Advertisement
ರಾಜ್ಯದಲ್ಲಿ ಬಿಜೆಪಿ ಶಕ್ತಿಯುತವಾಗಿ ಬೆಳೆಯಲು ಶಿವಮೊಗ್ಗ ಕೊಡುಗೆ ಬಹಳಷ್ಟಿದೆ. 1988 ಹಾಗೂ 1999ರಲ್ಲಿ ಬಿ.ಎಸ್.ಯಡಿ ಯೂರಪ್ಪ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾಗಿ ನೇಮಕವಾಗಿ ದ್ದರು. ಬಿಜೆಪಿಗೆ ಅಸ್ತಿತ್ವ, ಕಾರ್ಯಕರ್ತರೇ ಇಲ್ಲದೆ ತಮ್ಮ ಸಂಘಟನೆ, ಹೋರಾಟ, ಪರಿಶ್ರಮದಿಂದ ವಿಧಾನಸಭೆಗೆ ಹೆಚ್ಚೆಚ್ಚು ಶಾಸಕರನ್ನು ಆಯ್ಕೆ ಮಾಡುವಲ್ಲಿ ಯಶಸ್ವಿಯಾದರು. ಶಿವಮೊಗ್ಗದ ಮತ್ತೂಬ್ಬ ನಾಯಕರಾದ ಕೆ.ಎಸ್.ಈಶ್ವರಪ್ಪ 1994 ಹಾಗೂ 2010ರಲ್ಲಿ ರಾಜ್ಯಾಧ್ಯಕ್ಷ ಪಟ್ಟ ಅಲಂಕರಿಸಿ ಪಕ್ಷ ಸಂಘಟನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. 2010ರಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದ ಅವರು ಸಿದ್ದರಾಮಯ್ಯ ಅವರಿಗೆ ಕೌಂಟರ್ ಕೊಡುವಲ್ಲಿ ಯಶಸ್ವಿಯಾಗಿದ್ದರು. ಮತ್ತೂಬ್ಬ ನಾಯಕರಾದ ಡಿ.ಎಚ್.ಶಂಕರಮೂರ್ತಿ 1980ರಲ್ಲಿ ರಾಜ್ಯ ಬಿಜೆಪಿ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ಕೊಡುಗೆ ನೀಡಿದ್ದಾರೆ. ಈಗ ಬಿ.ವೈ. ವಿಜಯೇಂದ್ರ ರಾಜ್ಯಾಧ್ಯಕ್ಷ ಹುದ್ದೆಗೆ ಏರಿದ್ದಾರೆ.
Related Articles
Advertisement
ಶಿವಮೊಗ್ಗ ರಾಜಕಾರಣದಲ್ಲಿ ತಲೆ ಹಾಕದ ವಿಜಯೇಂದ್ರ
