Advertisement
ಕರ್ನಾಟಕ ನೀರಾವರಿ ನಿಗಮ ತುಂಗಭದ್ರಾ ವಲಯ ಮುನಿರಾಬಾದ್ ವ್ಯಾಪ್ತಿಯಲ್ಲಿ ಇಂಥದ್ದೊಂದು ಅವ್ಯವಹಾರ ನಡೆದಿದೆ. 1,200 ಕೋಟಿ ವೆಚ್ಚದಲ್ಲಿ ತುಂಗಭದ್ರಾ ಎಡದಂಡೆ ಕಾಲುವೆ ಆಧುನೀಕರಣ ಕಾಮಗಾರಿಯನ್ನು 2009ರಿಂದ 2011ರ ಅವ ಧಿಯಲ್ಲಿ ಕೈಗೊಳ್ಳಲಾಗಿತ್ತು. ಈ ಕಾಮಗಾರಿಯಲ್ಲಿ ಹಲವು ಲೋಪ, ಕಳಪೆ ಕಾಮಗಾರಿ ಹಾಗೂ ಕಾಮಗಾರಿ ಹೆಸರಿನಲ್ಲಿ ಕ್ಲೇಮ್ ಮಾಡಲಾಗಿದ್ದ ಆರ್ಬಿಟ್ರೇಷನ್‌ನಲ್ಲಿ(ರಾಜಿ ಮಧ್ಯಸ್ಥಿಕೆ) ಕೋಟ್ಯಂತರ ರೂ. ಅಕ್ರಮ ನಡೆದಿದೆ ಎನ್ನುವ ಆರೋಪ ಕೇಳಿ ಬಂದಿದ್ದವು.
Related Articles
Advertisement
28 ಎಂಜಿನಿಯರ್ ತಲೆದಂಡ: ಗುತ್ತಿಗೆದಾರರಿಗೆ ಅನುಕೂಲ ಮಾಡಿಕೊಟ್ಟು ಸರ್ಕಾರಕ್ಕೆ ನಷ್ಟ ಉಂಟು ಮಾಡಿದ ಒಟ್ಟು 46 ಜನ ಎಂಜಿನಿಯರ್‌ಗಳನ್ನು ಪಟ್ಟಿ ಮಾಡಲಾಗಿದೆ. ತನಿಖಾ ತಂಡ ನೀಡಿದ ವರದಿಯನ್ವಯ ಹಾಲಿ ಸಹಾಯಕ ಕಾರ್ಯಪಾಲ ಎಂಜಿನಿಯರ್(ಎಇಇ), ಸಹಾಯಕ ಎಂಜಿನಿಯರ್(ಎಇ), ಕಿರಿಯ ಎಂಜಿನಿಯರ್(ಜೆಇ) ಹುದ್ದೆಯಲ್ಲಿ ಕರ್ತವ್ಯದಲ್ಲಿರುವ 28 ಜನ ಎಂಜಿನಿಯರ್‌ಗಳನ್ನು ಅಮಾನತು ಮಾಡಿ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡಿದ್ದರೆ, ನಿವೃತ್ತ 17 ಮಂದಿ (ಒಬ್ಬರು ಮೃತ) ಸೇರಿ 18 ಜನ ಎಂಜಿನಿಯರ್‌ಗಳ ಮೇಲೆ ನ್ಯಾಯಾಲಯದಲ್ಲಿ ಪ್ರತ್ಯೇಕ ಸಿವಿಲ್ ದಾವೆ ಹೂಡಲು ಜಲಸಂಪನ್ಮೂಲ ಇಲಾಖೆಯ ಅಧಿಧೀನ ಕಾರ್ಯದರ್ಶಿ ಎಸ್. ಹರ್ಷ ಅದೇಶ ಹೊರಡಿಸಿದ್ದಾರೆ.
