Advertisement

BJP:ಮಹಾಲಿಂಗಪುರ ಪುರಸಭೆಯ 4 ಸದಸ್ಯರು, 3 ಮುಖಂಡರು ಪಕ್ಷದಿಂದ ಉಚ್ಛಾಟನೆ

08:18 PM Sep 05, 2024 | Team Udayavani |

ಮಹಾಲಿಂಗಪುರ: ಪಟ್ಟಣದ ಪುರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆಯ ಬಗ್ಗೆ ವಿನಾಕಾರಣ ಬಹಿರಂಗ ಪತ್ರಿಕಾ ಹೇಳಿಕೆಗಳನ್ನು ನೀಡುವ ಮೂಲಕ ಪಕ್ಷದ ಶಿಸ್ತನ್ನು ಉಲ್ಲಂಘನೆ ಮಾಡಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದರಿಂದ ಮಹಾಲಿಂಗಪುರ ಪುರಸಭೆಯ ನಾಲ್ವರು ಸದಸ್ಯರಾದ ರವಿ ಜವಳಗಿ, ಪ್ರಲ್ಹಾದ ಸಣ್ಣಕ್ಕಿ, ಬಸವರಾಜ ಹಿಟ್ಟಿನಮಠ, ಬಸವರಾಜ ಚಮಕೇರಿ ಹಾಗೂ ಬಿಜೆಪಿ ಮುಖಂಡರಾದ ಮಹಾಲಿಂಗಪ್ಪ ಮುದ್ದಾಪೂರ, ಚೆನ್ನಪ್ಪ ರಾಮೋಜಿ, ಶಿವಾನಂದ ಹುಣಶ್ಯಾಳ ಸೇರಿ 7 ಜನರನ್ನು ಭಾರತೀಯ ಜನತಾ ಪಕ್ಷದಿಂದ ತತ್ ಕ್ಷಣವೇ ಜಾರಿಗೆ ಬರುವಂತೆ 6 ವರ್ಷಗಳ ಕಾಲ ಉಚ್ಛಾಟನೆ ಮಾಡಲಾಗಿದೆ ಎಂದು ತೇರದಾಳ ಮತಕ್ಷೇತ್ರದ ಬಿಜೆಪಿ ಗ್ರಾಮೀಣ ಮಂಡಳ ಅಧ್ಯಕ್ಷ ಸುರೇಶ ಅಕ್ಕಿವಾಟ ಹೇಳಿದ್ದಾರೆ.

Advertisement

ಗುರುವಾರ(ಸೆ 5) ಪಟ್ಟಣದಲ್ಲಿ ಜಿಎಲ್‌ಬಿಸಿ ಅತಿಥಿ ಗೃಹದಲ್ಲಿ ಜರುಗಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಪುರಸಭೆಯ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಯ ನಿಮಿತ್ಯ ನಮ್ಮ ಮಂಡಳದ ಕಾರ್ಯದರ್ಶಿ ಮಹಾಲಿಂಗಪ್ಪ ಕುಳ್ಳೋಳ್ಳಿ, ಬಿಜೆಪಿ ಮುಖಂಡರಾದ ಬಸನಗೌಡ ಪಾಟೀಲ ನೇತೃತ್ವದಲ್ಲಿ ಸಭೆ ನಡೆದಾಗ ಯಾವ ಸದಸ್ಯರು ಅಧ್ಯಕ್ಷ ಆಕಾಂಕ್ಷಿಯಾಗಿಲ್ಲ ಹಾಗೂ ಕಳೆದ ಚುನಾವಣೆಯಲ್ಲಿ ನಮಗೆ ಬೆಂಬಲಿಸಿದ್ದ ಪಕ್ಷೇತರ ಅಭ್ಯರ್ಥಿ ಕಾಂಗ್ರೇಸ್‌ಗೆ ಹೋದ ಕಾರಣ, ನಮ್ಮ ಪಕ್ಷದಿಂದ ಯಾರು ಸ್ಪರ್ಧಿಸಿರಲಿಲ್ಲ. 2020 ರಿಂದ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡ ನಮ್ಮ ಪಕ್ಷದ ಮೂರು ಸದಸ್ಯರ ಕುರಿತು ಶಾಸಕರು ಹೇಳಿದ ಪತ್ರಿಕಾ ಹೇಳಿಕೆಯನ್ನು ಅಪಾರ್ಥ ಮಾಡಿಕೊಂಡು, ಪಕ್ಷದ ಶಾಸಕರ ವಿರುದ್ದ ಬಹಿರಂಗ ಹೇಳಿಕೆ ನೀಡಿದ್ದಲ್ಲದೇ, ಪಕ್ಷದ ಜಿಲ್ಲಾಧ್ಯಕ್ಷರಿಗೆ ದೂರು ನೀಡಿ ಪಕ್ಷದ ಶಿಸ್ತನ್ನು ಉಲ್ಲಂಘಿಸಿದ ಕಾರಣ ಪಕ್ಷದ ಶಿಸ್ತು ಉಲ್ಲಂಘನೆ ಆರೋಪದಡಿ ಪಕ್ಷದ ಕೋರ್ ಕಮಿಟಿ ನಿರ್ಣಯದಂತೆ ಬಿಜೆಪಿ ಪಕ್ಷದಿಂದ ಮಹಾಲಿಂಗಪುರ ಪುರಸಭೆಯ 4 ಸದಸ್ಯರು, 3 ಮುಖಂಡರನ್ನು ಉಚ್ಛಾಟಿಸಲಾಗಿದೆ ಎಂದರು.

