Advertisement

‌ENGvsNZ: ಸಚಿನ್‌ ತೆಂಡೂಲ್ಕರ್‌ ಟೆಸ್ಟ್‌ ದಾಖಲೆ ಮುರಿದ ಜೋ ರೂಟ್

10:56 AM Dec 01, 2024 | Team Udayavani |

ಕ್ರೈಸ್ಟ್‌ಚರ್ಚ್: ಹೇಗ್ಲಿ ಓವಲ್‌ ನಲ್ಲಿ ನಡೆದ ಮೊದಲ ಟೆಸ್ಟ್‌ ನಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಇಂಗ್ಲೆಂಡ್ ಎಂಟು ವಿಕೆಟ್‌ಗಳ ಅಮೋಘ ಜಯ ಸಾಧಿಸಿದೆ. ಇದೇ ಸಂದರ್ಭದಲ್ಲಿ ಸ್ಟಾರ್ ಬ್ಯಾಟರ್ ಜೋ ರೂಟ್ (Joe Root) ದಾಖಲೆಯೊಂದನ್ನು ಬರೆದಿದ್ದಾರೆ.

Advertisement

ಗೆಲುವಿಗೆ 104 ರನ್‌ ಗುರಿ ಪಡೆದ ಇಂಗ್ಲೆಂಡ್‌ ಕೇವಲ 12.4 ಓವರ್‌ ಗಳಲ್ಲಿ ಸಾಧಿಸಿ ಗೆಲುವು ಪಡೆಯಿತು.

ಟೆಸ್ಟ್ ಕ್ರಿಕೆಟ್‌ನ ನಾಲ್ಕನೇ ಇನ್ನಿಂಗ್ಸ್‌ನಲ್ಲಿ ಅತಿ ಹೆಚ್ಚು ರನ್‌ ಗಳಿಸಿದವರ ಪಟ್ಟಿಯಲ್ಲಿ ರೂಟ್ ಭಾರತದ ದಂತಕಥೆ ಸಚಿನ್ ತೆಂಡೂಲ್ಕರ್ ಅವರನ್ನು ಹಿಂದಿಕ್ಕಿದರು. ತಮ್ಮ 150 ನೇ ಟೆಸ್ಟ್ ಪಂದ್ಯವನ್ನು ಆಡಿದ ರೂಟ್ ಈ ಪಂದ್ಯದ ಎರಡನೇ ಇನ್ನಿಂಗ್ಸ್ ನಲ್ಲಿ 15 ಎಸೆತಗಳಲ್ಲಿ ಅಜೇಯ 22 ರನ್ ಗಳಿಸಿದರು.

ರೂಟ್ ಈಗ ನಾಲ್ಕನೇ ಇನ್ನಿಂಗ್ಸ್‌ ನಲ್ಲಿ 1,630 ರನ್‌ ಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ. 1,625 ರನ್ ಗಳಿಸಿದ ದಂತಕಥೆ ಸಚಿನ್ ತೆಂಡೂಲ್ಕರ್ ಈಗ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಅಲಸ್ಟೈರ್ ಕುಕ್ ಮತ್ತು ಗ್ರೇಮ್ ಸ್ಮಿತ್ ತಲಾ 1,611 ರನ್ ಗಳಿಸಿ ಮೂರನೇ ಸ್ಥಾನ ಹಂಚಿಕೊಂಡಿದ್ದಾರೆ. ವೆಸ್‌ ಇಂಡೀಸ್‌ ದಿಗ್ಗಜ ಶಿವನಾರಾಯಣ್ ಚಂದ್ರಪಾಲ್ 1,580 ರನ್‌ಗಳೊಂದಿಗೆ ಅಗ್ರ ಐವರ ಪಟ್ಟಿಯಲ್ಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next