Advertisement

Siddu Savadi ಉಭಯ ಪುರಸಭೆಗಳ ಸದಸ್ಯರ ಉಚ್ಚಾಟನೆ ನಿಶ್ಚಿತ

06:33 PM Aug 30, 2024 | Team Udayavani |

ರಬಕವಿ-ಬನಹಟ್ಟಿ : ಕಳೆದ ವಾರ ಮಹಾಲಿಂಗಪುರ ಹಾಗೂ ತೇರದಾಳ ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಯಲ್ಲಿ ಬಿಜೆಪಿಗೆ ಭಾರಿ ಮುಖಭಂಗ ಅನುಭವಿಸಿದ್ದರ ಹಿನ್ನೆಲೆಯಲ್ಲಿ ಸದಸ್ಯರ, ಮುಖಂಡರ ಹಾಗೂ ಶಾಸಕರ ಮಧ್ಯ ವಾಕ್ಸಮರ ನಡೆದು ಆರೋಪ ಪ್ರತ್ಯಾರೋಪಗಳು ನಡೆಯುತ್ತಲೇ ಇವೆ ಆದರೆ ಯಾರು ತಪ್ಪಿತಸ್ಥರೆಂಬುದು ಇನ್ನೂ ನಿಗೂಢವಾಗಿಯೇ ಉಳಿದಿದೆ.

Advertisement

ಈಗಾಗಲೇ ಮಹಾಲಿಂಗಪುರದ ಕೆಲ ಮುಖಂಡರು ಹಾಗೂ ಸದಸ್ಯರು ಸೇರಿ ಪಕ್ಷದ ಜಿಲ್ಲಾಧ್ಯಕ್ಷ ಶಾಂತಕುಮಾರ ಪಾಟೀಲರಿಗೆ ಮನವಿ ಸಲ್ಲಿಸಿ ಶಾಸಕರ ರಾಜೀನಾಮೆ ಹಾಗೂ ಉಚ್ಚಾಟನೆಗೆ ಪಟ್ಟು ಹಿಡಿದಿದ್ದರೆ ಇತ್ತ ಸದಸ್ಯರು ವಿಪ್ ಜಾರಿ ಹಾಗೂ ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ಸಿಲುಕಿದ ಕಾರಣ ಪಕ್ಷದಿಂದ ಉಚ್ಚಾಟನೆಯಾಗುವಂತಾಗಿದೆ.

ಈ ಕುರಿತು ಬನಹಟ್ಟಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ತೇರದಾಳ ಶಾಸಕ ಸಿದ್ದು ಸವದಿ, ಈಗಾಗಲೇ ತೇರದಾಳದಲ್ಲಿ ವಿಪ್ ಉಲ್ಲಂಘನೆ ಮಾಡಿದವರ ವಿರುದ್ಧ ಶಿಸ್ತು ಕ್ರಮ ಹಾಗೂ ಮಹಾಲಿಂಗಪುರದ 7ಜನ ಬಿಜೆಪಿ ಸದಸ್ಯರನ್ನೊಳಗೊಂಡು ಪುರಸಭೆ ಸದಸ್ಯರ ಉಚ್ಚಾಟನೆಯಾಗಲಿದೆ. ಇಂದೇ ನೋಟಿಸ್ ಜಾರಿ ಮಾಡಿದ್ದಲ್ಲದೆ ಇನ್ನೆರಡು ದಿನಗಳಲ್ಲಿ ಪಕ್ಷದಿಂದ ವಜಾ ಮಾಡುವ ಕುರಿತು ಸವದಿ ಸ್ಪಷ್ಟಪಡಿಸಿದರು.

ಪಕ್ಷದ್ರೋಹಿಗಳಿಂದ ಕೈ ತಪ್ಪಿದ ಅಧಿಕಾರ: ಮಹಾಲಿಂಗಪುರ ಹಾಗೂ ತೇರದಾಳ ಎರಡೂ ಪುರಸಭೆಗಳಲ್ಲಿ ಕೆಲ ಪಕ್ಷದ್ರೋಹಿಗಳ ನಡೆಯಿಂದ ಸಮಸ್ಯೆ ಎದುರಿಸುವಂತಾಗಿದೆ. ಮುಂದಿನ ದಿನಗಳಲ್ಲಿ ಪಕ್ಷದಲ್ಲಿ ಇಂಥವರಿಗೆ ಅವಕಾಶವಿರುವುದಿಲ್ಲವೆಂಬ ಸಂದೇಶದಿಂದಲೇ ಪಕ್ಷದಿಂದ ವಜಾ ಮಾಡುವ ನಿರ್ಧಾರ ಮಾಡಲಾಗಿದೆ ಎಂದು ಸವದಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next