ಬೆಂಗಳೂರು: ದ್ರಾಕ್ಷಿ ಬೆಳೆಗಾರರಿಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ದ್ರಾಕ್ಷಿರಸ ಮಂಡಳಿ ನಗರದ ನಾಗವಾರ ವರ್ತುಲ ರಸ್ತೆಯಲ್ಲಿರುವ ಮ್ಯಾನ್ ಫೋ ಕನ್ವೆಷನ್ ಸೆಂಟರ್‌ನಲ್ಲಿ ಆಯೋಜಿಸಿರುವ ಮೂರು ದಿನಗಳ ಅಂತಾರಾಷ್ಟ್ರೀಯ ದ್ರಾಕ್ಷಿರಸ ಉತ್ಸವಕ್ಕೆ ಕೃಷಿ ಸಚಿವ ಕೃಷ್ಣ ಭೈರೇಗೌಡ ಶುಕ್ರವಾರ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ವೈನ್ ಮಾರಾಟದಲ್ಲಿ ಮಹಾರಾಷ್ಟ್ರ ನಂತರದ ಸ್ಥಾನವನ್ನು ಕರ್ನಾಟಕಕ್ಕೆ ಲಭಿಸಿದೆ. ರಾಜ್ಯದ ಸುಮಾರು 20 ಸಾವಿರ ಹೆಕ್ಟೇರ್‌ನಲ್ಲಿ ದ್ರಾಕ್ಷಿ ಬೆಳೆಯುತ್ತಿದ್ದು, ಈ ಪೈಕಿ ಎರಡು ಸಾವಿರ ಎಕರೆಯಲ್ಲಿ ವೈನ್‌ಗೆ ಬೇಕಿರುವ ದ್ರಾಕ್ಷಿ ಬೆಳೆಯಲಾಗುತ್ತಿದೆ. ನಂದಿ ಬೆಟ್ಟದ ತಪ್ಪಲು,ಬಾಗಲಕೋಟೆ, ಬಿಜಾಪುರಗಳಲ್ಲಿ ವೈನ್‌ಗೆ ಬೇಕಿರುವ ದ್ರಾಕ್ಷಿ ಬೆಳೆಯುತ್ತಿದ್ದಾರೆ ಎಂದು ಹೇಳಿದರು.
ಕರ್ನಾಟಕದ ವೈನ್‌ಗೆ ದೇಶದ ಇತರೆ ರಾಜ್ಯಗಳಲ್ಲಿ ಮಾತ್ರವಲ್ಲದೇ, ವಿದೇಶಗಳಿಂದಲೂ ಬೇಡಿಕೆ ಹೆಚ್ಚಾಗಿದೆ. ಒಟ್ಟಾರೆ ವಾರ್ಷಿಕ 180 ಕೋಟಿ ಮೊತ್ತದ ವಹಿವಾಟು ನಡೆಯುತ್ತಿದೆ ಎಂದು ತಿಳಿಸಿದರು.
ದ್ರಾಕ್ಷಿ ಬೆಳೆಯಲ್ಲ: ರಾಜ್ಯ ವೈನ್ ದ್ರಾಕ್ಷಿ ಬೆಳೆಗಾರರ ಸಂಘದ ಅಧ್ಯಕ್ಷ ಕೆ.ಎಚ್.ಕೃಷ್ಣಾರೆಡ್ಡಿ ಮಾತನಾಡಿ, ರಾಜ್ಯದ ವೈನ್‌ಗಳಿಗೆ ಬೆಲೆ ಕಡಿತಗೊಳಿಸುವುದು ಹಾಗೂ ಹೊರರಾಜ್ಯದ ವೈನ್‌ಗಳಿಗೆ ಅಬಕಾರಿ ಸುಂಕ ವಿಧಿಸುವ ಎರಡು ಬೇಡಿಕೆಗಳನ್ನು ದ್ರಾಕ್ಷಿರಸ ಮಂಡಳಿ ಈಡೇರಿಸದಿದ್ದರೆ ಮುಂದಿನ ತಿಂಗಳಿಂದ ದ್ರಾಕ್ಷಿ ಬೆಳೆಯುವುದನ್ನು ಸ್ಥಗಿತಗೊಳಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಕೆ.ಜಿ ದ್ರಾಕ್ಷಿ ಬೆಳೆಯಲು 75-90 ವೆಚ್ಚ ತಗುಲುತ್ತಿದೆ. ಆದರೆ, ರೈತರಿಂದ ಕೇವಲ 45ರಿಂದ 60ಕ್ಕೆ ದ್ರಾಕ್ಷಿ ಖರೀದಿಸಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಕರ್ನಾಟಕ ದ್ರಾಕ್ಷಿ ರಸ ಮಂಡಳಿ ಅಧ್ಯಕ್ಷ ರವೀಂದ್ರ ಶಂಕರ ಮಿರ್ಜೆ ಮಾತನಾಡಿದರು.
ಮೂರು ದಿನಗಳ ವೈನ್ ಉತ್ಸವದಲ್ಲಿ ಸ್ಥಳೀಯ, ರಾಷ್ಟ್ರೀಯ ವೈನ್ ಜತೆಗೆ ಹಾಗೂ ಅಂತಾರಾಷ್ಟ್ರೀಯ ಮಟ್ಟದ ವೈನ್‌ಗಳು ಸಿಗಲಿವೆ. 100ರಿಂದ 10 ಸಾವಿರ ರುಪಾಯಿ ವರೆಗಿನ ಏಳು ವರ್ಷದವರೆಗಿನ ಹಳೆಯ ವೈನ್‌ಗಳು ದೊರೆಯಲಿವೆ. ಸುಲ, ಹೆರಿಟೇಜ್, ಗ್ರೋವೆರ್ ಜಂಪಾ, ರೊಸೊÕà ಸೇರಿದಂತೆ ದೇಶದ 70ಬ್ರಾಂಡ್‌ಗಳು ಹಾಗೂ ಅಮೆರಿಕ,ಜರ್ಮನಿ, ಜಪಾನ್, ಆಸ್ಟ್ರೇಲಿಯಾ, ಕ್ಯಾಲಿಪೋರ್ನಿಯಾ ಸೇರಿದಂತೆ ವಿವಿಧ ದೇಶಗಳ ವೈನ್‌ಗಳು ವೈನ್ ಪ್ರಿಯರಿಗೆ ಸಿಗಲಿವೆ.