Advertisement

Big Operation: ಮಿಜೋರಾಂನಲ್ಲಿ 775 ಕೆ.ಜಿ. ಸ್ಫೋಟಕ ಜಪ್ತಿ: ಇಬ್ಬರ ಸೆರೆ!

03:09 AM Dec 08, 2024 | Team Udayavani |

ಐಜ್ವಾಲ್‌: ಸ್ಫೋಟಕಗಳ ಸಾಗಣೆ ಮತ್ತು ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ ಎಂಬ ಮಾಹಿತಿಯ ಮೇಲೆ ದಾಳಿ ನಡೆಸಿದ ಭದ್ರತಾ ಸಿಬಂದಿ ಮಿಜೋ­ರಾಂನ ಹನಾತಿಯಾಲ್‌ನಲ್ಲಿ ಬರೋಬ್ಬರಿ 775 ಕೆ.ಜಿ. ಸ್ಫೋಟಕವನ್ನು ವಶಪಡಿಸಿ­ಕೊಂಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿ­ಸಿದಂತೆ ಇಬ್ಬರನ್ನು ಸಹ ವಶಕ್ಕೆ ಪಡೆದುಕೊಳ್ಳಲಾಗಿದ್ದು, ಮಿಜೋರಾಂ ಪೊಲೀಸರ ವಶಕ್ಕೆ ನೀಡಲಾಗಿದೆ.

Advertisement

ಮಿಜೋರಾಂ ಪೊಲೀಸರು ಹಾಗೂ ಅಸ್ಸಾಂ ರೈಫ‌ಲ್ಸ್‌ ಪಡೆ ಜಂಟಿಯಾಗಿ ಡಿ.5ರಂದು ಈ ಕಾರ್ಯಾಚರಣೆ ಕೈಗೊಂಡಿದ್ದು, ಈ ಬಗ್ಗೆ ಅಸ್ಸಾಂ ರೈಫ‌ಲ್ಸ್‌ ನ ವಕ್ತಾರ ಮಾಹಿತಿ ನೀಡಿದ್ದಾರೆ. “ಗುಪ್ತಚರ ಮಾಹಿತಿಯನ್ನು ಆಧರಿಸಿ, ಅಸ್ಸಾಂ ರೈಫ‌ಲ್ಸ್‌ ಮತ್ತು ಮಿಜೋರಾಂ ಪೊಲೀಸ್‌ ಪಡೆಗಳು ಈ ದಾಳಿಯನ್ನು ಕೈಗೊಂಡಿದ್ದು, 775 ಕೆ.ಜಿ. ಸ್ಫೋಟಕ, 4,700 ಡಿಟೊನೇಟರ್‌ ಮತ್ತು 2,250 ಮೀ. ಉದ್ದದ ಕಾರ್ಡ್‌ ಟೆಕ್ಸ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಮಿಜೋರಾಂ ಪೊಲೀಸರು ಈ ಕೃತ್ಯಗಳಿಗೆ ಸಂಬಂಧಿಸಿ­ದಂತೆ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ. ಕಳೆದ ತಿಂಗಳಷ್ಟೇ ಈ 2 ಪಡೆಗಳು ಜಂಟಿ ಕಾರ್ಯಾಚರಣೆ ನಡೆಸಿ 12 ಬೋರ್‌ ಸಿಂಗಲ್‌ ಬ್ಯಾರಲ್‌ ಬಂದೂಕುಗಳನ್ನು ವಶಪಡಿಸಿಕೊಂಡಿದ್ದವು.

Advertisement

Udayavani is now on Telegram. Click here to join our channel and stay updated with the latest news.

Next