ಶಿಕಾರಿಪುರದಲ್ಲೇ ಹುಟ್ಟಿ ಬೆಳೆದರೂ ತಾನು ರಾಜ್ಯ ನಾಯಕರಾಗಿ ಗುರುತಿಸಿಕೊಂಡಿದ್ದರು. ಅಣ್ಣ ಬಿ.ವೈ.ರಾಘವೇಂದ್ರ ಶಿವಮೊಗ್ಗ ರಾಜಕಾರಣದಲ್ಲಿ ಸಕ್ರಿಯವಾಗಿದ್ದರೆ, ತಮ್ಮ ವಿಜಯೇಂದ್ರ ರಾಜ್ಯ ರಾಜಕಾರಣದಲ್ಲಿ ಗುರುತಿಸಿಕೊಂಡಿದ್ದರು. ಶಿವಮೊಗ್ಗ ರಾಜಕಾರಣದಲ್ಲಿ ಹೆಚ್ಚು ಕಾಣಿಸಿಕೊಳ್ಳದ ವಿಜಯೇಂದ್ರ ತಮ್ಮ ತಂದೆಯಿಂದ ಎಲ್ಲ ರಾಜಕೀಯ ಪಟ್ಟುಗಳನ್ನು ಮೈಗೂಡಿಸಿಕೊಂಡಿದ್ದರು. ಬಿಎಸ್‌ವೈ ಡಿಸಿಎಂ, ಸಿಎಂ ಆಗಿದ್ದಾಗ ಪ್ರತಿ ಹಂತದಲ್ಲೂ ಅವರ ಬೆನ್ನಿಗೆ ನಿಂತವರು ವಿಜಯೇಂದ್ರ. 2023ರ ಶಿಕಾರಿಪುರ ವಿಧಾನಭೆ ಚುನಾವಣೆಯಲ್ಲಿ ಭಾರೀ ವಿರೋಧಿ ಅಲೆ ಇದ್ದರೂ ಅದನ್ನು ತಮ್ಮ ಜಾಣ್ಮೆಯಿಂದ ಗೆಲುವಾಗಿ ಪರಿವರ್ತಿಸಿಕೊಂಡರು. ಶಿಕಾರಿಪುರದಿಂದ ಮತ್ತೂಂದು ಶಿಕಾರಿ ಆರಂಭವಾಗಿದೆ. ರಾಜ್ಯಕ್ಕೆ ಮತ್ತೂಬ್ಬ ನಾಯಕನನ್ನು ಕೊಟ್ಟ ಹೆಗ್ಗಳಿಕೆ ಶಿಕಾರಿಪುರಕ್ಕೆ ಸಲ್ಲುತ್ತದೆ.
ವಿಜಯೇಂದ್ರ ಅವರನ್ನು ಕೇಂದ್ರದ ಹಿರಿಯರು ರಾಜ್ಯಾಧ್ಯಕ್ಷರಾಗಿ ಆಯ್ಕೆ ಮಾಡಿದ್ದು ಸಂತೋಷದ ವಿಚಾರ. ದೊಡ್ಡ ಜವಾಬ್ದಾರಿ. ಇದೊಂದು ಯೋಗ. ಮೋದಿ ಪ್ರಧಾನಿ, ನಡ್ಡಾ ರಾಷ್ಟ್ರೀಯ ಅಧ್ಯಕ್ಷರಿದ್ದಾರೆ. ವಿಜಯೇಂದ್ರ ಯಡಿಯೂರಪ್ಪ ಅವರ ರಾಜಕಾರಣವನ್ನು ಹತ್ತಿರದಿಂದ ನೋಡಿ ಬೆಳೆದಿದ್ದಾನೆ. ಲೋಕಸಭೆ, ಜಿಪಂ, ತಾಪಂ ಚುನಾವಣೆಯಲ್ಲಿ ಹೆಚ್ಚಿನ ಶಕ್ತಿ ತುಂಬುವ ಕೆಲಸ ಮಾಡುತ್ತಾನೆ. ಇದೊಂದು ಸವಾಲು, ಯಶಸ್ವಿಯಾಗಿ ನಿರ್ವಹಣೆ ಮಾಡುತ್ತಾನೆ. ನಮ್ಮ ಉದ್ದೇಶ ಸ್ಪಷ್ಟವಾಗಿದೆ. ಹಿರಿಯರನ್ನು ಜತೆಗೆ ತೆಗೆದುಕೊಂಡು ಹೋಗುತ್ತಾನೆ. ರಾಜಕಾರಣವೇ ಒಂದು ಪರೀಕ್ಷೆ. ಇದನ್ನು ವಿಜಯೇಂದ್ರ ಸವಾಲಾಗಿ ಸ್ವೀಕಾರ ಮಾಡುತ್ತಾನೆ.
