Advertisement

Year Ender: Horror movies-2024 ರ ಟಾಪ್‌ 5 ಹಾರರ್ ಚಲನಚಿತ್ರಗಳು

06:22 PM Dec 19, 2024 | Team Udayavani |

ಭಾರತದಲ್ಲಿ ಹಲವು ಭಾಷೆಗಳಲ್ಲಿ ಹಲವು ಪ್ರಕಾರಗಳಲ್ಲಿ ಪ್ರತಿ ವರ್ಷ ನೂರಾರು ಚಲನಚಿತ್ರಗಳು ಬಿಡುಗಡೆಯಾಗುತ್ತದೆ. ಅವುಗಳಲ್ಲಿ ಹಲವು ಚಲನಚಿತ್ರಗಳು ಪ್ರೇಕ್ಷಕರಿಗೆ ರುಚಿಸದೆ ಬದಿಗೆ ಸರಿಯಲ್ಪಡುತ್ತದೆ. ಕೆಲವೇ ಕೆಲವು ಮಾತ್ರ ಬಹಳ ಸದ್ದು ಮಾಡುವಲ್ಲಿ ಯಶಸ್ವಿಯಾಗುತ್ತದೆ. ಹಾಗೆ ಬಾಲಿವುಡ್‌ ಸಿನಿ ರಂಗಕ್ಕೆ 2024 ಮಿಶ್ರ ಅದೃಷ್ಟದ ವರ್ಷವಾಗಿದೆ. ಕಾರಣ ಕೆಲವು ಉನ್ನತ ಮಟ್ಟದ ಚಲನಚಿತ್ರಗಳು ವೀಕ್ಷಕರನ್ನು ತಲುಪುವಲ್ಲಿ ವಿಫಲವಾಗಿದೆ. ಜೊತೆಗೆ ಕೆಲವು ಚಲನಚಿತ್ರಗಳು ಹೆಚ್ಚಿನ ಯಶಸ್ಸನ್ನು ಗಳಿಸಿಕೊಟ್ಟಿದೆ.

Advertisement

ಆಕ್ಷನ್‌ ಸಿನೆಮಾಗಳು ವೀಕ್ಷಕರ ಗಮನ ಸೆಳೆದುಕೊಳ್ಳಲು, ಜೊತೆಗೆ ಸಿನೆಮಾ ರಂಗದಲ್ಲಿ ಹೆಸರನ್ನು ಗಳಿಸಲು ಹೆಣಗಾಡುತ್ತಿರುವ ಸಂದರ್ಭದ ನಡುವೆಯೂ  ಸಿನೆಮಾ ‌ಜಾನರ್ ಇವೆಲ್ಲದರ ನಡುವೆ ತನ್ನದೇ ಆದ ಛಾಪನ್ನು ಮೂಡಿಸಿದೆ. ಅದುವೇ ಹಾರರ್ ಚಲನಚಿತ್ರಗಳು.

ಚಲನಚಿತ್ರ ರಂಗವು ಎದುರಿಸುತ್ತಿರುವ ಹಲವಾರು ಸವಾಲುಗಳ ಹೊರತಾಗಿಯೂ ಹಾರರ್ ಜಾನರ್‌ನಲ್ಲಿ ಮೂಡಿ ಬಂದ ಚಲನಚಿತ್ರಗಳು ಪ್ರೇಕ್ಷಕರನ್ನು ತನ್ನತ್ತ ಸೆಳೆದು ಬಾಕ್ಸ್‌ ಆಫೀಸ್‌ ನಲ್ಲಿ ಹಣ ಗಳಿಸುವಲ್ಲಿ ಯಶಸ್ವಿಯಾಗಿದೆ. ವಿಶಿಷ್ಟವಾದ ಕಥಾ ಜೋಡಣೆ, ನಟನಾ ಚಾತುರ್ಯ, ನೈಜ್ಯತೆಯ ಮಿಶ್ರಣವು ಸಿನಿಪ್ರಿಯರನ್ನು ಆಕರ್ಷಿಸಿದೆ. ಅಲೌಕಿಕತೆಯ ರೋಮಾಂಚನಕಾರಿ ಕತೆಗಳಿಂದ ಹಿಡಿದು ಹಾಸ್ಯ ಮಿಶ್ರಿತ ಹಾರರ್ ಸಿನೆಮಾಗಳವರೆಗೆ 2024 ರಲ್ಲಿ ಮೂಡಿಬಂದ ಹಲವಾರು ಚಲನಚಿತ್ರಗಳಲ್ಲಿ ಟಾಪ್‌ 5 ಹಾರರ್ ಚಲನಚಿತ್ರಗಳ ಹೆಸರು ಇಲ್ಲಿದೆ.

