Advertisement
2020-21ರಲ್ಲಿ ತರಗತಿ ಮತ್ತು ಪ್ರಾಯೋಗಿಕ ಅಭ್ಯಾಸಗಳು ಪೂರ್ಣ ಪ್ರಮಾಣದಲ್ಲಿ ಆಗಿಲ್ಲ. ಪೂರ್ವಸಿದ್ಧತೆ ಪರೀಕ್ಷೆ, ಘಟಕ ಪರೀಕ್ಷೆಗಳು ವ್ಯವಸ್ಥಿತವಾಗಿ ನಡೆದಿಲ್ಲ. ಪರೀಕ್ಷೆ ರದ್ದು ಮಾಡಿ, ನಿರ್ದಿಷ್ಟ ಮಾನದಂಡ ಅನುಸರಿಸಿ ಎಲ್ಲರನ್ನೂ ತೇರ್ಗಡೆ ಮಾಡಿದರೂ ಅಂಕಗಳ ಹಂಚಿಕೆ ಇಲಾಖೆಗೆ ಸವಾಲಾಗಲಿದೆ.
ಪರೀಕ್ಷೆ ನಡೆಸುವ ಬಗ್ಗೆ ಒಲವು ಹೊಂದಿರುವ ಪ.ಪೂ. ಇಲಾಖೆ, ಜುಲೈ ಅಂತ್ಯ ಅಥವಾ ಆಗಸ್ಟ್ ವರೆಗೂ ಕಾಯಬಹುದು. ಪರೀಕ್ಷೆ ಇಲ್ಲದೆ ಎಲ್ಲರನ್ನೂ ಉತ್ತೀರ್ಣಗೊಳಿಸುವುದೇ ಆದಲ್ಲಿ, ಯಾರಿಗೂ ಅನ್ಯಾಯ ಆಗದಂತೆ ಹೇಗೆ ಮಾಡಬಹುದು ಮತ್ತು ಸಿಇಟಿ, ನೀಟ್, ಜೆಇಇ ವಿದ್ಯಾರ್ಥಿಗಳಿಗೆ ತೊಂದರೆ ಆಗದಂಥ ಮಾರ್ಗ ಹುಡುಕುತ್ತಿದ್ದೇವೆ ಎಂದು ಇಲಾಖೆಯ ಪರೀಕ್ಷಾ ವಿಭಾಗದ ಉಪನಿರ್ದೇಶಕ ಕೃಷ್ಣ ಪ್ರಸಾದ್ ಮಾಹಿತಿ ನೀಡಿದ್ದಾರೆ.
Related Articles
ಹಲವು ರಾಜ್ಯಗಳು 12ನೇ ತರಗತಿ ಪರೀಕ್ಷೆ ಮುಂದೂಡಿದ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆಯ ಅಧಿಕಾರಿಗಳು ನಿರಂತರ ಸಭೆ ನಡೆಸಿದ್ದಾರೆ. ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಪದವಿಪೂರ್ವ ಇಲಾಖೆಯ ನಿರ್ದೇಶಕರ ಸಹಿತ ಇಲಾಖೆಯ ಪರೀಕ್ಷೆ ಮತ್ತು ಆಡಳಿತ ವಿಭಾಗದ ಅಧಿಕಾರಿಗಳು ಬುಧವಾರ ಆನ್‌ಲೈನ್ ಮೂಲಕ ಸಭೆ ನಡೆಸಿ ಪರೀಕ್ಷೆಯ ರದ್ದತಿ ಅಥವಾ ನಡೆಸುವ ಬಗ್ಗೆ ಸುದೀರ್ಘ ಚರ್ಚೆ ನಡೆಸಿದ್ದಾರೆ.
Advertisement
ಶೀಘ್ರ ಸೂಕ್ತ ತೀರ್ಮಾನ ತೆಗೆದು ಕೊಳ್ಳ ಲಾಗುತ್ತದೆ. ಪರೀಕ್ಷೆಗಳ ಬಗ್ಗೆ ಶಿಕ್ಷಕರು, ಶಿಕ್ಷಣ ತಜ್ಞರು ಮತ್ತು ಹೆತ್ತವರ ಜತೆ ಸಮಾಲೋಚನೆ ನಡೆಸುತ್ತಿದ್ದೇವೆ.– ಎಸ್. ಸುರೇಶ್ ಕುಮಾರ್, ಶಿಕ್ಷಣ ಸಚಿವ – ರಾಜು ಖಾರ್ವಿ ಕೊಡೇರಿ