ಬಿ.ವೈ.ರಾಘವೇಂದ್ರ, ಸಂಸದ
ಮುಂದಿನ ಶುಕ್ರವಾರ ಶಾಸಕಾಂಗ ಪಕ್ಷದ ಸಭೆ
ಬೆಂಗಳೂರು: ಹಿರಿಯರು-ಕಿರಿಯರು ಸೇರಿ ಎಲ್ಲರನ್ನೂ ಒಟ್ಟಿಗೆ ಕರೆದುಕೊಂಡು ಪಕ್ಷ ಸಂಘಟನೆ ಮಾಡುತ್ತೇನೆ. ವಿಪಕ್ಷ ನಾಯಕನ ಆಯ್ಕೆಗೆ ಸಂಬಂಧಪಟ್ಟಂತೆ ಮುಂದಿನ ಶುಕ್ರವಾರ ಶಾಸಕಾಂಗ ಪಕ್ಷದ ಸಭೆ ನಡೆಯುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷರಾಗಿ ನೇಮಕಗೊಂಡಿರುವ ಬಿ.ವೈ.ವಿಜಯೇಂದ್ರ ತಿಳಿಸಿದ್ದಾರೆ.
ಆದೇಶದ ಬಳಿಕ ಬೆಂಗಳೂರಿನಲ್ಲಿ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ಯಡಿಯೂರಪ್ಪ ಮಗ ಎಂಬ ಕಾರಣಕ್ಕೆ ನನ್ನನ್ನು ನೇಮಕ ಮಾಡಿಲ್ಲ. ಆದರೆ ಯಡಿಯೂರಪ್ಪ ಪುತ್ರ ಎಂಬ ಬಗ್ಗೆ ಹೆಮ್ಮೆ ಇದೆ. ಹಿರಿಯರಾದ ವಿ.ಸೋಮಣ್ಣ, ಆರ್.ಅಶೋಕ, ಬಸನಗೌಡ ಪಾಟೀಲ್ ಯತ್ನಾಳ್, ಬಸವರಾಜ ಬೊಮ್ಮಾಯಿ ಸೇರಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುತ್ತೇನೆ ಎಂದು ಹೇಳಿದರು.
ವಿಪಕ್ಷ ನಾಯಕನ ಆಯ್ಕೆಗೆ ಸಂಬಂಧಪಟ್ಟಂತೆ ರಾಷ್ಟ್ರೀಯ ಅಧ್ಯಕ್ಷರ ಜತೆಗೆ ಯಡಿಯೂರಪ್ಪ ಮಾತುಕತೆ ನಡೆಸಿದ್ದಾರೆ. ಮುಂದಿನ ಶುಕ್ರವಾರ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ. ದೆಹಲಿಯಿಂದ ವೀಕ್ಷಕರು ಆಗಮಿಸಲಿದ್ದಾರೆ ಎಂದು ತಿಳಿಸಿದರು.
ವಿಜಯೇಂದ್ರ ಮುಂದಿರುವ ಸವಾಲುಗಳು
1 ಲೋಕಸಭೆ ಚುನಾವಣೆ
2024ರ ಏಪ್ರಿಲ್-ಮೇನಲ್ಲಿ ಲೋಕಸಭೆ ಚುನಾವಣೆ ಎದುರಾಗಲಿದ್ದು, ಈ ಬಾರಿಯೂ ಹೆಚ್ಚು ಸ್ಥಾನ ಗೆಲ್ಲಿಸಿಕೊಡಬೇಕಾದ ಮೊದಲ ಸವಾಲು ವಿಜಯೇಂದ್ರ ಅವರ ಮುಂದಿದೆ. ಕಳೆದ ಬಾರಿ ಪಕ್ಷದ 25 ಮತ್ತು ಸ್ವತಂತ್ರ ಅಭ್ಯರ್ಥಿ ಸುಮಲತಾ ಸೇರಿ 26ರಲ್ಲಿ ಬಿಜೆಪಿ ಗೆದ್ದಿತ್ತು. ಈ ಬಾರಿ ಇಷ್ಟೆ ಸ್ಥಾನಗಳನ್ನು ಗೆದ್ದು, ತಮ್ಮ ಮೇಲಿನ ನಂಬಿಕೆ ಉಳಿಸಿಕೊಳ್ಳುವ ಮತ್ತು ತಮ್ಮ ಸಾಮರ್ಥ್ಯ ಪ್ರದರ್ಶಿಸುವ ಸವಾಲೂ ವಿಜಯೇಂದ್ರ ಮುಂದಿದೆ.
