Advertisement

Wrestlers ವಿರುದ್ಧ ಹೇಳಿಕೆ ಬೇಡ: ಬ್ರಜ್‌ ಭೂಷಣ್‌ಗೆ ಬಿಜೆಪಿ ವರಿಷ್ಠರ ತಾಕೀತು

01:24 AM Sep 09, 2024 | Team Udayavani |

ಹೊಸದಿಲ್ಲಿ: ಹರಿಯಾಣ ಚುನಾವಣೆ ಹಿನ್ನಲೆ ಯಲ್ಲಿ ಕಾಂಗ್ರೆಸ್‌ ಸೇರ್ಪಡೆಯಾಗಿರುವ ಕ್ರೀಡಾಪಟು ಗಳಾಗಿ ರುವ ವಿನೇಶ್‌ ಫೋಗಾಟ್‌, ಬಜರಂಗ್‌ ಪೂನಿಯಾ ವಿರುದ್ಧ ಹೇಳಿಕೆ ನೀಡದಂತೆ ಕುಸ್ತಿ ಫೆಡರೇಶನ್‌ ಮಾಜಿ ಅಧ್ಯಕ್ಷ ಬ್ರಜ್‌ ಭೂಷಣ್‌ ಶರಣ್‌ ಸಿಂಗ್‌ರಿಗೆ ಬಿಜೆಪಿ ತಾಕೀತು ಮಾಡಿದೆ.

Advertisement

ವಿನೇಶ್‌ ಮತ್ತು ಬಜರಂಗ್‌ರ ಕಾಂಗ್ರೆಸ್‌ ಸೇರ್ಪಡೆ ಟೀಕಿಸಿದ್ದ ಸಿಂಗ್‌, “ಇವರಿ ಬ್ಬರು ಕುಸ್ತಿಯಲ್ಲಿ ಗಳಿಸಿದ್ದ ಜನಪ್ರಿಯತೆ ಕಾಂಗ್ರೆಸ್‌ ಸೇರ್ಪಡೆಯ ಬಳಿಕ ಜನಮಾನಸದಲ್ಲಿ ಅಳಿಸಿ ಹೋಗಲಿದೆ. ಅವರಿಬ್ಬರೂ ಈ ಚುನಾವಣೆಯಲ್ಲಿ ಗೆಲ್ಲುತ್ತೇವೆ ಎಂಬ ಆಲೋಚನೆ ಯಲ್ಲಿದ್ದಾರೆ. ಆದರೆ ಅವರೆಲ್ಲೇ ಸ್ಪರ್ಧಿಸಿದರೂ ಬಿಜೆಪಿ ಅಭ್ಯರ್ಥಿಗಳು ಸೋಲಿಸಲಿದ್ದಾರೆ’ ಎಂದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next