ಶಿಸ್ತು ಕ್ರಮಕ್ಕೆ ಗುರಿಯಾದವರುಅನಂತಕುಮಾರ ಚೂರಿ-ಎಇಇ, ವಿನೋದಕುಮಾರ ಗುಪ್ತ-ಎಇಇ, ಎಂ. ಹನುಮಂತಪಪ್ಪ-ಎಇ, ಬಿ. ಶಿವಮೂರ್ತಿ-ಎಇ, ಸೂಗಪ್ಪ ಪ್ರಭಾರ-ಎಇಇ, ವಿ. ತಿಮ್ಮಣ್ಣ-ಎಇ, ಈಶ್ವರ ನಾಯಕ-ಎಇ, ಕೆ. ಶಾಂತರಾಜು-ಎಇ, ಬಸವರಾಜ ಹಳ್ಳಿ-ಎಇ, ಸಿ.ಎಚ್.ಜಿ. ವೆಂಕಟೇಶ್ವರ ರಾವ್-ಎಇ, ಜಿತೇಂದ್ರ-ಎಇ, ರಾಜೀವ್ ನಾಯಕ-ಎಇ, ವಿಶ್ವನಾಥ ಎಚ್.-ಎಇ, ಕೃಷ್ಣಮೂರ್ತಿ ಎಂ.-ಎಇ, ದೇವೇಂದ್ರಪ್ಪ- ಎಇ, ಯಲ್ಲಪ್ಪ-ಎಇ, ರವಿ ಕೆ.ಬಿ-ಜೆಇ, ಜಗನ್ನಾಥ ಕುಲಕರ್ಣಿ-ಜೆಇ, ಕನಕಪ್ಪ-ಜೆಇ, ಅಬ್ದುಲ್ ರಶೀದ್‌ಖಾನ್-ಜೆಇ, ಗಜಾನನ-ಜೆಇ, ಮೋಹನ್‌ಕುಮಾರ-ಜೆಇ, ಎಚ್.ಡಿ. ನಾಯಕ-ಜೆಇ, ಮಲ್ಲಪ್ಪ ನಾಗಪ್ಪ-ಜೆಇ, ಮಹಿಮೂದ-ಎಸ್‌ಡಿಎ,ನಾಗರಾಜ-ಎಸ್‌ಡಿಎ, ಆರೀಫ್ ಹುಸೇನ್-ಎಸ್‌ಡಿಎ,ಅಬ್ದುಲ್ ಹಕ್-ಅನುರೇಖಕಾರರು, ಸಿದ್ದಯ್ಯ-ಕೆಲಸ ಸಹಾಯಕ (ನಿವೃತ್ತ),
ಟಿ. ವೆಂಕಟೇಶ-ಇಇ (ನಿವೃತ್ತ), ಎಸ್.ಇ. ನಿಂಗಪ್ಪ-ಎಇ, ಬಿ.ಎ.ಪಾಂಡುರಂಗ-ಇಇ (ನಿವೃತ್ತ), ಓಂಪ್ರಕಾಶ-ಎಇಇ (ನಿವೃತ್ತ), ಬಿ.ಟಿ. ಷಡಕ್ಷರಯ್ಯ-ಎಇ (ನಿವೃತ್ತ),ವಿ. ಕಲ್ಲಪ್ಪ-ಇಇ (ನಿವೃತ್ತ), ಪಿ.ಎನ್.ಬಸವರಾಜ-ಜೆಇ (ನಿವೃತ್ತ), ಸದಾಶಿವ-ಎಇಇ (ನಿವೃತ್ತ), ಭೋಜನಾಯಕ ಕಟ್ಟಿಮನಿ-ಎಸ್‌ಇ (ನಿವೃತ್ತ),ಆರ್. ಕುಮಾರಸ್ವಾಮಿ- ಎಇಇ (ನಿವೃತ್ತ), ಜಿ. ಹನುಮಂತಪ್ಪ-ಇಇ (ನಿವೃತ್ತ), ಕೆ.ವೀರಸಿಂಗ್ ನಾಯಕ-ಇಇ (ನಿವೃತ್ತ), ಎಂ.ರಾಮಪ್ರಸಾದ-ಎಇಇ (ನಿವೃತ್ತ), ಆಂಜನೇಯ-ಎಇ (ನಿವೃತ್ತ), ಮಾರಪ್ಪ-ಎಸ್‌ಡಿಎ (ನಿವೃತ್ತ), ಕೆ.ಹನುಮಂತಪ್ಪ-ಎಇ (ನಿವೃತ್ತ) ಹಾಗೂ ಬಿ.ಆರ್. ಮುನೀಶ್-ಎಇಇ (ಮೃತ).