Advertisement

Tomorrow ಬಿಜೆಪಿ ನಾಯಕರ ಜತೆ ಆರೆಸ್ಸೆಸ್‌ ಸಂಧಾನ ಸಭೆ?

12:08 AM Sep 11, 2024 | Team Udayavani |

ಬೆಂಗಳೂರು: ಪಕ್ಷದಲ್ಲಿ ಸೃಷ್ಟಿಯಾಗಿರುವ ಭಿನ್ನಮತ ಶಮನಕ್ಕಾಗಿ ಬಿಜೆಪಿ ನಾಯಕರ ಜತೆಗೆ ಆರೆಸ್ಸೆಸ್‌ ನಾಯಕರು ಸೆ. 12ರಂದು ಸಭೆ ಸೇರುವ ಸಾಧ್ಯತೆ ಇದೆ.

Advertisement

ಪಕ್ಷದ ಮೂಲಗಳಿಂದ ಈ ಮಾಹಿತಿ ತಿಳಿದು ಬಂದಿದ್ದು ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಆರ್‌. ಅಶೋಕ್‌, ಹಿರಿಯ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌, ಅರವಿಂದ ಲಿಂಬಾವಳಿ, ರಮೇಶ್‌ ಜಾರಕಿಹೊಳಿ ಸೇರಿದಂತೆ ಎರಡೂ ಬಣದ ಸದಸ್ಯರು ಭಾಗಿಯಾಗುವ ಸಾಧ್ಯತೆ ಇದೆ.

ಆದರೆ ಈ ಸಭೆಯ ದಿನಾಂಕವನ್ನು ಪಕ್ಷದ ಮುಖಂಡರು ಇನ್ನೂ ಅಧಿಕೃತವಾಗಿ ಘೋಷಣೆ ಮಾಡಿಲ್ಲ.

Advertisement

Udayavani is now on Telegram. Click here to join our channel and stay updated with the latest news.