Advertisement
ಠಾಣೆಯ ಪೊಲೀಸ್ ಇನ್‌ಸ್ಪೆಕ್ಟರ್ ಎಚ್.ಮುತ್ತುರಾಜ್, ಪಿಎಸ್‌ಐ ಉಮೇಶ್, ಸಹಾಯಕ ಸಬ್ ಇನ್ ಸ್ಪೆಕ್ಟರ್ ಫೈರೋಜ್ ಖಾನ್ ಮತ್ತು ಮಹೇಶ್ ಮತ್ತು ಹೆಡ್ ಕಾನ್‌ಸ್ಟೆಬಲ್ ಮಂಜುನಾಥ್, ಕಾನ್‌ಸ್ಟೆàಬಲ್ ಬಸವರಾಜ ಅಳ್ಳೊಳ್ಳಿ ಅಮಾನತುಗೊಂಡವರು.
Related Articles
Advertisement
3 ತಿಂಗಳ ಹಿಂದೆಯೇ ದೂರು: ಠಾಣಾಧಿಕಾರಿ ಮುತ್ತುರಾಜ್ ಮತ್ತು ಟೀಮ್ ವಿರುದ್ಧ ಸೆಪ್ಟೆಂಬರ್ ನಲ್ಲೇ ರಾಮಮೂರ್ತಿನಗರ ಠಾಣೆಯ ಕೆಲ ಅಧಿ ಕಾರಿ-ಸಿಬ್ಬಂದಿ ಹಿರಿಯ ಅಧಿಕಾರಿಗಳು ಅನಾಮ ಧೇಯ ಪತ್ರ ಬರೆದಿದ್ದರು. ಈ ಪತ್ರದಲ್ಲಿ ಠಾಣಾಧಿಕಾರಿ ಮುತ್ತುರಾಜ್ ಹಾಗೂ ಆತನ ತಂಡ ಎಸಗುತ್ತಿದ್ದ ದೌರ್ಜನ್ಯ, ಭ್ರಷ್ಟಾಚಾರ, ಮಹಿಳಾ ಸಿಬ್ಬಂದಿ ಜತೆ ಅಸಭ್ಯ ವರ್ತನೆ ಬಗ್ಗೆ ಉಲ್ಲೇಖೀಸಿ ದೂರು ನೀಡಿದ್ದರು.
ಪೊಲೀಸರ ವಿರುದ್ಧ ಆರೋಪಗಳೇನು?
ಪ್ರಕರಣ 1:
ಇದೇ ವರ್ಷ ಜೂ.30 ರ ಮಧ್ಯರಾತ್ರಿ ರಾಮಮೂರ್ತಿ ಪೊಲೀಸ್ ಠಾಣಾ ವ್ಯಾಪ್ತಿಯ ಭಗಿನಿ ಬಾರ್ ಆ್ಯಂಡ್ ರೆಸ್ಟೋರೆಂಟ್ ಬಳಿ ಕಾನ್‌ಸ್ಟೇಬಲ್‌ಗಳಾದ ಹುಸೇನ್ ಸಾಬ ಗುಳೇದಗುಡ್ಡ ಮತ್ತು ಅನಿಲ್ ಕುಮಾರ್ ಮೇಲೆ ಹಲ್ಲೆ ಮಾಡಿದ ಆರೋಪಿಗಳಾದ ವಿಷ್ಣು, ದೀಪು, ಕಿಶೋರಕುಮಾರ್ ಮತ್ತು ಸಂದೀಪ ಕುಮಾರ ವಿರುದ್ಧ ಪ್ರಕರಣ ದಾಖಲಿಸದೇ, ತಮ್ಮ ಅಧೀನ ಸಿಬ್ಬಂದಿ ಮೂಲಕ ಹಣ ಪಡೆದು ಬಿಡುಗಡೆ ಮಾಡಿದ ಆರೋಪ ಮುತ್ತರಾಜ್ ಮತ್ತು ಪಿಎಸ್‌ಐ ಮಹೇಶ್ ಮೇಲಿದೆ. ಅಲ್ಲದೇ ಕಾನ್‌ಸ್ಟೆàಬಲ್ ಬಸವರಾಜ ಆಳ್ಳೊಳ್ಳಿ ಆರೋಪಿಗಳಿಂದ 2.2 ಲಕ್ಷ ರೂ. ಪಡೆದಿದ್ದರು.