ಬ್ರಮಯುಗಂ (ಸೋನಿ ಲೈವ್)‌ ಐಎಂಡಿಬಿ ರೇಟಿಂಗ್: 7.8/10

Advertisement

‘ಬ್ರಮಯುಗಂ’ ಜಾನಪದ- ಹಾರರ್ ಚಲನಚಿತ್ರವಾಗಿದ್ದು ಕೇರಳದ ಪುರಾತನ ವಿಷಯಗಳನ್ನೊಳಗೊಂಡ ಕತೆಯನ್ನು ತೆರೆದಿಡುತ್ತದೆ. ಅಸಾಧಾರಣ ಚಿತ್ರಕಥೆ, ಧ್ವನಿ ವಿನ್ಯಾಸ ಮತ್ತು ನಿರ್ಮಾಣ ಶೈಲಿಯೊಂದಿಗೆ ಚಿತ್ರವು ಪ್ರೇಕ್ಷಕರ ಮೆಚ್ಚುಗೆಯನ್ನು ಪಡೆದುಕೊಂಡಿದೆ. ಚಲನಚಿತ್ರದಲ್ಲಿ ನಿಗೂಢ ವ್ಯಕ್ತಿಗೆ ಗುಲಾಮನಾಗಿ, ನಿರ್ಜನ ಮನೆಯೊಂದರಲ್ಲಿ ಸಿಲುಕಿ, ಗುಲಾಮಗಿರಿಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುವ, ಜೊತೆಗೆ ಆತ ಎದುರಿಸುವ ಹಲವಾರು ಸವಾಲುಗಳನ್ನು ಚಿತ್ರಿಸಲಾಗಿದೆ. ಕಥೆಯನ್ನು ಕಪ್ಪು ಬಿಳುಪಿನಲ್ಲಿ ಚಿತ್ರಿಸಲಾಗಿದ್ದು ಮುಂದೇನು ಎಂಬ ಕುತೂಹಲವನ್ನು ವೀಕ್ಷಕನಲ್ಲಿ ಮೂಡಿಸುತ್ತದೆ.

ಸ್ತ್ರೀ 2 – (ಅಮೆಜಾನ್ ಪ್ರೈಮ್ ವಿಡಿಯೋ) ಐಎಂಡಿಬಿ ರೇಟಿಂಗ್: 7/10

2024 ರಲ್ಲಿ ಹಿಂದಿ ಭಾಷಾ ಚಲನಚಿತ್ರಗಳಲ್ಲಿ ಅತಿ ಹೆಚ್ಚಿನ ಮೊತ್ತ ಗಳಿಸಿದ ಚಲನಚಿತ್ರವು ‘ಸ್ತ್ರೀ 2’ ಆಗಿದೆ. ಅಮರ್‌ ಕೌಶಿಕ್‌ ನಿರ್ದೇಶಿಸಿದ ಈ ಚಿತ್ರದಲ್ಲಿ ಶ್ರದ್ಧಾ ಕಪೂರ್‌ ಮತ್ತು ರಾಜ್‌ಕುಮಾರ್‌ ರಾವ್‌ ನಟಿ ನಟರಾಗಿ ಅಭಿನಯಿಸಿದ್ದಾರೆ. ಹಾರರ್ ಹಾಗೂ ಹಾಸ್ಯ ಪ್ರಕಾರಗಳ  ಮಿಶ್ರಣದೊಂದಿಗೆ ಮೂಡಿ ಬಂದ ಈ ಚಲನಚಿತ್ರವು ಸುಮಾರು 585 ಕೋಟಿ ರೂ.ಗಳಷ್ಟು ಅಧಿಕ ಮೊತ್ತವನ್ನು ಗಳಿಸಿತು. ಜೊತೆಗೆ ಚಿತ್ರದ ಯಶಸ್ಸು, ಅದ್ಭುತ ಪ್ರದರ್ಶನ, ಮನರಂಜನಾ ಕಥಾವಸ್ತುವಿನಿಂದಾಗಿ ಬಾಲಿವುಡ್‌ನ ಉನ್ನತ ಹಾರರ್ ಹಾಸ್ಯ ಚಿತ್ರಗಳ ಪೈಕಿ ಒಂದಾಯಿತು.