2 ರಾಜ್ಯಾದ್ಯಂತ ಪ್ರವಾಸ
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋತ ಬಳಿಕ ಬಿಜೆಪಿ ಸಂಘಟನೆ ಮೇಲೆ ಬಹುದೊಡ್ಡ ಹೊಡೆತ ಬಿದ್ದಿದೆ. ಬೆಂಗಳೂರು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಪ್ರಮುಖದ ಮುಖಂಡರು, ನಾಯಕರು ಬೇರೆ ಪಕ್ಷಗಳಿಗೆ ವಲಸೆ ಹೋಗುತ್ತಿದೆ. ಈಗ ವಿಜಯೇಂದ್ರ ಅವರು ರಾಜ್ಯಾದ್ಯಂತ ಪ್ರವಾಸ ಮಾಡಿ ಸಂಘಟನೆಗೆ ಜೀವ ತುಂಬಬೇಕಿದೆ. ಸ್ಥಳೀಯ ಮಟ್ಟದಲ್ಲಿರುವ ಸಮಸ್ಯೆಗಳನ್ನೂ ಹೋಗಲಾಡಿಸಬೇಕಾಗಿದೆ.
3 ಆಪರೇಷನ್ ಹಸ್ತ
ಬಿಜೆಪಿಯ ಕೆಲವು ಶಾಸಕರು, ಅದರಲ್ಲೂ ಈ ಹಿಂದೆ ಕಾಂಗ್ರೆಸ್‌ನಿಂದ ಬಿಜೆಪಿಗೆ ಬಂದ ಕೆಲವು ಶಾಸಕರು ಬೇರೆ ಪಕ್ಷದತ್ತ ಹೋಗಲಿದ್ದಾರೆ ಎಂಬ ಮಾತುಗಳಿವೆ. ಇತ್ತೀಚಿನ ದಿನಗಳಲ್ಲಿ ಬೆಂಗಳೂರಿನ ಯಶವಂತಪುರ ಶಾಸಕ ಎಸ್.ಟಿ.ಸೋಮಶೇಖರ್ ಅವರು ಪಕ್ಷದ ನಾಯಕರ ವಿರುದ್ಧವೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇವರನ್ನೂ ಸೇರಿಸಿ, ಯಾವ ಶಾಸಕರು ಬೇರೆ ಪಕ್ಷದತ್ತ ಮುಖ ಮಾಡಿದ್ದಾರೆ ಎಂಬುದನ್ನು ಗುರುತಿಸಿ ಅವರನ್ನು ಮನವೊಲಿಕೆ ಮಾಡಬೇಕಾದ ಸವಾಲು ವಿಜಯೇಂದ್ರ ಅವರ ಮೇಲಿದೆ.
4 ಹಿರಿ-ಕಿರಿಯರ ಸಮ್ಮಿಶ್ರಣ
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ಬಹುತೇಕ ಹಿರಿಯ ನಾಯಕರು ಸೋತಿದ್ದಾರೆ. ಗೆದ್ದಿರುವವರಲ್ಲಿ ಹಿರಿ-ಕಿರಿಯರ ಸಮ್ಮಿಶ್ರಣವಿದೆ. ಪಕ್ಷದ ದೊಡ್ಡ ಹುದ್ದೆ ಮೇಲೆಯೇ ಕಣ್ಣಿಟ್ಟಿರುವ ಮತ್ತು ಮೊದಲಿನಿಂದಲೂ ಬಿಎಸ್‌ವೈ ವಿರುದ್ಧ ಕೊಂಚ ಮುನಿಸು ಇರಿಸಿಕೊಂಡಿರುವ ಬಸನಗೌಡ ಪಾಟೀಲ್ ಯತ್ನಾಳ್‌ರಂಥವರನ್ನು ಮನವೊಲಿಕೆ ಮಾಡುವ ಅನಿವಾರ್ಯತೆ ವಿಜಯೇಂದ್ರ ಅವರ ಮೇಲಿದೆ. ಜತೆಗೆ, ಸೋತಿರುವ ಕೆಲವರು, ಅಂದರೆ ರೇಣುಕಾಚಾರ್ಯರಂಥವರು ಪಕ್ಷದ ನಾಯಕರ ವಿರುದ್ಧವೇ ಸಿಡಿಮಿಡಿ ವ್ಯಕ್ತಪಡಿಸುತ್ತಲೇ ಇದ್ದು, ಇವರನ್ನೂ ಸಮಾಧಾನ ಮಾಡಬೇಕಾಗಿದೆ. ಹಾಗೆಯೇ, ಹೈಕಮಾಂಡ್ ಜತೆಗೂ ಉತ್ತಮ ಬಾಂಧವ್ಯ ಇರಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ.