ಪ್ರಕರಣ 2: ಕೊಲೆ ಆರೋಪಿ ಗೌರವ್ ಎಂಬಾತನನ್ನು ಠಾಣಾಧಿಕಾರಿ ಮುತ್ತರಾಜ್ ಬಂಧಿಸದೇ ಆತನ ವಿರುದ್ಧ ಯಾವುದೇ ತನಿಖೆ ಕೈಗೊಳ್ಳದೆ ಮೇಲಧಿಕಾರಿಗಳಿಂದ ನಿಯಮಾನುಸಾರ ಪೂರ್ವಾನುಮತಿಯನ್ನು ಪಡೆಯದೆ, ದೋಷಾರೋಪಣಾ ಪಟ್ಟಿಯಲ್ಲಿ ಆರೋಪಿ ಗೌರವ್ ಹೆಸರನ್ನು ಕೈಬಿಟ್ಟಿದ್ದರು. ಈತನಿಂದಲೂ ಮುತ್ತುರಾಜ್ ಲಕ್ಷಾಂತರ ರೂ. ಪಡೆದುಕೊಡಿದ್ದಾರೆ.
ಪ್ರಕರಣ 3: ಇದೇ ವರ್ಷ ಜುಲೈ 28 ರ ರಾತ್ರಿ ಹೆಡ್ ಕಾನ್‌ಸ್ಟೇಬಲ್ ಈರಯ್ಯ ಹಿರೇಮಠ ಡ್ರಗ್ ಪೆಡ್ಲರ್ ಟೋನಿ ಅಲಿಯಾಸ್ ಆಂಟೋನಿ ಎಂಬಾತನನ್ನು ವಶಕ್ಕೆ ಪಡೆದು ಆತನ ಬಳಿ ಇದ್ದ 4 ಮಾದಕ ಮಾತ್ರೆ, ಒಂದು ಚಾಕು, 22 ಸಾವಿರ ರೂ.ನಗದು ಮತ್ತು ಮೊಬೈಲ್ ಇತ್ಯಾದಿ ಸಾಕ್ಷ್ಯಾಧಾರಗಳ ಸಮೇತ ಆರೋಪಿಯನ್ನು ಠಾಣೆಗೆ ತಂದು ಹಾಜರುಪಡಿಸಿದರೂ, ಯಾವುದೇ ಕಾನೂನು ಕ್ರಮ ಕೈಗೊಳ್ಳದೆ ಬಿಡಗಡೆ ಮಾಡಿದ್ದರು. ಇದೇ ಪ್ರಕರಣದಲ್ಲಿ ಆರೋಪಿಯನ್ನು ಸರಿಯಾಗಿ ವಿಚಾರಣೆ ಮಾಡದೆ ಆತ ಮುಗ್ಧನಾಗಿದ್ದಾನೆ ಎಂದು ಇನ್‌ಸ್ಪೆಕ್ಟರ್‌ಗೆ ಹೇಳಿ ಆರೋಪಿ ವಿರುದ್ಧ ಯಾವುದೇ ಕಾನೂನು ಕ್ರಮ ಜರುಗಿಸದೇ ಆತನನ್ನು ಬಿಡುಗಡೆ ಮಾಡಿಸುವಲ್ಲಿ ಎಎಸ್‌ಐ ಫೈರೋಜ್ ಖಾನ್, ಮಹೇಶ್, ಮಂಜುನಾಥ್ ಸಫಲರಾಗಿದ್ದರು. ಜತೆಗೆ ಆರೋಪಿಯನ್ನು ಬಿಡುಗಡೆ ಮಾಡಿದ್ದ ಬಗ್ಗೆ ಠಾಣೆಯ ದಾಖಲಾತಿಗಳಲ್ಲಿ ನಮೂದಿಸಿರಲಿಲ್ಲ.