ಸೈತಾನ್ – (ನೆಟ್‌ಫ್ಲಿಕ್ಸ್) ಐಎಂಡಿಬಿ ರೇಟಿಂಗ್; 6.5/10

2024 ರಲ್ಲಿ ತೆರೆಕಂಡ ವಿಕಾಸ್‌ ಬಹ್ಲ್‌ ನಿರ್ದೇಶನದ ಸೈತಾನ್‌ ಚಲನಚಿತ್ರವು ಚಿತ್ರರಂಗದಲ್ಲಿ ಬಹಳಷ್ಟು ಸದ್ದು ಮಾಡಿದ್ದು, ಇದರಲ್ಲಿ ಆರ್.‌ ಮಾಧವನ್‌, ಅಜಯ್‌ ದೇವಗನ್‌ ಮತ್ತು ಜ್ಯೋತಿಕಾ ನಟಿಸಿದ್ದಾರೆ. ಇದು ಭಾರತದ ಬಾಕ್ಸ್ ಆಫೀಸ್‌ನಲ್ಲಿ 149 ಕೋಟಿ ರೂ. ಲಾಭ ಗಳಿಸಿದೆ. ಇದರ ಆಕರ್ಷಕ ಕಥಾವಸ್ತುವಿನಿಂದಾಗಿ ಹೆಚ್ಚಿನ ಪ್ರದರ್ಶನವನ್ನು ಕಂಡಿದ್ದು ವರ್ಷದ ಅತ್ಯುತ್ತಮ ಹಾರರ್ ಚಲನಚಿತ್ರಗಳಲ್ಲಿ ಒಂದಾಗಿದೆ.

ಮುಂಜ್ಯಾ – (ಡಿಸ್ನಿ+ ಹಾಟ್‌ಸ್ಟಾರ್)‌ ಐಎಂಡಿಬಿ ರೇಟಿಂಗ್: 6.4/10

ಆದಿತ್ಯ ಸರ್ಪೋತದಾರ್ ನಿರ್ದೇಶಿಸಿದ ಹಾಸ್ಯ-ಹಾರರ್ ಚಲನಚಿತ್ರ ಮುಂಜ್ಯಾ ಜಾನಪದ ಕಥೆಯನ್ನೊಳಗೊಂಡು ವಿಶಿಷ್ಟವಾಗಿ ತೆರೆಯ ಮೇಲೆ ಪ್ರೇಕ್ಷಕರನ್ನು ಆಕರ್ಷಿಸಿದೆ. ಈ ಚಿತ್ರದಲ್ಲಿ ಅಭಯ್‌ ವರ್ಮಾ, ಶಾರ್ವರಿ ಹಾಗು ಮೋನಾ ಸಿಂಗ್‌ ನಟಿಸಿದ್ದು, 103 ಕೋಟಿ ರೂ. ನಿವ್ವಳ ಲಾಭ ಗಳಿಸಿ ಯಶಸ್ವಿ ಪ್ರದರ್ಶನ ನೀಡಿದೆ.

ಭೂಲ್ ಭುಲೈಯಾ 3 – ಐಎಂಡಿಬಿ ರೇಟಿಂಗ್: 5.1/10

ಅನೀಸ್‌ ಬಾಜ್ಮೀ ನಿರ್ದೇಶಿಸಿದ ಹಾಸ್ಯ-ಹಾರರ್ ಚಲನಚಿತ್ರವಾದ ಭೂಲ್‌ ಭುಲೈಯಾ 3 ರಲ್ಲಿ ಕಾರ್ತಿಕ್‌ ಆರ್ಯನ್‌ ನಟಿಸಿದ್ದಾರೆ. ಇದು ಸುಮಾರು 244 ಕೋಟಿ ರೂ. ನಿವ್ವಳ ಲಾಭ ಗಳಿಸಿದ್ದು, 2024 ರಲ್ಲಿ ತೆರೆಕಂಡ ಸ್ತ್ರೀ ಚಲನಚಿತ್ರದ ಬಳಿಕ ಎರಡನೇ ಅತಿ ಹೆಚ್ಚು  ಗಳಿಕೆ ಕಂಡ ಹಿಂದಿ ಹಾರರ್ ಚಲನಚಿತ್ರವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next