5 ಹೊಂದಾಣಿಕೆ ಸವಾಲು
ಕೇಂದ್ರದ ಮಟ್ಟದಲ್ಲಿಯೇ ಜೆಡಿಎಸ್ ಜತೆ ಹೊಂದಾಣಿಕೆಯಾಗಿದ್ದು, ಲೋಕಸಭೆ ಚುನಾವಣೆಯಲ್ಲಿ ಜತೆಯಾಗಿಯೇ ಹೆಜ್ಜೆ ಇಡುವುದು ಖಚಿತವಾಗಿದೆ. ಹೀಗಾಗಿ, ಜೆಡಿಎಸ್ ನಾಯಕರ ಜತೆ ಸಮನ್ವಯ ಸಾಧಿಸುವುದು ವಿಜಯೇಂದ್ರ ಅವರ ಮುಂದಿರುವ ದೊಡ್ಡ ಸವಾಲು. ಅದರಲ್ಲೂ ಜೆಡಿಎಸ್ ರಾಜ್ಯಾಧ್ಯಕ್ಷರಾಗಿರುವ ಎಚ್.ಡಿ.ಕುಮಾರಸ್ವಾಮಿ ಅವರು, ಎರಡು ಬಾರಿ ಸಿಎಂ ಆಗಿದ್ದು, ಇವರ ಜತೆ ಹೆಜ್ಜೆ ಇಡುವುದು ಸವಾಲೇ ಸರಿ.
6 ಪ್ರಭಾವಳಿ ಬಿಡಬೇಕು
ತಮ್ಮ ತಂದೆ ಬಿ.ಎಸ್.ಯಡಿಯೂರಪ್ಪ ಅವರು, ಈ ಹಿಂದೆ ಸಿಎಂ ಆಗಿದ್ದವರು, ಬಿಜೆಪಿ ಅಧ್ಯಕ್ಷರಾಗಿ, ಪಕ್ಷವನ್ನು ಕಟ್ಟಿ ಬೆಳೆಸಿದವರು. ಈಗಲೂ ರಾಜ್ಯದಲ್ಲಿ ಯಡಿಯೂರಪ್ಪ ಅವರಿಗೆ ದೊಡ್ಡ ಹೆಸರೇ ಇದೆ. ಹೀಗಾಗಿ, ತಂದೆಯ ಪ್ರಭಾವಳಿಯಿಂದ ಹೊರಬಂದು, ತಮ್ಮದೇ ಆದ ಛಾಪು ಮೂಡಿಸುವ ಅನಿವಾರ್ಯತೆ ವಿಜಯೇಂದ್ರ ಅವರಿಗಿದೆ.
