Advertisement

Stock Market: ಷೇರುಪೇಟೆ ಸೂಚ್ಯಂಕ 500ಕ್ಕೂ ಅಧಿಕ ಅಂಕ ಕುಸಿತ; 23,400ಕ್ಕೆ ಇಳಿದ ನಿಫ್ಟಿ

11:51 AM Nov 18, 2024 | |

ಮುಂಬೈ: ಜಾಗತಿಕ ವಿದ್ಯಮಾನಗಳ ನಡುವೆ ಸೋಮವಾರ (ನ.18) ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆ*ಕ್ಸ್‌ ಆರಂಭಿಕ ವಹಿವಾಟಿನಲ್ಲಿ 500ಕ್ಕೂ ಅಧಿಕ ಅಂಕಗಳ ಕುಸಿತ ಕಂಡಿದೆ.

Advertisement

ಷೇರುಪೇಟೆ ಸಂವೇದಿ ಸೂಚ್ಯಂಕ 514.85 ಅಂಕಗಳಷ್ಟು ಕುಸಿತದೊಂದಿಗೆ 77,064.15 ಅಂಕಗಳಲ್ಲಿ ವಹಿವಾಟು ಮುಂದುವರಿದಿದೆ. ಅದೇ ರೀತಿ ಎನ್‌ ಎಸ್‌ ಇ ನಿಫ್ಟಿ 140.70 ಅಂಕಗಳ ಕುಸಿತದೊಂದಿಗೆ 23,392.00 ಅಂಕಗಳ ಮಟ್ಟಕ್ಕೆ ಇಳಿಕೆಯಾಗಿದೆ.

ನಿಫ್ಟಿ, ಬಿಎಸ್‌ ಇ ಇಳಿಕೆಯ ನಂತರವೂ ಐಜಿಎಲ್‌, ಎಚ್‌ ಡಿಎಫ್‌ ಸಿ, ಟಿಸಿಎಸ್‌, ನಾಲ್ಕೋ, ಝೊಮಾಟೊ, ಅವಂತಿ ಫೀಡ್ಸ್‌, ಮುತ್ತೂಟ್‌ ಫೈನಾನ್ಸ್‌, ಸಿಜಿ ಕನ್ಸೂಮರ್‌, ಏಗಿಸ್‌ ಲಾಜಿಸ್ಟಿಕ್ಸ್‌ ಷೇರುಗಳು ಲಾಭಗಳಿಸಿದೆ.

2024ರ ಡಿಸೆಂಬರ್‌ 1ರಿಂದ ಅಲ್ಯೂಮಿನಿಯಂ ಮತ್ತು ತಾಮ್ರದ ಉತ್ಪಾದನೆಗಳ ಮೇಲಿನ ರಫ್ತು ತೆರಿಗೆಯನ್ನು ಹಿಂಪಡೆಯಲಾಗುವುದು ಎಂದು ಚೀನಾ ಘೋಷಣೆ ಮಾಡಿದ ಪರಿಣಾಮ ಷೇರುಪೇಟೆ ಸೂಚ್ಯಂಕ ಏರಿಕೆ ಕಂಡಿರುವುದಾಗಿ ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next