Advertisement

ಮಹಾ ರಸ್ತೆ ಅಪಘಾತ: ಒಂದೇ ಕುಟುಂಬದ 6 ಮಂದಿ ಸಹಿತ 7 ಬಲಿ

03:50 PM Oct 17, 2017 | udayavani editorial |

ಮುಂಬಯಿ : ಮಹಾರಾಷ್ಟ್ರದ ಜಳಗಾಂವ್‌ ಜಿಲ್ಲೆಯ ಚಾಳೀಸ್‌ಗಾಂವ್‌ ಪ್ರದೇಶದಲ್ಲಿ ಎರಡು ವಾಹನಗಳು ಪರಸ್ಪರ ಢಿಕ್ಕಿಯಾಗಿ ಸಂಭವಿಸಿದ ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ ಆರು ಮಂದಿಯ ಸಹಿತ ಒಟ್ಟು ಏಳು ಮಂದಿ ಮೃತಪಟ್ಟಿದ್ದಾರೆ.

Advertisement

ಚಾಳೀಸ್‌ಗಾಂವ್‌-ಔರಂಗಾಬಾದ್‌ ರಸ್ತೆಯಲ್ಲಿನ ರಂಜನ್‌ಗಾಂವ್‌ ಫ‌ಟಾ ಎಂಬಲ್ಲಿ ಸೋಮವಾರ ಮಧ್ಯರಾತ್ರಿ ಕಳೆದ ಅರೆ ತಾಸಿನಲ್ಲಿ (12.30) ಲಘು ವಾಣಿಜ್ಯ ವಾಹನ ಮತ್ತು ಕಾರೊಂದು ಪರಸ್ಪರ ಢಿಕ್ಕಿಯಾದವು. ಕಾರಿನ ಸ್ವಲ್ಪವೇ ಹಿಂಭಾಗದಲ್ಲಿದ್ದ ಬೈಕ್‌ ಸವಾರ ಕೂಡ ಈ ಅವಘಡದಲ್ಲಿ ಮೃತಪಟ್ಟ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತರನ್ನು ರಾಜೇಂದ್ರ ಚವಾಣ್‌ 40, ನಾಮದೇವ್‌ ಚವಾಣ್‌ 42, ಶೀಲಾಬಾಯಿ ಚವಾಣ್‌ 35, ಮಿತೇಶ್‌ ಚವಾಣ್‌ 18, ಮಿಥುನ್‌ ಚವಾಣ್‌ 23, ಶುಭಂ ಚವಾಣ್‌ 18 ಮತ್ತು ಬೈಕ್‌ ಸವಾರ ಪಂಡಿತ್‌ ಜಾಧವ್‌ 55 ಎಂದು ಗುರುತಿಸಲಾಗಿದೆ. 

ಮಯೂರ್‌ ಚವಾಣ್‌ ಮತ್ತು ಗೀತಾಬಾಯಿ ಚವಾಣ ಅವರಿಗೆ ಗಂಭೀರ ಗಾಯಗಳಾಗಿವೆ. ಮೃತಪಟ್ಟಿರುವ ಒಂದೇ ಕುಟುಂಬದ ಆರು ಮಂದಿ ಚಾಳೀಸ್‌ಗಾಂವ್‌ ಗ್ರಾಮಾಂತರದ ಬೊಡಾರೆ ಗ್ರಾಮದ ನಿವಾಸಿಗಳಾಗಿದ್ದಾರೆ. ಇವರು ಕಾರಿನಲ್ಲಿ ಔರಂಗಾಬಾದ್‌ಗೆ ಹೋಗುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.   

Advertisement

Udayavani is now on Telegram. Click here to join our channel and stay updated with the latest news.

Next