Advertisement

ಬಂಟ್ವಾಳ ತಾ|ನಲ್ಲಿ 7 ಸಾವಿರಕ್ಕೂ ಹೆಚ್ಚು ಹಕ್ಕುಪತ್ರ ವಿತರಣೆ

02:05 AM Aug 04, 2017 | Team Udayavani |

ಪುಂಜಾಲಕಟ್ಟೆ: ಬಂಟ್ವಾಳ ತಾಲೂಕಿನಲ್ಲಿ 94 ಸಿ ಯೋಜನೆಯಡಿ 7 ಸಾವಿರಕ್ಕೂ ಮಿಕ್ಕಿ ಅರ್ಹ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಿಸಲಾಗಿದೆ. ರಾಜ್ಯದಲ್ಲಿಯೇ ಪ್ರಥಮವಾಗಿ ಬಂಟ್ವಾಳ ತಾಲೂಕಿನಲ್ಲಿ 94 ಸಿಸಿ ಅಡಿಯಲ್ಲಿ ಹಕ್ಕುಪತ್ರ ವಿತರಿಸಲಾಗಿದೆ ಎಂದು ರಾಜ್ಯ ಅರಣ್ಯ ಸಚಿವ ಬಿ.ರಮಾನಾಥ ರೈ ಅವರು ಹೇಳಿದರು. ಅವರು ಸಿದ್ದಕಟ್ಟೆ ಹರ್ಷಲಿ ಸಭಾಂಗಣದಲ್ಲಿ ಗುರುವಾರ ನಡೆದ ಹಕ್ಕು ಪತ್ರ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಬಂಟ್ವಾಳ ತಾಲೂಕು ಸಂಗಬೆಟ್ಟು, ಕರ್ಪೆ ಗ್ರಾಮಗಳ ವ್ಯಾಪ್ತಿಯಲ್ಲಿನ ಫಲಾನುಭವಿಗಳಿಗೆ 94 ಸಿ ಹಕ್ಕುಪತ್ರವನ್ನು ವಿತರಿಸಿ ಮಾತನಾಡಿದರು.

Advertisement

ರಾಜ್ಯ ಸರಕಾರ ಸಾಲಮನ್ನಾ ಮಾಡುವ ಮೂಲಕ ರೈತರಿಗೆ ಆರ್ಥಿಕ ನೆರವು ನೀಡಿದೆ. ಈ ಹಿಂದಿನ ಸರಕಾರ ಸಾಲ ಮನ್ನಾ ಮಾಡುವುದಾಗಿ ಘೋಷಿಸಿದ್ದರೂ ಸಿದ್ದರಾಮಯ್ಯ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಅದರ ಹಣವನ್ನು ಬ್ಯಾಂಕುಗಳಿಗೆ ಪಾವತಿಸಲಾಗಿದೆ. ಬಂಟ್ವಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅರ್ಜಿ ಸಲ್ಲಿಸಿದ ಎಲ್ಲಾ ಫಲಾನುಭವಿಗಳಿಗೆ ಹಕ್ಕುಪತ್ರ ನೀಡುವ ಚಿಂತನೆಯಿದೆ ಎಂದರು. ಸಂಗಬೆಟ್ಟು ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳು ನಡೆದಿವೆ. ಮಳೆ ಮುಗಿದ ಬಳಿಕ ಇನ್ನಷ್ಟು ಅಭಿವೃದ್ಧಿ ಕಾಮಗಾರಿಗಳು ಚಾಲನೆ ಪಡೆದುಕೊಳ್ಳಲಿವೆ ಎಂದು ಸಚಿವರು ತಿಳಿಸಿದರು.

ವೇದಿಕೆಯಲ್ಲಿ ಗೇರು ನಿಗಮದ ಅಧ್ಯಕ್ಷ ಬಿ.ಎಚ್‌.ಖಾದರ್‌, ಅಕ್ರಮ ಸಕ್ರಮ ಸಮಿತಿಯ ಅಧ್ಯಕ್ಷ ಕೆ.ಮಾಯಿಲಪ್ಪ ಸಾಲ್ಯಾನ್‌, ಎಪಿಎಂಸಿ ಸದಸ್ಯ ಪದ್ಮರಾಜ ಬಲ್ಲಾಳ್‌, ಸಂಗಬೆಟ್ಟು ಗ್ರಾ.ಪಂ.ಅಧ್ಯಕ್ಷೆ ಗುಲಾಬಿ ಶೆಟ್ಟಿ, ಗ್ರಾ.ಪಂ.ಉಪಾಧ್ಯಕ್ಷ ಸತೀಶ್‌ ಪೂಜಾರಿ, ಗ್ರಾ.ಪಂ. ಸದಸ್ಯರಾದ ದೇವಪ್ಪ ಕರ್ಕೇರ, ಶೇಖರ ನಾೖಕ್‌, ವಿಮಲಾ ಮೋಹನ್‌, ಸುಭಾಷಿಣಿ, ಮಯ್ಯೆದಿ, ಶಾರದಾ, ಪ್ರಮುಖರಾದ ಜಗದೀಶ ಕೊçಲ, ಶಿವಾನಂದ ರೈ, ಸೀತಾರಾಮ ಶೆಟ್ಟಿ, ಅಶೋಕ ಆಚಾರ್ಯ, ವಾಮನ, ದೇವರಾಜ ಸಾಲ್ಯಾನ್‌, ಎಮ್‌.ಎಚ್‌. ಉಸ್ಮಾನ್‌, ಅಲ್ತಾಫ್‌ ಸಂಗಬೆಟ್ಟು, ಜಯಕರ ಶೆಟ್ಟಿ, ಭುಜಬಲಿ ಕಂಬಳಿ, ರವೀಂದ್ರ ನಾಯಕ್‌ ಮುಗೇರು, ಗೋಪಾಲಕೃಷ್ಣ ಪ್ರಭು, ವಿನಯಕುಮಾರ್‌ ಜೈನ್‌, ಗ್ರಾಮಕರಣಿಕ ಜನಾರ್ದನ, ಎಚ್‌.ಉಮ್ಮರ್‌ ಫಾರೂಕ್‌ ಮತ್ತು ವಿಜಯರಾಜ್‌ ಜೈನ್‌ ಉಪಸ್ಥಿತರಿದ್ದರು. ಕಂದಾಯ ನಿರೀಕ್ಷಕ ನವೀನ್‌ ಸ್ವಾಗತಿಸಿದರು. ತಾ.ಪಂ.ಸದಸ್ಯ ಪ್ರಭಾಕರ ಪ್ರಭು ಅವರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next