ವಿಜಯೇಂದ್ರ ಅವರನ್ನು ಕೇಂದ್ರದ ಹಿರಿಯರು ರಾಜ್ಯಾಧ್ಯಕ್ಷರಾಗಿ ಆಯ್ಕೆ ಮಾಡಿದ್ದು ಸಂತೋಷದ ವಿಚಾರ. ದೊಡ್ಡ ಜವಾಬ್ದಾರಿ. ಇದೊಂದು ಯೋಗ. ಮೋದಿ ಪ್ರಧಾನಿ, ನಡ್ಡಾ ರಾಷ್ಟ್ರೀಯ ಅಧ್ಯಕ್ಷರಿದ್ದಾರೆ. ವಿಜಯೇಂದ್ರ ಯಡಿಯೂರಪ್ಪ ಅವರ ರಾಜಕಾರಣವನ್ನು ಹತ್ತಿರದಿಂದ ನೋಡಿ ಬೆಳೆದಿದ್ದಾನೆ. ಲೋಕಸಭೆ, ಜಿಪಂ, ತಾಪಂ ಚುನಾವಣೆಯಲ್ಲಿ ಹೆಚ್ಚಿನ ಶಕ್ತಿ ತುಂಬುವ ಕೆಲಸ ಮಾಡುತ್ತಾನೆ. ಇದೊಂದು ಸವಾಲು, ಯಶಸ್ವಿಯಾಗಿ ನಿರ್ವಹಣೆ ಮಾಡುತ್ತಾನೆ. ನಮ್ಮ ಉದ್ದೇಶ ಸ್ಪಷ್ಟವಾಗಿದೆ. ಹಿರಿಯರನ್ನು ಜತೆಗೆ ತೆಗೆದುಕೊಂಡು ಹೋಗುತ್ತಾನೆ. ರಾಜಕಾರಣವೇ ಒಂದು ಪರೀಕ್ಷೆ. ಇದನ್ನು ವಿಜಯೇಂದ್ರ ಸವಾಲಾಗಿ ಸ್ವೀಕಾರ ಮಾಡುತ್ತಾನೆ.
ಬಿ.ವೈ.ರಾಘವೇಂದ್ರ, ಸಂಸದ
ರಾಜ್ಯಾಧ್ಯಕ್ಷ ಸ್ಥಾನಕ್ಕೆ ಬಿ.ವೈ.ವಿಜಯೇಂದ್ರ ನೇಮಕ ಮಾಡಿರುವುದು ಬಹಳ ಸಂತೋಷದ ವಿಚಾರ. ಯಂಗ್ ಬ್ಲಿಡ್ ರಾಜಕಾರಣದಲ್ಲಿ ಕೆಲಸ ಮಾಡಬೇಕಿತ್ತು. ವಿಜಯೇಂದ್ರ ಆಯ್ಕೆ ಅತ್ಯಂತ ಸೂಕ್ತ. ಪಕ್ಷ ಅಧಿಕಾರದಲ್ಲಿದ್ದು ಈಗ ಸೋತಿದೆ. ಹತಾಶರಾಗಿದ್ದ ಕಾರ್ಯಕರ್ತರಿಗೆ ಹುರಿದುಂಬಿಸುವ ತರುಣನ ಆಯ್ಕೆ ಆಗಿದೆ. ಬಿಜೆಪಿ ಹೈಕಮಾಂಡ್‌ಗೆ ಅಭಿನಂದನೆ ಸಲ್ಲಿಸುತ್ತೇನೆ. ವಿಜಯೇಂದ್ರ ಧೈರ್ಯದಿಂದ ಮುನ್ನುಗ್ಗಬೇಕು. ನಾವೆಲ್ಲರೂ ಜತೆಗೆ ಇರುತ್ತೇವೆ. ಪಕ್ಷ ಮತ್ತೂಮ್ಮೆ ಕಟ್ಟಿ ಅಧಿಕಾರಕ್ಕೆ ತರೋಣ.
ಆರಗ ಜ್ಞಾನೇಂದ್ರ, ಶಾಸಕ
ಯಡಿಯೂರಪ್ಪನವರ ಮಗ ಎಂಬ ಅರ್ಹತೆಯಲ್ಲಿ ಬಿಜೆಪಿಯ ನೂತನ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ಯಡಿಯೂರಪ್ಪನವರ ಮಗನಿಗೆ ಅಭಿನಂದನೆಗಳು. ಬಿಜೆಪಿಯಲ್ಲಿ ಕುಟುಂಬ ರಾಜಕಾರಣವಿಲ್ಲ ಎಂಬ ಸುಳ್ಳನ್ನು ನಂಬಬೇಕು ಎಂದು ರಾಜ್ಯದ ಜನರಲ್ಲಿ ಮನವಿ ಮಾಡುತ್ತೇವೆ!
ರಾಜ್ಯ ಕಾಂಗ್ರೆಸ್ ಟ್ವೀಟ್
ಶರತ್ ಭದ್ರಾವತಿ