ಬಿಜೆಪಿ ಮುಖಂಡ ಬಸನಗೌಡ ಪಾಟೀಲ ಮಾತನಾಡಿ, ‘ಪಕ್ಷದ ಆಂತರಿಕ ಸಮಸ್ಯೆಯನ್ನು ಬಹಿರಂಗವಾಗಿ 7 ಸದಸ್ಯರು ಮತ್ತು ಶಾಸಕರು ಪರಸ್ಪರ ವಿರುದ್ದವಾಗಿ ಪತ್ರಿಕಾ ಹೇಳಿಕೆಗಳನ್ನು ನೀಡಿದ್ದರು. ಈ ಸಮಸ್ಯೆಯನ್ನು ಪಕ್ಷದಲ್ಲಿ ಮಾತನಾಡಿ ಬಗೆಹರಿಸುವದಾಗಿ ಹೇಳಿದ್ದರು ಸಹ ಸದಸ್ಯರು ಜಿಲ್ಲಾಧ್ಯಕ್ಷರ ಬಳಿ ಹೋಗಿ ದೂರು ನೀಡಿದ್ದರಿಂದಾಗಿ ಪಕ್ಷದ ಕೋರ್ ಕಮಿಟಿ ನಿರ್ಣಯದಂತೆ ಗ್ರಾಮೀಣ ಮಂಡಳದ ಅಧ್ಯಕ್ಷ ಸುರೇಶ ಅಕ್ಕಿವಾಟ ಅವರು 4 ಸದಸ್ಯರು, 3 ಮುಖಂಡರನ್ನು ಪಕ್ಷದಿಂದ ಉಚ್ಛಾಟನೆ ಮಾಡಿದ್ದಾರೆ ಎಂದರು.

ತೇರದಾಳ ಮತಕ್ಷೇತ್ರದ ಬಿಜೆಪಿ ಗ್ರಾಮೀಣ ಮಂಡಳ ಪ್ರಧಾನ ಕಾರ್ಯದರ್ಶಿಗಳಾದ ಆನಂದ ಕಂಪು, ಮಹಾಲಿಂಗಪ್ಪ ಕುಳ್ಳೋಳ್ಳಿ, ಪುರಸಭೆ ಮಾಜಿ ಅಧ್ಯಕ್ಷರಾದ ಜಿ.ಎಸ್.ಗೊಂಬಿ, ಬಿ.ಎಂ.ಯಾದವಾಡ, ಪುರಸಭೆ ಸದಸ್ಯರಾದ ಶೇಖರ ಅಂಗಡಿ, ಬಸವರಾಜ ಯರಗಟ್ಟಿ, ಬಿಜೆಪಿ ಮುಖಂಡರಾದ ಶಂಕರ ಹುನ್ನೂರ, ಅಶೋಕಗೌಡ ಪಾಟೀಲ, ಈರಪ್ಪ ದಿನ್ನಿಮನಿ, ಶಿವಲಿಂಗ ಘಂಟಿ, ಭೀಮಸಿ ಗೌಂಡಿ, ಶಿವನಗೌಡ ಪಾಟೀಲ, ಬಸವರಾಜ ಹುಕ್ಕೇರಿ, ಆನಂದ ಖೋತ, ಅನೀಲ ಮಮದಾಪೂರ, ಶಿವಾನಂದ ಅಂಗಡಿ, ಸಂಗಪ್ಪ ಡೋಣಿ, ಅರ್ಜುನ ಮೋಪಗಾರ, ಮಹೇಶ ಜಿಡ್ಡಿಮನಿ, ಮಹೇಶ ಚಿಂಚಲಿ, ತಿಪ್ಪಣ್ಣ ಬಂಡಿವಡ್ಡರ, ಮಲ್ಲಪ್ಪ ಯರಡ್ಡಿ, ವಿಷ್ಣುಗೌಡ ಪಾಟೀಲ, ಮಹಾಲಿಂಗ ನರಗಟ್ಟಿ, ಹಣಮಂತ ಜಮಾದಾರ, ಮುತ್ತಪ್ಪ ದಲಾಲ, ಮಲ್ಲು ದಲಾಲ, ಮಹಾದೇವ ಸಾವಂತ, ಮಹೇಶ ಮುಕುಂದ, ಮಹಾಂತೇಶ ಪಾತ್ರೋಟ ಸೇರಿದಂತೆ ಹಲವರು ಪತ್ರಿಕಾಗೋಷ್ಠಿಯಲ್ಲಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next