ಮುಂಬೈ: ಕ್ರಿಕೆಟ್ ದೇವರು ಎಂದೇ ಖ್ಯಾತಿ ಪಡೆದಿದ್ದ ಸಚಿನ್ ತೆಂಡೂಲ್ಕರ್ ಅವರು ಹಲವು ದಾಖಲೆಗಳ ಸರದಾರ. ಕ್ರಿಕೆಟ್ ಆಡಿದ ಅತ್ಯುನ್ನತ ಬ್ಯಾಟರ್ ಗಳ ಪೈಕಿ ಸಚಿನ್ ಹೆಸರು ಎಂದಿಗೂ ಅಗ್ರ ಕ್ರಮಾಂಕದಲ್ಲಿ ಬರುತ್ತದೆ. ಶತಕಕಗಳ ಶತಕ ಬಾರಿಸಿರುವ ಸಚಿನ್ ತೆಂಡೂಲ್ಕರ್ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಮೊದಲ ಶತಕ ಬಾರಿಸಿದಾಗ ಅವರಿಗಿನ್ನೂ 17 ವರ್ಷ. ಆ ಮೊದಲ ಶತಕಕ್ಕೆ ಇಂದಿಗೆ 32 ವರ್ಷಗಳಾಗಿದೆ.
ಹೌದು, 1990 ಆಗಸ್ಟ್ 14ರಂದು ಸಚಿನ್ ತೆಂಡೂಲ್ಕರ್ ಮೊದಲ ಅಂತಾರಾಷ್ಟ್ರೀಯ ಶತಕ ಬಾರಿಸಿದ್ದರು. ಇಂಗ್ಲೆಂಡ್ ವಿರುದ್ಧ ಓಲ್ಡ್ ಟ್ರಾಫರ್ಡ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ 17 ವರ್ಷ 112 ದಿನ ಪ್ರಾಯದ ಸಚಿನ್ ಚೊಚ್ಚಲ ಶತಕ ಬಾರಿಸಿ ಮಿಂಚಿದ್ದರು. ಇದೇ ವೇಳೆ ಟೆಸ್ಟ್ ಮಾದರಿಯಲ್ಲಿ ಶತಕ ದಾಖಲಿಸಿದ ಮೂರನೇ-ಕಿರಿಯ ಆಟಗಾರ ಎಂಬ ಖ್ಯಾತಿಗೆ ಪಾತ್ರರಾಗಿದ್ದರು.
ಇದನ್ನೂ ಓದಿ:ಟೀಸರ್ ನಲ್ಲಿ ಶಿವ 143 ಮಿಂಚು: ಧೀರೇನ್ ರಾಮ್ ಕುಮಾರ್ ರಗಡ್ ಎಂಟ್ರಿ
1989ರ ನವೆಂಬರ್ ನಲ್ಲಿ ಟೆಸ್ಟ್ ಪದಾರ್ಪಣೆ ಮಾಡಿದ್ದ ಸಚಿನ್ ಎಂಟು ಟೆಸ್ಟ್ ಪಂದ್ಯಗಳ ಬಳಿಕ ಮೊದಲ ಬಾರಿ ಮೂರಂಕಿ ಮೊತ್ತ ದಾಖಲಿಸಿದ್ದರು. ಓಲ್ಡ್ ಟ್ರಾಫರ್ಡ್ ಟೆಸ್ಟ್ ಪಂದ್ಯದ ನಾಲ್ಕನೇ ಇನ್ನಿಂಗ್ಸ್ ನಲ್ಲಿ ಮುಂಬೈಕರ್ ಈ ಶತಕದ ಆಟವಾಡಿದ್ದರು. ಇದರ ಸಹಾಯದಿಂದ ಭಾರತ ತಂಡ ಈ ಪಂದ್ಯವನ್ನು ಡ್ರಾ ಮಾಡಲು ಸಾಧ್ಯವಾಯಿತು.
ಅಂದು 189 ಎಸೆತ ಎದುರಿಸಿದ್ದ ಸಚಿನ್ ತೆಂಡೂಲ್ಕರ್ 119 ರನ್ ಗಳಿಸಿದ್ದರು. ಈ ಶತಕ ಬಳಿಕ ಸಚಿನ್ ತೆಂಡೂಲ್ಕರ್ ಹಲವಾರು ದಾಖಲೆಗಳನ್ನು ಬರೆದರು. ಟೆಸ್ಟ್ ಕ್ರಿಕೆಟ್ ನಲ್ಲಿ 51 ಶತಕ ಬಾರಿಸಿದ್ದ ಸಚಿನ್, 15,921 ರನ್ ಗಳಿಸಿದ್ದಾರೆ