Advertisement

Delhi airport; 15 ಕೋಟಿ ರೂ. ಮೌಲ್ಯದ ಹೈಡ್ರೋಪೋನಿಕ್ ಗಾಂಜಾ ಸಹಿತ ಮಹಿಳೆ ವಶಕ್ಕೆ

07:38 PM Oct 21, 2024 | Team Udayavani |

ಹೊಸದಿಲ್ಲಿ: ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಮಹಿಳಾ ಪ್ರಯಾಣಿಕಳೊಬ್ಬಳಿಂದ ಭಾನುವಾರ(ಅ20) 15 ಕೋಟಿ ರೂ.ಗೂ ಹೆಚ್ಚು ಮೊಲ್ಯದ ಹೈಡ್ರೋಪೋನಿಕ್ ಗಾಂಜಾ ವಶಪಡಿಸಿಕೊಂಡಿದ್ದಾರೆ

Advertisement

ನಿರ್ದಿಷ್ಟ ಮಾಹಿತಿಯ ಆಧಾರದ ಮೇಲೆ, ಭಾನುವಾರ ವಿವಿಧ ವಿಮಾನಗಳ ಮೂಲಕ ಬ್ಯಾಂಕಾಕ್‌ನಿಂದ ದೆಹಲಿ ಮೂಲಕ ಪ್ಯಾರಿಸ್‌ಗೆ ಪ್ರಯಾಣಿಸುತ್ತಿದ್ದ ಅಂತಾರಾಷ್ಟ್ರೀಯ ಸಾರಿಗೆ ಮಹಿಳಾ ಪ್ರಯಾಣಿಕರ ಬ್ಯಾಗ್ ಗಳನ್ನು ಕಸ್ಟಮ್ಸ್ ಸ್ಕ್ಯಾನಿಂಗ್ ಮಾಡಲಾಯಿತು. ಚೆಕ್ ಇನ್ ಬ್ಯಾಗ್ ಅನ್ನು ಸ್ಕ್ಯಾನ್ ಮಾಡಿದ ನಂತರ, ಅಧಿಕಾರಿಗಳು ಮಾದಕ ವಸ್ತುವನ್ನು ಪತ್ತೆಹಚ್ಚಿದ್ದಾರೆ.

“ಕಸ್ಟಮ್ಸ್ K9 ಸ್ಕ್ವಾಡ್‌ನ ಕರ್ತವ್ಯದಲ್ಲಿರುವ ಶ್ವಾನವನ್ನು ಲಗೇಜ್‌ಗಳನ್ನು ಪರಿಶೀಲಿಸಲು ಕರೆಯಲಾಯಿತು. ಪ್ರಯಾಣಿಕರ ಸಮ್ಮುಖದಲ್ಲಿ ಬ್ಯಾಗ್‌ಗಳನ್ನು ತೆರೆಯಲಾಯಿತು, ಅದರಲ್ಲಿ 15. ಕೆಜಿ ಹಸಿರು ಮಿಶ್ರಿತ ಕಂದು ಹೈಡ್ರೋಫೋಬಿಕ್ ಗಾಂಜಾವನ್ನು ಎನ್‌ಡಿಪಿಎಸ್ ಕಾಯ್ದೆ, 1985 ರ ಅಡಿಯಲ್ಲಿ ವಶಪಡಿಸಿಕೊಳ್ಳಲಾಗಿದೆ ಎಂದು ಕಸ್ಟಮ್ಸ್ ಇಲಾಖೆಯು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದೆ.

ಹೆಚ್ಚಿನ ವಿಚಾರಣೆಗಾಗಿ ಮಹಿಳೆಯನ್ನು ವಶಕ್ಕೆ ಪಡೆಯಲಾಗಿದೆ ಮತ್ತು ತನಿಖೆ ಪ್ರಕ್ರಿಯೆಯಲ್ಲಿದೆ, ವಶಪಡಿಸಿಕೊಂಡ ವಸ್ತುವಿನ ಮೌಲ್ಯ 15.04 ಕೋಟಿ ರೂಪಾಯಿ ಎಂದು ಕಸ್ಟಮ್ಸ್ ಇಲಾಖೆ ಹೇಳಿದೆ.

ಹೈಡ್ರೋಪೋನಿಕ್ ಗಾಂಜಾವೂ ಮಣ್ಣಿನ ಬದಲಿಗೆ ನೀರು ಆಧಾರಿತ, ಪೋಷಕಾಂಶಯುಕ್ತ ಸಮೃದ್ಧ ದ್ರಾವಣದಲ್ಲಿ ಗಾಂಜಾ ಸಸ್ಯಗಳನ್ನು ಬೆಳೆಸಲಾಗುತ್ತದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next