Advertisement

Train; ಹಳಿತಪ್ಪಿದ ಅಗರ್ತಲಾ-ಲೋಕಮಾನ್ಯ ತಿಲಕ್ ಎಕ್ಸ್‌ಪ್ರೆಸ್‌ನ 8 ಬೋಗಿಗಳು

07:16 PM Oct 17, 2024 | Team Udayavani |

ಲುಮ್ಡಿಂಗ್: ತ್ರಿಪುರಾದ ಅಗರ್ತಲಾದಿಂದ ಮುಂಬೈಗೆ ಹೋಗುತ್ತಿದ್ದ ಎಕ್ಸ್‌ಪ್ರೆಸ್ ರೈಲಿನ ಇಂಜಿನ್ ಮತ್ತು ಏಳು ಬೋಗಿಗಳು ಗುರುವಾರ(ಅ17) ಮಧ್ಯಾಹ್ನ 3:55 ರ ಸುಮಾರಿಗೆ ಅಸ್ಸಾಂನ ದಿಬೋಲಾಂಗ್ ನಿಲ್ದಾಣದಲ್ಲಿ ಹಳಿತಪ್ಪಿವೆ. ಇಲ್ಲಿಯವರೆಗೆ ಯಾವುದೇ ಸಾವು-ನೋವುಗಳ ವರದಿಯಾಗಿಲ್ಲ. ಹಳಿತಪ್ಪಿದ ಬೋಗಿಗಳಲ್ಲಿ ರೈಲಿನ ಪವರ್ ಕಾರ್ ಕೂಡ ಸೇರಿದೆ.

Advertisement

”12520 ಅಗರ್ತಲಾ -LTT ಎಕ್ಸ್‌ಪ್ರೆಸ್‌ನ 8 ಬೋಗಿಗಳು ಇಂದು 3:55 ಕ್ಕೆ ಲುಮ್ಡಿಂಗ್ ಬಳಿಯ ದಿಬೋಲಾಂಗ್ ನಿಲ್ದಾಣದಲ್ಲಿ ಹಳಿತಪ್ಪಿದ್ದು, ಯಾವುದೇ ದೊಡ್ಡ ಸಾವು ನೋವು ಸಂಭವಿಸಿಲ್ಲ ಮತ್ತು ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ” ಎಂದು ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮ ಎಕ್ಸ್ ಪೋಸ್ಟ್ ಮಾಡಿದ್ದಾರೆ.

ರಕ್ಷಣ ಕಾರ್ಯಾಚರಣೆಯ ಮೇಲ್ವಿಚಾರಣೆಗಾಗಿ ಹಿರಿಯ ಅಧಿಕಾರಿಗಳೊಂದಿಗೆ ಅಪಘಾತ ಸಂಭವಿಸಿದ ಸ್ಥಳಕ್ಕೆ ಅಪಘಾತ ಪರಿಹಾರ ರೈಲು ಮತ್ತು ಅಪಘಾತ ಪರಿಹಾರ ವೈದ್ಯಕೀಯ ರೈಲು ಆಗಮಿಸಿದೆ. ಲುಮ್ಡಿಂಗ್-ಬದರ್‌ಪುರ ವಿಭಾಗದಲ್ಲಿ ರೈಲು ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next