Advertisement

Kochi airport; ಶಬರಿಮಲೆ ಭಕ್ತರಿಗೆ ಅನುಕೂಲವಾಗುವಂತೆ ವಿಶೇಷ ವ್ಯವಸ್ಥೆಗಳು

08:49 PM Nov 14, 2024 | Team Udayavani |

ಕೊಚ್ಚಿ: ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ ವಿಮಾನದ ಮೂಲಕ ತೆರಳುವ ಯಾತ್ರಾರ್ಥಿಗಳಿಗಾಗಿ ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿಲುಗಡೆ ತಾಣ ಸ್ಥಾಪಿಸಲಾಗಿದೆ.ದೇಶೀಯ ವಿಮಾನಗಳ ಆಗಮನದ ಭಾಗದಲ್ಲಿ ಪೊಲೀಸ್ ಪೋಸ್ಟ್ ಬಳಿ 5,000 ಚದರ ಅಡಿ ಪ್ರದೇಶದಲ್ಲಿ ಇರುವ ವಿಶೇಷ ಸೌಲಭ್ಯವನ್ನು ಕೇರಳದ ಸಚಿವ ಪಿ.ರಾಜೀವ ಗುರುವಾರ(ನ14) ಉದ್ಘಾಟಿಸಿದರು.

Advertisement

ಭಕ್ತಾದಿಗಳಿಗೆ ಸುಗಮ ಮತ್ತು ಅನುಕೂಲಕರ ತೀರ್ಥಯಾತ್ರೆಯ ಅನುಭವವನ್ನು ಒದಗಿಸಲು ಕೇರಳ ಸರಕಾರವು ಎಲ್ಲಾ ಅಗತ್ಯ ಸೌಲಭ್ಯಗಳನ್ನು ಖಚಿತಪಡಿಸಿದೆ ಎಂದು ಸಚಿವ ಪಿ.ರಾಜೀವ ಹೇಳಿದರು.

“ಹಲವು ವರ್ಷಗಳಿಂದ, ಗಮನಾರ್ಹ ಸಂಖ್ಯೆಯ ಶಬರಿಮಲೆ ಯಾತ್ರಿಕರು ವಿಮಾನದಲ್ಲಿ ಪ್ರಯಾಣಿಸಿದ್ದಾರೆ. ಕಳೆದ ವರ್ಷವಷ್ಟೇ ಶಬರಿಮಲೆ ಯಾತ್ರಾರ್ಥಿಗಳಿಗೆ ವಿಮಾನ ನಿಲ್ದಾಣದಲ್ಲಿ ಮೊದಲು ಟರ್ಮಿನಲ್ ವ್ಯವಸ್ಥೆ ಮಾಡಿದ್ದೆವು. ಕಳೆದ ತೀರ್ಥಯಾತ್ರಾ ವೇಳೆಯಲ್ಲಿ ಸುಮಾರು 6,000 ಭಕ್ತರು ಟರ್ಮಿನಲ್ ಸೌಲಭ್ಯವನ್ನು ಬಳಸಿದ್ದಾರೆ” ಎಂದು ರಾಜೀವ್ ಹೇಳಿದರು.

ಈ ಬಾರಿ ವಿಮಾನ ನಿಲ್ದಾಣದಲ್ಲಿ ಹಾಲ್ಟಿಂಗ್ ಪಾಯಿಂಟ್ ಅನ್ನು ಇನ್ನೂ ಉತ್ತಮ ಸೌಲಭ್ಯಗಳೊಂದಿಗೆ ಪ್ರಾರಂಭಿಸಲಾಗಿದ್ದು.ಭಕ್ತರ ನಿಲುಗಡೆ ತಾಣದಲ್ಲಿ ವಿಮಾನ ಮಾಹಿತಿ ಪ್ರದರ್ಶನ ವ್ಯವಸ್ಥೆ, ಜತೆಗೆ ಆಹಾರ ಕೌಂಟರ್, ಪ್ರಿಪೇಯ್ಡ್ ಟ್ಯಾಕ್ಸಿ ಕೌಂಟರ್ ಮತ್ತು ತಿರುವಾಂಕೂರು ದೇವಸ್ವಂ ಬೋರ್ಡ್ ಒದಗಿಸಿದ ಸಹಾಯ ಡೆಸ್ಕ್ ಸೌಲಭ್ಯ ಒಳಗೊಂಡಿದೆ ಎಂದು ವಿಮಾನ ನಿಲ್ದಾಣದ ಹೇಳಿಕೆ ತಿಳಿಸಿದೆ.

ಹೆಚ್ಚುವರಿಯಾಗಿ, ವಿಮಾನನಿಲ್ದಾಣದಲ್ಲಿನ 0484 ಏರೋ ಲಾಂಜ್‌ನಲ್ಲಿ ಯಾತ್ರಾರ್ಥಿಗಳಿಗೆ ಬಜೆಟ್ ವಸತಿ ಸೌಲಭ್ಯಗಳು ಲಭ್ಯವಿವೆ. ಈ ಸೌಲಭ್ಯಗಳನ್ನು 0484-3053484 ಗೆ ಕರೆ ಮಾಡುವ ಮೂಲಕ ಅಥವಾ 0484reservation@ciasl.in ಗೆ ಇ ಮೇಲ್ ಮಾಡುವ ಮೂಲಕ ಕಾಯ್ದಿರಿಸಬಹುದಾಗಿದೆ.

Advertisement

ಮಾನವೀಯತೆಯ ಸೇವೆ

ನವೆಂಬರ್ 16 ರಿಂದ ಪ್ರಾರಂಭವಾಗುವ ಶಬರಿಮಲೆ ಯಾತ್ರೆಯ ಸಮಯದಲ್ಲಿ ಭಕ್ತರಿಗೆ ಸುಗಮ ಮತ್ತು ಸುರಕ್ಷಿತ ದರ್ಶನವನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ಕೇರಳ ರಾಜ್ಯ ಪೊಲೀಸ್ ಮುಖ್ಯಸ್ಥ ಶೇಖ್ ದರ್ವೇಶ್ ಸಾಹಿಬ್ ಹೇಳಿದ್ದಾರೆ.

ಯಾತ್ರೆಯ ಸಂದರ್ಭದಲ್ಲಿ ಪೊಲೀಸರ ಪಾತ್ರ ಕೇವಲ ಕರ್ತವ್ಯವಲ್ಲ ಆದರೆ ಮಾನವೀಯತೆಯ ಸೇವೆಯಾಗಿದೆ. ಇದಲ್ಲದೆ, ಕಾಣೆಯಾದ ವ್ಯಕ್ತಿಗಳನ್ನು ಪತ್ತೆಹಚ್ಚುವುದು, ಜೇಬುಗಳ್ಳತನವನ್ನು ತಡೆಗಟ್ಟುವುದು, ಮೊಬೈಲ್ ಫೋನ್‌ಗಳ ಕಳ್ಳತನ ಮತ್ತು ಸೈಕೋಟ್ರೋಪಿಕ್ ವಸ್ತುಗಳ ಮಾರಾಟದಂತಹ ನಿರ್ಣಾಯಕ ವಿಚಾರಗಳನ್ನು ಪರಿಹರಿಸುವ ಅಗತ್ಯವನ್ನು ಸಾಹಿಬ್ ಒತ್ತಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next