Advertisement

Flight: ಪ್ರಯಾಣಿಕನಿಂದಲೇ ಬಾಂಬ್‌ ಬೆದರಿಕೆ: ವಿಮಾನ ಭೂಸ್ಪರ್ಶ

12:42 AM Nov 15, 2024 | Team Udayavani |

ರಾಯ್ಪುರ: ಮಹಾರಾಷ್ಟ್ರದ ನಾಗಪುರದಿಂದ ಕೋಲ್ಕತಾಗೆ ತೆರಳುತ್ತಿದ್ದ ಇಂಡಿಗೋ ವಿಮಾನಕ್ಕೆ ಗುರುವಾರ ಹುಸಿ ಬಾಂಬ್‌ ಬೆದರಿಕೆ ಬಂದಿದ್ದು, ವಿಮಾನ ಛತ್ತೀಸ್‌ಗಢದ ರಾಯ್ಪುರದಲ್ಲಿ ತುರ್ತು ಭೂ ಸ್ಪರ್ಶ ಮಾಡಿದೆ.

Advertisement

ಅದೇ ವಿಮಾನದಲ್ಲಿ ತೆರಳುತ್ತಿದ್ದ ಪ್ರಯಾಣಿಕನೇ ಈ ಬಾಂಬ್‌ ಬೆದರಿಕೆ ಬಗ್ಗೆ ಮಾಹಿತಿ ನೀಡಿದ್ದು, ಅದು ಸುಳ್ಳು ಎಂದು ತಿಳಿದ ಬಳಿಕ ಆತನನ್ನು ಪೊಲೀಸರು ಬಂಧಿಸಿದ್ದಾರೆ.

ಬೆದರಿಕೆ ಮಾಹಿತಿ ಹಿನ್ನೆಲೆಯಲ್ಲಿ ಸಿಬಂದಿ ರಾಯ್ಪುರಕ್ಕೆ ವಿಮಾನದ ಮಾರ್ಗ ಬದಲಿಸಿ, ಸ್ವಾಮಿ ವಿವೇಕಾ­ನಂದ ವಿಮಾನ ನಿಲ್ದಾಣದಲ್ಲಿ ತುರ್ತು ಸ್ಪರ್ಶ ಮಾಡಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next