್ನು ನೋಡಿದ್ದೇವೆ. ಆದರೆ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೂ ನಾಯಿಗಳ ಹಿಂಡನ್ನು ನೋಡುವಂತೆ ಆಗಿದೆ.
ಹಾವಳಿ ತಪ್ಪಿಸಿ: ನಿಯಮದ ಪ್ರಕಾರ ಬೀದಿ ನಾಯಿಗಳನ್ನು ಹಿಡಿದು ಅದಕ್ಕೆ ಸಂತಾನಹರಣ ಚಿಕಿತ್ಸೆ ಮಾಡಿದ್ದಲ್ಲಿ ನಾಯಿಗಳ ಸಂಖ್ಯೆ ತುಸು ಕಡಿಮೆಯಾಗು ವುದರಲ್ಲಿ ಅನುಮಾನವಿಲ್ಲ. ಈ ಸಂಬಂಧಪಟ್ಟವರು ಇನ್ನಾದರೂ ಗಮನ ಹರಿಸಿ ಬೀದಿ ನಾಯಿಗಳ ಹಾವಳಿ ನಿಯಂತ್ರಿಸಬೇಕೆಂದು ಪ್ರಯಾಣಿಕರು ಒತ್ತಾಯಿ ಸಿದ್ದಾರೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 1, ಟರ್ಮಿನಲ್ 2 ಆಗಮನ ಮತ್ತು ನಿರ್ಗಮನ ದ್ವಾರಗಳ ಹತ್ತಿರದಲ್ಲಿ ಬೀದಿ ನಾಯಿಗಳು ಹೆಚ್ಚು ಇರುತ್ತದೆ. ಪ್ರಯಾಣಿಕರು ವಿಶ್ರಾಂತಿ ಪಡೆಯಲು ನಿರ್ಮಿಸಲಾದ ಲಾಂಜ್ ಸ್ಥಳಗಳಲ್ಲಿಯೇ ನಾಯಿಗಳೂ ವಿಶ್ರಾಂತಿ ಪಡೆಯುತ್ತಿವೆ. ಆಹಾರ ಮಳಿಗೆಗಳಿಂದ ತಿಂಡಿ ತಿನಿಸು ತೆಗೆದುಕೊಳ್ಳುವವರನ್ನು ಆಹಾರಕ್ಕಾಗಿ ಹಿಂಬಾಲಿಸುತ್ತಿವೆ. ಬರ್ಮಾ ಮೂಲದ ಕೋಹಂ ಸೋಹಂ ಎಂಬವರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಡ್ಡಾದಿಡ್ಡಿ ಓಡಾಡುತ್ತಿರುವ ಬೀದಿ ನಾಯಿಗಳ ಚಿತ್ರಗಳನ್ನು ತೆಗೆದು ಎಕ್ಸ್ನಲ್ಲಿ ಹಂಚಿಕೊಂಡಿದ್ದಾರೆ. ಟರ್ಮಿನಲ್ 2 ನಾಯಿಗಳ ಹಾವಳಿ ಎಂದು ಬರೆದುಕೊಂಡಿದ್ದಾರೆ.
ಒತ್ತಾಯ: ವಿಮಾನ ನಿಲ್ದಾಣದ ಟರ್ಮಿನಲ್ಗಳಲ್ಲಿ ಬೀದಿ ನಾಯಿಗಳು ಎಲ್ಲೆಂದರಲ್ಲಿ ಬೀಡು ಬಿಟ್ಟಿದೆ. ಇಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ವಿಮಾನಕ್ಕಾಗಿ ಬರುವ ಪ್ರಯಾಣಿಕರು, ಸಾರ್ವಜನಿಕರು ತೊಂದರೆ ಅನುಭವಿ ಸುವಂತೆ ಆಗಿದೆ. ಇದರಿಂದಾಗಿ ವಿಮಾನ ನಿಲ್ದಾಣದ ಸ್ವತ್ಛತೆ ಹಾಗೂ ಭದ್ರತೆಗೆ ಧಕ್ಕೆ ಆಗಲಿದೆ. ಸಂಬಂಧಪಟ್ಟ ವಿಮಾನ ನಿಲ್ದಾಣ ಪ್ರಾಧಿಕಾರ ಕೂಡಲೇ ಗಮನ ಹರಿಸ ಬೇಕು ಎಂದು ಪ್ರಯಾಣಿಕರು ಒತ್ತಾಯಿಸಿದ್ದಾರೆ. ಇನ್ನು ವಿಮಾನ ನಿಲ್ದಾಣಕ್ಕೆ ಆಗಮಿಸುವ ಪ್ರಯಾಣಿಕರ ಲಗೇಜ್ ಬ್ಯಾಗ್ಗಳ ಹಿಂದೆಯೇ ತಿಂಡಿ ಗಾಗಿ ಹಿಂಬಾಲಿಸುವ ನಾಯಿಗಳು ಯಾವುದೇ ಸಮ ಯದಲ್ಲಿ ದಾಳಿ ನಡೆಸಬಹುದಿದ್ದು, ಇದಕ್ಕೆ ಕಡಿವಾಣ ಹಾಕುವಂತೆ ನಾಗರಿಕರು ಸಾಮಾಜಿಕ ಮಾಧ್ಯಮ ಎಕ್ಸ್ ನಲ್ಲಿ ಪ್ರಯಾಣಿಕರು
ಆಗ್ರಹಿಸುತ್ತಿದ್ದಾರೆ.
ಕಾರ್ಯಪ್ರವೃತ್ತವಾಗಿದ್ದೇವೆ: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬೀದಿ ನಾಯಿಗಳ ಹಾವಳಿಯಿಂದ ಸಮಸ್ಯೆ ಎದುರಿಸಿದ ಪ್ರಯಾಣಿಕರಲ್ಲಿ ಕ್ಷಮೆಯಾಚನೆ ಮಾಡುತ್ತೇವೆ. ನಾಯಿಗಳ ಸಮಸ್ಯೆ ನಿವಾರಣೆಗೆ ಕಾರ್ಯ ಪ್ರವೃತ್ತವಾಗಿದ್ದೇವೆ ಎಂದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪ್ರಾಧಿಕಾರ ತಿಳಿಸಿದೆ. ಕೆಂ
ಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬೀದಿ ನಾಯಿಗಳ ಕಾಟ ತಪ್ಪಿಸಬೇಕು. ಹಿಂಬಾಲಿಸಿಕೊಂಡು ಬರುತ್ತವೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರ ಇದರ ಬಗ್ಗೆ ಗಮನ ಹರಿಸಿ ಪರಿಹಾರ ಒದಗಿಸಬೇಕು.
– ವಸಂತ್, ಪ್ರಯಾಣಿಕರು
-ಎಸ್.ಮಹೇಶ್