ಕಲಬುರಗಿ: ಮಾನವ ಸಂಪನ್ಮೂಲಗಳಿಂದ ದೇಶದ ಅಭಿವೃದ್ಧಿ ಸಾಧ್ಯ. ಭಾರತ ಅತೀ ಹೆಚ್ಚು ಮಾನವ ಸಂಪನ್ಮೂಲ ಹೊಂದಿದೆ. ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು, ಅತ್ಯಂತ ವೇಗವಾಗಿ ಬೆಳೆಯುತ್ತಿದೆ ಎಂದು ಬೆಂಗಳೂರಿನ ನ್ಯಾಕ್ ಸಮಿತಿ ಸಲಹೆಗಾರ ಪ್ರೊ| ವಿಷ್ಣುಕಾಂತ್ ಎಸ್. ಚಟ್ನಳ್ಳಿ ಹೇಳಿದರು.
ನಗರದ ಪೂಜ್ಯ ದೊಡ್ಡಪ್ಪ ಅಪ್ಪಾ ತಾಂತ್ರಿಕ ಕಾಲೇಜಿನ ವಿದ್ಯಾರ್ಥಿಗಳ ಚಟುವಟಿಕೆ ಕೇಂದ್ರವಾದ ಸ್ಯಾಕ್ ಆಡಿಟೋರಿಯಂನಲ್ಲಿ ರವಿವಾರ ನಡೆದ ಕಾಲೇಜಿನ 6ನೇ ಪದವಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ, ಪದವಿ ಪ್ರದಾನ ಮಾಡಿ ಅವರು ಮಾತನಾಡಿದರು.
ಭಾರತ ಆರ್ಥಿಕವಾಗಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ, ಸಾಮಾಜಿಕವಾಗಿ ವೈವಿಧ್ಯತೆ ಹೊಂದಿರುವ ರಾಷ್ಟ್ರವಾಗಿದೆ. ತಾಂತ್ರಿಕ ಪದವೀಧರರು ಸ್ವಯಂ ಸಾಮರ್ಥ್ಯ, ಕುಟುಂಬ ಕಾಳಜಿ, ಉದ್ಯೋಗಕ್ಕೆ ಆದ್ಯತೆ, ಪ್ರಕೃತಿ ರಕ್ಷಣೆ, ರಾಜ್ಯದ ಸಶಕ್ತೀಕರಣ, ಶಕ್ತಿಶಾಲಿ ರಾಷ್ಟ್ರ ನಿರ್ಮಾಣಕ್ಕೆ ಒತ್ತು ನೀಡಬೇಕು. ಅಂದಾಗ ಭಾರತವು ವಿಶ್ವದಲ್ಲಿಯೇ ಸರ್ವಶ್ರೇಷ್ಠ ರಾಷ್ಟ್ರವಾಗಿ ಹೊರಹೊಮ್ಮುವುದು ಎಂದು ಹೇಳಿದರು.
ದೇಶಪಾಂಡೆ ಫೌಂಡೇಶನ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಝಾ ಮಾತನಾಡಿ, ದೇಶದ ಆರ್ಥಿಕ ಬೆಳವಣಿಗೆಯನ್ನು ವಿಶ್ವಬ್ಯಾಂಕ್ ಗುರುತಿಸಿದೆ. ಬಿಜಿನೆಸ್ ಬ್ಯಾಂಕಿಂಗ್‌ನಲ್ಲಿ ಭಾರತವು 130ನೇ ಸ್ಥಾನದಿಂದ 100 ಸ್ಥಾನಕ್ಕೆ ಏರಿದೆ. ಕೇಂದ್ರ ಸರ್ಕಾರದ ನೋಟು ಅಮಾನ್ಯಿಕರಣ ಮತ್ತು ಜಿಎಸ್‌ಟಿ ಜಾರಿಯಿಂದ ಸಾಕಷ್ಟು ಬದಲಾವಣೆಯಾಗಿದೆ ಎಂದರು.
