Advertisement

Arrested: 2.3 ಕೋಟಿ ರೂ.ಡ್ರಗ್ಸ್‌ ಜಪ್ತಿ: ವಿದೇಶಿ ಪೆಡ್ಲರ್‌ ಸೆರೆ

01:24 PM Oct 30, 2024 | Team Udayavani |

ಬೆಂಗಳೂರು: ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ವಿದೇಶಿ ಡ್ರಗ್‌ ಪೆಡ್ಲರ್‌ನನ್ನು ಕೇಂದ್ರ ಅಪರಾಧ ವಿಭಾಗ (ಸಿಸಿಬಿ)ದ ಪೊಲೀಸರು ಬಂಧಿಸಿದ್ದಾರೆ. ಆಫ್ರಿಕಾ  ಮೂಲದ ಇನಾಯಂಗ್‌ ಯುನಿಮೈ ಬೋನಿಫೇಸ್‌ (31) ಬಂಧಿತ.

Advertisement

ಆರೋಪಿಯಿಂದ 2.36 ಕೋಟಿ ರೂ. ಮೌಲ್ಯದ ಡ್ರಗ್ಸ್‌ ವಶಕ್ಕೆ ಪಡೆಯಲಾಗಿದೆ. 2020ರಲ್ಲಿ ಮೆಡಿಕಲ್‌ ವೀಸಾ ಪಡೆದು ಬೆಂಗಳೂರಿಗೆ ಬಂದಿರುವ ಆರೋಪಿ, ದೆಹಲಿ ಬಳಿಯ ಗ್ರೇಟರ್‌ ನೋಯ್ಡಾದಲ್ಲಿ ವಾಸವಾಗಿದ್ದು, ಕಟಿಂಗ್‌ ಶಾಪ್‌ನಲ್ಲಿ ಕೆಲಸ ಮಾಡಿಕೊಂಡಿದ್ದ. ಬಳಿಕ ಬೆಂಗಳೂರಿನಲ್ಲಿ ತನ್ನ ದೇಶದ ಮಹಿಳಾ ಸ್ನೇಹಿತೆಯ ಪರಿಚಯವಾಗಿದೆ. ಆಕೆಯ ಸೂಚನೆ ಮೇರೆಗೆ ಬೆಂಗಳೂರಿಗೆ ಬಂದ ಆರೋಪಿ, ಪರಪ್ಪನ ಅಗ್ರಹಾರ ಠಾಣೆ ವ್ಯಾಪ್ತಿಯ ದೊಡ್ಡನಾಗಮಂಗ ಲದಲ್ಲಿ ವಾಸವಾಗಿದ್ದ. ನಂತರ ಆಕೆಯಿಂದ ಎಂಡಿಎಂಎ ಕ್ರಿಸ್ಟಲ್‌ ಅನ್ನು ಪಡೆದು, ಆಕೆ ತಿಳಿಸುವ ಗ್ರಾಹಕ‌ರು ಮತ್ತು ತನಗೆ ಪರಿಚಯವಿರುವ ಗ್ರಾಹಕರು ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದ. ಈ ಮಾಹಿತಿ ಮೇರೆಗೆ ಅ.24ರಂದು ಆತನ ಮನೆ ಮೇಲೆ ದಾಳಿ ನಡೆಸಿ ಬಂಧಿಸಲಾಗಿದೆ ಎಂದು ಸಿಸಿಬಿ ಪೊಲೀಸರು ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next