ಹೈಕ ಶಿಕ್ಷಣ ಸಂಸ್ಥೆ ಅಧ್ಯಕ್ಷ ಬಸವರಾಜ ಭೀಮಳ್ಳಿ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆ ಉಪಾಧ್ಯಕ್ಷ ಡಾ| ಸೂರ್ಯಕಾಂತ ಜಿ. ಪಾಟೀಲ, ಕಾರ್ಯದರ್ಶಿ ಆರ್. ಎಸ್. ಹೊಸಗೌಡ, ಜಂಟಿ ಕಾರ್ಯದರ್ಶಿ ಶಿವಾನಂದ ಮಾನಕರ್, ಆಡಳಿತ ಮಂಡಳಿ ಸದಸ್ಯರಾದ ಜಿ.ಡಿ. ಅಣಕಲ್, ಬಿ.ಜಿ. ಪಾಟೀಲ್, ಡಾ| ಬಸವರಾಜ ಜಿ. ಪಾಟೀಲ, ಎಂ. ವೀರಣ್ಣಗೌಡ, ಎನ್.ಡಿ. ಪಾಟೀಲ, ಡಾ| ಎ.ವಿ. ದೇಶಮುಖ, ಡಾ| ಅಶೋಕ ಟಿ. ಪಾಟೀಲ, ನಿತಿನ್ ಬಿ. ಜವಳಿ, ಅರುಣಕುಮಾರ ಪಾಟೀಲ,
ಉದಯಕುಮಾರ ಎಸ್. ಚಿಂಚೋಳಿ, ಡಾ| ಎಸ್.ಬಿ. ಕಾಮರೆಡ್ಡಿ, ಪ್ರಾಚಾರ್ಯ ಡಾ| ಎಸ್.ಎಸ್. ಅವಂಟಿ,
ಉಪ ಪ್ರಾಚಾರ್ಯ ಡಾ| ಮಹಾದೇವಪ್ಪ ಜಿ., ಡಾ| ಒ.ಡಿ. ಹೆಬ್ಟಾಳ್, ಡೀನ್ ಡಾ| ರಾಜೇಂದ್ರಕುಮಾರ ಹರಸೂರ್,
ಡಾ| ಬಸವರಾಜ ಅಮರಾಪುರ ಇದ್ದರು.
ಸಮಾರಂಭದಲ್ಲಿ ಒಟ್ಟು 64 ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಪ್ರದಾನ ಮಾಡಲಾಯಿತು. 2015-2016ನೇ ಸಾಲಿನಲ್ಲಿ ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್ ವಿಭಾಗದಲ್ಲಿ ವಿದ್ಯಾರ್ಥಿನಿ ಕೀರ್ತಿ ಅತಿ ಹೆಚ್ಚು ಆರು ಚಿನ್ನದ ಪದಕ ಪಡೆದರು. ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ ಇಂಜಿನಿಯರಿಂಗ್ ವಿಭಾಗದಲ್ಲಿ ಶಿಲ್ಪಾ ಮೂರು ಚಿನ್ನದ ಪದಕ ಪಡೆದರು. 2016-2017ನೇ ಸಾಲಿನಲ್ಲಿ ಕೃಷ್ಣಾ ರಾಠಿ ಅತೀ ಹೆಚ್ಚು ಐದು ಚಿನ್ನದ ಪದಕ, ನಂತರ ಸವಿತಾಕುಮಾರಿ ನಾಲ್ಕು ಚಿನ್ನದ ಪದಕಗಳನ್ನು, ಕಾವ್ಯಾ ಜೋಶಿ ಮೂರು ಚಿನ್ನದ ಪದಕ, ಆದಿತಿ ಎರಡು ಚಿನ್ನದ ಪದಕಗಳನ್ನು ಪಡೆದರು. 2015-2016ನೇ ಸಾಲಿನ 34 ಮತ್ತು 2016-2017ನೇ ಸಾಲಿನಲ್ಲಿ 30 ವಿದ್ಯಾರ್ಥಿಗಳಿಗೆ ಚಿನ್ನದ ಪದಕ ನೀಡಿ ಗೌರವಿಸಲಾಯಿತು.